For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಡ್ರಗ್ಸ್ ನಂಟು: ನಟಿ ರಾಗಿಣಿಗೆ ಸಿಸಿಬಿ ನೊಟೀಸ್

  |

  ಚಿತ್ರರಂಗದ ಕೆಲವು ನಟ-ನಟಿಯರಿಗೆ ಮಾದಕ ವಸ್ತು ಜಾಲದೊಡನೆ ಸಂಪರ್ಕ ಇದೆ ಎಂಬ ಬಗ್ಗೆ ಸಿಸಿಬಿ ತನಿಖೆ ಆರಂಭಿಸಿದ್ದು, ಪ್ರಕರಣವು ದಿನೇ-ದಿನೆ ಜಠಿಲವಾಗುತ್ತಾ ಸಾಗುತ್ತಿದೆ.

  Sandalwood Drug Mafia ಬಗ್ಗೆ Kannada film Chamber ವಿಶೇಷ ಪತ್ರಿಕಾಗೋಷ್ಠಿ | Filmibeat Kannada

  ಇಂದು ಇಬ್ಬರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಅವರಿಂದ ಮಹತ್ವದ ಮಾಹಿತಿ ಹೊರಗೆಡವಿದ್ದಾರೆ.

  ರವಿಶಂಕರ್ ಎಂಬಾತನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಆತ ನಟಿ ರಾಗಿಣಿ ದ್ವಿವೇದಿ ಅವರ ಆಪ್ತ. ಈ ಹಿಂದೆ ರಾಗಿಣಿಗಾಗಿಯೇ ಇದೇ ರವಿಶಂಕರ್ ಹಾಗೂ ನಿರ್ಮಾಪಕರೊಬ್ಬರ ನಡುವೆ ಮಾರಾ-ಮಾರಿ ನಡೆದು ಅದು ಸುದ್ದಿಯಾಗಿತ್ತು.

  ಸಂದೀಪ್ ಪಾಟೀಲ್ ನೇತೃತ್ವದಲ್ಲಿ ವಿಚಾರಣೆ

  ಸಂದೀಪ್ ಪಾಟೀಲ್ ನೇತೃತ್ವದಲ್ಲಿ ವಿಚಾರಣೆ

  ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ರವಿಶಂಕರ್ ಅನ್ನು ವಿಚಾರಣೆ ಒಳಪಡಿಸಿದ್ದು, ಆತನ ಹೇಳಿಕೆ ಮೇರೆಗೆ ನಟಿ ರಾಗಿಣಿಗೆ ಸಿಸಿಬಿ ನೊಟೀಸ್ ನೀಡಲಾಗಿದ್ದು, ನಾಳೆ (ಸೆಪ್ಟೆಂಬರ್ 3) ರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

  ರವಿಶಂಕರ್, ರಾಗಿಣಿಯ ಆಪ್ತ ಸ್ನೇಹಿತ

  ರವಿಶಂಕರ್, ರಾಗಿಣಿಯ ಆಪ್ತ ಸ್ನೇಹಿತ

  ಇದೀಗ ಸಿಸಿಬಿ ವಶದಲ್ಲಿರುವ ರವಿಶಂಕರ್, ನಟಿ ರಾಗಿಣಿ ದ್ವಿವೇದಿಯವರ ಹಳೆಯ ಸ್ನೇಹಿತ. ರಾಗಿಣಿ ಜೊತೆಗೆ ಇನ್ನೂ ಕೆಲವರೊಂದಿಗೆ ರವಿಶಂಕರ್ ಆಪ್ತವಾಗಿದ್ದಾನೆ ಎನ್ನಲಾಗಿದೆ. ವಿಚಾರಣೆ ವೇಳೆ ಮಲಯಾಳಂ ನಟನೊಬ್ಬನ ಹೆಸರನ್ನೂ ರವಿಶಂಕರ್ ಹೇಳಿದ್ದಾನೆ.

  ಇನ್ನೂ ಒಬ್ಬರು ನಟಿಗೆ ನೊಟೀಸ್?

  ಇನ್ನೂ ಒಬ್ಬರು ನಟಿಗೆ ನೊಟೀಸ್?

  ರಾಗಿಣಿ ಮಾತ್ರವಲ್ಲದೆ ಇನ್ನೂ ಒಬ್ಬರು ನಟಿಗೂ ಸಿಸಿಬಿ ನೊಟೀಸ್ ನೀಡಲಿದೆ ಎನ್ನಲಾಗುತ್ತಿದೆ. ನಟಿ ಹಾಗೂ ಆಕೆಯ ಮ್ಯಾನೇಜರ್‌ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಹೇಳಲಿದೆ.

  ಇನ್ನಷ್ಟು ನಟ-ನಟಿಯರಿಗೆ ನೊಟೀಸ್ ಸಾಧ್ಯತೆ

  ಇನ್ನಷ್ಟು ನಟ-ನಟಿಯರಿಗೆ ನೊಟೀಸ್ ಸಾಧ್ಯತೆ

  ರವಿಶಂಕರ್ ನೀಡಿರುವ ಮಾಹಿತಿಯಂತೆಯೇ ಈ ನಟಿಯರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಟ-ನಟಿಯರಿಗೆ ನೊಟೀಸ್ ನೀಡುವ ಸಾಧ್ಯತೆ ಇದೆ.

  English summary
  CCB sent notice to actress Ragini Dwivedi to appear before CCB officers on Thursday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X