For Quick Alerts
  ALLOW NOTIFICATIONS  
  For Daily Alerts

  ಎಸ್ ಪಿ ಬಿ ಕೊನೆಯದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇನು?

  |

  ಕಳೆದ ಒಂದೂವರೆ ತಿಂಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿಗ್ಗಜ ಗಾಯಕ ಎಸ್ ಪಿ ಬಾಲಸುಪ್ರಬ್ರಹ್ಮಣ್ಯಂ ಇಂದು (ಸೆಪ್ಟೆಂಬರ್ 25) ನಿಧನರಾಗಿದ್ದಾರೆ. ಸುಮಾರು 50ಕ್ಕು ಹೆಚ್ಚು ವರ್ಷಗಳಿಂದ ಅದ್ಭುತ ಗಾಯನದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಗಾನ ಗಾರುಡಿಗ ಶಾಶ್ವತವಾಗಿ ಗಾನ ನಿಲ್ಲಿದ್ದಾರೆ.

  ಕೊನೆಯ ಬಾರಿಗೆ ಫೇಸ್ಬುಕ್ ಲೈವ್ ಬಂದ SPB ಹೇಳಿದ್ದೇನು ಗೊತ್ತಾ..? | SPB Last Social media LIVE | Filmibeat

  ಎಸ್ ಪಿ ಬಿ ಇನ್ನಿಲ್ಲ ಎನ್ನುವ ವಿಚಾರವನ್ನು ಕೋಟ್ಯಂತರ ಅಭಿಮಾನಿಗಳಿಗೆ, ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ಸೇರುವ ಕೊನೆಯ ದಿನಗಳವರೆಗೂ ಎಸ್ ಪಿ ಬಿ ಗಾನಸುಧೆಯನ್ನು ಹರಾಸಿದಿದ್ದಾರೆ. ಆಸ್ಪತ್ರೆಗೆ ಸೇರುವ ಮೊದಲು ಖ್ಯಾತ ಗಾಯಕ ಫೇಸ್ ಬುಕ್ ಮೂಲಕ ಕೊರೊನಾ ಪಾಸಿಟಿವ್ ಬಂದ ಬಗ್ಗೆ ಕೊನೆಯದಾಗಿ ಹೇಳಿಕೊಂಡಿದ್ದರು. ಮುಂದೆ ಓದಿ...

  ಆಗಸ್ಟ್ 5ಕ್ಕೆ ಕೊನೆಯ ಪೋಸ್ಟ್

  ಆಗಸ್ಟ್ 5ಕ್ಕೆ ಕೊನೆಯ ಪೋಸ್ಟ್

  ಎಸ್ ಪಿ ಬಿ ಈಗ ನೆನಪು ಮಾತ್ರ. ಆದರೆ ಅವರ ಅದ್ಭುತ ಗಾಯನ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತೆ. ಎಸ್ ಪಿ ಬಿ ಕೊನೆಯದಾಗಿ ಆಗಸ್ಟ್ 5 ಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಪಾಸಿಟಿವ್ ಬಂದ ಬಗ್ಗೆ ಹೇಳಿಕೊಂಡಿದ್ದರು. ಅದೇ ಕೊನೆಯ ಮಾತು. ಆ ನಂತರ ಎಸ್ ಪಿ ಬಿ ಮತ್ತೆ ಕಾಣಿಸಿಕೊಂಡಿಲ್ಲ.

  ಫಲಿಸಲಿಲ್ಲ ಪ್ರಾರ್ಥನೆ, ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನ

  ಎಸ್ ಪಿ ಬಿ ಹೇಳಿದ್ದೇನು?

  ಎಸ್ ಪಿ ಬಿ ಹೇಳಿದ್ದೇನು?

  ಗಾಯಕರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಎದೆ ನೋವು ನನಗೆ ಕಾಣಿಸಿಕೊಂಡಿತು. ನಂತರ ಶೀತ ಹಾಗೂ ಜ್ವರ ಕಾಣಿಸಿಕೊಂಡಿತು. ಅದನ್ನು ಉಡಾಫೆ ಮಾಡದೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡೆ, ವರದಿಯಲ್ಲಿ ಪಾಸಿಟಿವ್ ಇರುವುದು ಗೊತ್ತಾಯಿತು, ಕುಟುಂಬದವರ ಒತ್ತಾಯದಂತೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿದ್ದಾರೆ.

  ಯಾರು ಕರೆ ಮಾಡಬೇಡಿ ಎಂದಿದ್ದ ದಿಗ್ಗಜ ಗಾಯಕ

  ಯಾರು ಕರೆ ಮಾಡಬೇಡಿ ಎಂದಿದ್ದ ದಿಗ್ಗಜ ಗಾಯಕ

  ನನ್ನ ಸ್ನೇಹಿತರೆಲ್ಲಾ ಕರೆ ಮಾಡುತ್ತಿದ್ದಾರೆ. ಆದರೆ ಯಾರೂ ಕರೆ ಮಾಡುವುದು ಬೇಡ. ನಾನು ಆರಾಮಾಗುತ್ತೇನೆ, ಹಾಗಾಗಿ ಆಸ್ಪತ್ರೆಗೆ ಬಂದಿದ್ದೇನೆ. ಆರೋಗ್ಯದ ಕಡೆ ಗಮನ ಕೊಡಲೆಂದು ಇಲ್ಲಿಗೆ ಬಂದಿದ್ದೇನೆ. ಎಲ್ಲರ ಕರೆಗಳನ್ನು ಸ್ವೀಕರಿಸಲು ನನಗೆ ಸಾಧ್ಯವಾಗದೇ ಇರಬಹುದು. ನಾನು ಇನ್ನೆರಡು ದಿನಗಳಲ್ಲಿ ಆರೋಗ್ಯವಾಗುತ್ತೇನೆ ಎಂದು ಎಸ್‌ಪಿಬಿ ಹೇಳಿದ್ದರು.

  50 ಸಾವಿರಕ್ಕು ಅಧಿಕ ಹಾಡು

  50 ಸಾವಿರಕ್ಕು ಅಧಿಕ ಹಾಡು

  ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆ ಸೇರಿದಂತೆ ಸುಮಾರು 16 ಭಾಷೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್‌ಪಿಬಿ ಹಾಡಿದ್ದಾರೆ. ಅತಿ ಹೆಚ್ಚು ಹಾಡಿಗೆ ಧ್ವನಿಯಾಗಿದ್ದ ಎಸ್‌ಪಿಬಿ ಅವರು ಗಿನ್ನಿಸ್ ದಾಖಲೆಗೆ ಸಹ ಪಾತ್ರರಾಗಿದ್ದಾರೆ.

  English summary
  SP Balasubramanyam Passes Away: sp balasubrahmanyam last post on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X