twitter
    For Quick Alerts
    ALLOW NOTIFICATIONS  
    For Daily Alerts

    IAS ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಉಚಿತ ಕೋಚಿಂಗ್ ನೀಡಲು ಮುಂದಾದ ಸೋನು ಸೂದ್

    |

    ನಟ ಸೋನು ಸೂದ್ ಒಂದಲ್ಲ ಒಂದು ಒಳ್ಳೆಯ ಕೆಲಸದ ಮೂಲಕ ಆಗಾಗ ಸುದ್ದಿಗೆ ಒಳಗಾಗುತ್ತಲೇ ಇರುತ್ತಾರೆ. ಕೊರೋನಾವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ಜನರಿಗೆ ಆಹಾರದ ವ್ಯವಸ್ಥೆ, ಧನಸಹಾಯ ಮತ್ತು ತಮ್ಮ ತಮ್ಮ ಊರುಗಳಿಗೆ ತಲುಪಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಿದ್ದ ಸೋನು ಸೂದ್ ಇದೀಗ ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಉಚಿತ ಆನ್ ಲೈನ್ ಕೋಚಿಂಗ್ ನೀಡಲು ಮುಂದಾಗಿದ್ದಾರೆ.

    ಹೌದು, ಕೊನೆಯ ವರ್ಷವೂ ಈ ಅತ್ಯುತ್ತಮ ಕೆಲಸವನ್ನು ನಿರ್ವಹಿಸಿ ಯಶಸ್ಸನ್ನು ಕಂಡಿದ್ದ ಸೋನು ಸೂದ್ ಚಾರಿಟಿ ಫೌಂಡೇಶನ್ 2022-23ನೇ ಸಾಲಿನ ಐಎಎಸ್ ಆಕಾಂಕ್ಷಿಗಳಿಗೆ ಉಚಿತ ಆನ್ ಲೈನ್ ಕೋಚಿಂಗ್ ನೀಡಲಿದೆ. ಡಿವೈನ್ ಇಂಡಿಯಾ ಯೂತ್ ಅಸೋಸಿಯೇಷನ್ ಜತೆ ಕೈಜೋಡಿಸಿರುವ ಸೋನು ಸೂದ್ ಚಾರಿಟಿ ಫೌಂಡೇಶನ್ ಸಂಭವಂ ವಿದ್ಯಾರ್ಥಿವೇತನ ಯೋಜನೆಯಡಿ ಈ ಮಹತ್ಕಾರ್ಯವನ್ನು ನಿರ್ವಹಿಸಲಿದೆ.

    Bigg Boss Kannada OTT : ನಾವೇನು ನಿನ್ನ ಗುಲಾಮರಲ್ಲ ಎಂದು ಸೋನು ವಿರುದ್ಧ ರೊಚ್ಚಿಗೆದ್ದ ಸಾನ್ಯಾBigg Boss Kannada OTT : ನಾವೇನು ನಿನ್ನ ಗುಲಾಮರಲ್ಲ ಎಂದು ಸೋನು ವಿರುದ್ಧ ರೊಚ್ಚಿಗೆದ್ದ ಸಾನ್ಯಾ

    ಸಂಭವಂ ವಿದ್ಯಾರ್ಥಿವೇತನ ಎಂಬುವುದು ಐಎಎಸ್ ಆಕಾಂಕ್ಷಿಗಳಿಗಾಗಿ ಯೋಜಿಸಿರುವ ನೂತನ ಯೋಜನೆಯಾಗಿದ್ದು, ಈ ಯೋಜನೆಯಡಿ ಆಯ್ದ ವಿದ್ಯಾರ್ಥಿಗಳು ಉಚಿತ ಆನ್ ಲೈನ್ ತರಬೇತಿಯನ್ನು ದೇಶದ ದೊಡ್ಡ ಸಿವಿಲ್ ಸರ್ವಿಸ್ ಸಂಸ್ಥೆಗಳಿಂದ ಪಡೆದುಕೊಳ್ಳಲಿದ್ದಾರೆ ಹಾಗೂ ಉಚಿತ ವಿಶೇಷ ಮಾರ್ಗದರ್ಶನವನ್ನು ಕೂಡ ಆಕಾಂಕ್ಷಿಗಳು ಪಡೆದುಕೊಳ್ಳಲಿದ್ದಾರೆ.

    Sonu Sood to provide free online coaching facility to IAS aspirants

    ಇನ್ನು ಈ ಸಂಭವಂ ವಿದ್ಯಾರ್ಥಿವೇತನದ ಯೋಜನೆಯಡಿಯಲ್ಲಿ ಹಣಕಾಸಿನ ತೊಂದರೆಯಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸೂದ್ ಚಾರಿಟಿ ಫೌಂಡೇಷನ್ ತೀರ್ಮಾನಿಸಿದೆ. ಈ ಮೂಲಕ ದೇಶದಾದ್ಯಂತ ಇರುವ ಹಣಕಾಸಿನ ತೊಂದರೆಯುಳ್ಳ ಐಎಎಸ್ ಆಕಾಂಕ್ಷಿಗಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.

    "ಸಂಭವಮ್‌ನ ಈ ಅದ್ಭುತ ಉಪಕ್ರಮದಲ್ಲಿ ಸೋನು ಸೂದ್ ಮತ್ತು ಸೂದ್ ಚಾರಿಟಿ ಫೌಂಡೇಶನ್ ನೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ಈ ಉಪಕ್ರಮದ ಮೂಲಕ ನಾವು ಹೆಚ್ಚಿನ ಐಎಎಸ್ ಆಕಾಂಕ್ಷಿಗಳಿಗೆ ಅವರ ಹಿನ್ನೆಲೆಯನ್ನು ಲೆಕ್ಕಿಸದೆ ಪರೀಕ್ಷೆಗೆ ತಯಾರಿ ಮಾಡಲು ಸಹಾಯ ಮಾಡುತ್ತೇವೆ ಎಂದು ಭಾವಿಸುತ್ತೇವೆ ಮತ್ತು ಅವರು ಅದರಲ್ಲಿ ಯಶಸ್ಸು ಗಳಿಸಲು ಉತ್ತಮ ಅವಕಾಶವನ್ನು ಹೊಂದಿರುತ್ತಾರೆ" ಎಂದು ಡಿವೈನ್ ಇಂಡಿಯಾ ಯೂತ್ ಅಸೋಸಿಯೇಷನ್‌ನ ಮನೀಷ್ ಕುಮಾರ್ ಸಿಂಗ್ ತಿಳಿಸಿದರು.

    ಇನ್ನು ಈ ಕುರಿತಾಗಿ ಮಾತನಾಡಿದ ನಟ ಸೋನು ಸೂದ್ "ಎಲ್ಲಾ ಆರ್ಥಿಕ ಹಿನ್ನೆಲೆಯ ಐಎಎಸ್ ಆಕಾಂಕ್ಷಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ಮತ್ತು ಜ್ಞಾನದಿಂದ ಅವರನ್ನು ಸಬಲೀಕರಣಗೊಳಿಸುವುದು ಗುರಿಯಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಜ್ಞಾನವೇ ಶಕ್ತಿ" ಎಂದರು.

    English summary
    Sonu Sood to provide free online coaching facility to IAS aspirants. Read on
    Monday, September 12, 2022, 11:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X