»   » ಸೌಂದರ್ಯಾ ಸಿನಿ ಪ್ರವೇಶ ಕನ್ನಡದಿಂದಲೇ ಆರಂಭ!

ಸೌಂದರ್ಯಾ ಸಿನಿ ಪ್ರವೇಶ ಕನ್ನಡದಿಂದಲೇ ಆರಂಭ!

Posted By:
Subscribe to Filmibeat Kannada

ಮೊನ್ನೆ ಶುಕ್ರವಾರ, ಜುಲೈ 27, 2012 ರಂದು ತೆರೆಕಂಡ ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್ ಫಾದರ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದವರು ಹಿರಿಯ ತಾರೆ ಜಯಮಾಲಾ ಮಗಳು ಸೌಂದರ್ಯಾ. ಹೆಸರಿಗೆ ತಕ್ಕ ಸೌಂದರ್ಯವಿದೆ ಎಂಬುದು ಚಿತ್ರನೋಡಿದವರ ಅಭಿಪ್ರಾಯ. ಐಎಎಸ್ ಅಧಿಕಾರಿಯಾಗಬೇಕಿದ್ದ ಸೌಂದರ್ಯಾ, ಸಿನಿಮಾ ನಟಿಯಾದ ಕಥೆ ಇಲ್ಲಿದೆ, ಓದಿಕೊಳ್ಳಿ...

ಬಲ್ಲವರು ಹೇಳುವಂತೆ, ತನ್ನ ಮಗಳು ಸಿನಿಮಾ ನಟಿಯಾಗುವುದು ಬೇಡ, ಐಎಎಸ್ ಅಧಿಕಾರಿಯಾಗಿ ಹೆಸರು ಸಂಪಾದಿಸಬೇಕೆಂಬುದು ಜಯಮಾಲಾ ಕಂಡ ಕನಸು. ಆದರೆ ಆ ಕನಸು ನನಸಾಗುವ ಬದಲು ಮಗಳು ಸೌಂದರ್ಯಾ ಕಂಡ ಸಿನಿಮಾ ನಟಿಯಾಗುವ ಕನಸೇ ನನಸಾಗಿದೆ. ಈ ಮೊದಲು ತುಳು, ಮಲಯಾಳಂ ಹಾಗೂ ತೆಲುಗು ಚಿತ್ರರಂಗದಿಂದ ಕರೆ ಬಂದಿದ್ದರೂ ಕನ್ನಡದ ಮೂಲಕವೇ ಪರಿಚಯವಾಗಬೇಕು ಎಂಬುದು ಸೌಂದರ್ಯಾ ಆಸೆ.

ಹೀಗಾಗಿ ಸಾಕಷ್ಟು ಕಾದು, ಕೊನೆಗೆ ಉಪೇಂದ್ರ ನಾಯಕತ್ವದ ಗಾಡ್ ಫಾದರ್ ಚಿತ್ರಕ್ಕೆ ನಾಯಕಿಯಾಗಿ ಬಂದಿದ್ದಾರೆ ಜಯಮಾಲಾ ಮಗಳು ಸೌಂದರ್ಯಾ. ಅವರೇನೂ ಹಾಗೇ ಬಂದಿಲ್ಲ, ಬರುವ ಮೊದಲು ನಟಿಯಾಗಲು ಬೇಕಾದ ಮೂಲ ತಯಾರಿಯನ್ನು ಮಾಡಿಕೊಂಡೇ ಬಂದಿದ್ದಾರೆ. ಮುಂಬೈನಲ್ಲಿ ರೋಶನ್ ತನೇಜಾ ಸಂಸ್ಥೆಯಲ್ಲಿ ಅಭಿನಯದ ತರಬೇತಿ ಪಡೆದುಕೊಂಡಿದ್ದಾರೆ.

ಈಗ ಬಿಡುಗಡೆಯಾಗಿರುವ ಗಾಡ್ ಫಾ್ರ ಚಿತ್ರದ ಬಗ್ಗೆ ಪ್ರೇಕ್ಷಕರು ಹಾಗೂ ವಿಮರ್ಶಕರ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೌಂದರ್ಯಾ ಅಭಿನಯದ ಬಗ್ಗೆಯೂ ಒಳ್ಳೆಯ ಮಾತುಗಳು ಕೇಳಿರುತ್ತಿವೆ. ಅಭಿನಯದಲ್ಲಿ ಇನ್ನೂ ಸಾಕಷ್ಟು ಮಾಗಬೇಕು ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಮೊದಲ ಚಿತ್ರವಾದ್ದರಿಂದ ಸಾಕು ಎಂಬು ಮಾತೂ ಜೊತೆಯಲ್ಲೇ ಬರುತ್ತಿದೆ. ಹೀಗಾಗಿ ಸೌಂದರ್ಯಾ 'ಪಾಸು' ಎಂದು ಹೇಳಬಹುದು.

ನಟಿಸಿದ ಮೊದಲ ಚಿತ್ರದಲ್ಲೇ ಸೌಂದರ್ಯಾ ಬಂಪರ್ ಪಡೆದಿದ್ದಾರೆ. ಎಆರ್ ರೆಹಮಾನ್ ಸಂಗೀತ, ಹೆಸರಾಂತ ಛಾಯಾಗ್ರಾಹಕ ಶ್ರೀರಾಮ್ ನಿರ್ದೇಶನ, ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ, ಹೀಗೆ ಹಲವು ಮಹಾ ಸಂಗಮಗಳ ಚಿತ್ರ ಗಾಡ್ ಫಾದರ್ ನಲ್ಲಿ ಅವಕಾಶ ಗಿಟ್ಟಿಸುವ ಮೂಲಕ ಸೌಂದರ್ಯಾ ಹಲವರ ಹುಬ್ಬೇರಿಸಿದ್ದಾರೆ.

ಮುಂದಿನ ಚಿತ್ರಗಳ ಆಯ್ಕೆಗೆ ತಾಯಿ ಜಯಮಾಲಾ ಮಾರ್ಗದರ್ಶನ ಇರಲಿದೆ ಎಂದಿದ್ದಾರೆ. ಒಳ್ಳೆಯ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ. ಕನ್ನಡ ಚಿತ್ರದ ಮೂಲಕ ತಾರೆಯಾಗುವ ಕನಸು ನನಸಾದ ಖುಷಿಯಲ್ಲಿದ್ದಾರೆ ಈಗ ಸೌಂದರ್ಯಾ. ಹೆಸರಾಂತ ತಾರೆಗಳ ಮಕ್ಕಳ ತಾರಾಪಟ್ಟಿಗೆ ಈಗ ಹೊಸ ಸೇರ್ಪಡೆ ಈ ಸೌಂದರ್ಯಾ ಜಯಮಾಲಾ. (ಒನ್ ಇಂಡಿಯಾ ಕನ್ನಡ)

English summary
Actress Soundarya Jayamala debut in the recent released Upendra's movie 'God Father'. This movie is Tamil Varalaru Remake and famous cameraman PC Sriram directed this. Senior actress Jayamala's daughter Soundarya hit the list of stars family. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada