»   » 'ಕೆಂಪೇಗೌಡ-2' ಮೂಲಕ ಕನ್ನಡಕ್ಕೆ ಬಂದ ಶ್ರೀಶಾಂತ್.!

'ಕೆಂಪೇಗೌಡ-2' ಮೂಲಕ ಕನ್ನಡಕ್ಕೆ ಬಂದ ಶ್ರೀಶಾಂತ್.!

Posted By:
Subscribe to Filmibeat Kannada

ಕ್ರಿಕೆಟ್ ಸ್ಟೇಡಿಯಂನಲ್ಲಿ ಆಟಕ್ಕಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಸರುವಾಸಿ ಆಗಿದ್ದ ಶ್ರೀಶಾಂತ್ ಬಣ್ಣದ ಲೋಕಕ್ಕೆ ಲಗ್ಗೆ ಇಟ್ಟಾಗಿದೆ. ಅದಾಗಲೇ, ಮಾಲಿವುಡ್ ನಲ್ಲಿ ಬೆಳ್ಳಿಪರದೆ ಮೇಲೆ ಮಿನುಗಿರುವ ಶ್ರೀಶಾಂತ್ ಇದೀಗ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ.

ಕನ್ನಡದ 'ಕೆಂಪೇಗೌಡ-2' ಚಿತ್ರದ ಪಾತ್ರವೊಂದಕ್ಕಾಗಿ ಶ್ರೀಶಾಂತ್ ಗಾಂಧಿನಗರಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಇದೀಗ ಇದೇ ಸುದ್ದಿ ನಿಜವಾಗಿದೆ. ಸ್ಯಾಂಡಲ್ ವುಡ್ ಗೆ ಶ್ರೀಶಾಂತ್ ಎಂಟ್ರಿ ಕೊಡುವುದು ಪಕ್ಕಾ ಆಗಿದೆ.

ಕನ್ನಡದ 'ಕೆಂಪೇಗೌಡ' ನೊಂದಿಗೆ ಕಾಣಿಸಿಕೊಳ್ಳಲಿರುವ ಶ್ರೀಶಾಂತ್.!

Sreesanth makes Sandalwood Debut with Kempegowda 2

ಮುಖ್ಯಭೂಮಿಕೆಯಲ್ಲಿ ಕೋಮಲ್ ಅಭಿನಯಿಸುತ್ತಿರುವ 'ಕೆಂಪೇಗೌಡ-2' ಚಿತ್ರದಲ್ಲಿ ಶ್ರೀಶಾಂತ್ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಶ್ರೀಶಾಂತ್ ರವರ ಪಾತ್ರದ ಕುರಿತ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

'ಕೆಂಪೇಗೌಡ-2' ಟ್ರೈಲರ್ ರಿಲೀಸ್: ಸುದೀಪ್ ಫ್ಯಾನ್ಸ್ ಗೆ ಶಾಕ್!

'ಕೆಂಪೇಗೌಡ-2' ಚಿತ್ರದ ಮೂಲಕ ನಿರ್ಮಾಪಕ ಶಂಕರೇ ಗೌಡ ನಿರ್ದೇಶಕರಾಗಲಿದ್ದಾರೆ. ನಿರ್ದೇಶನದ ಜೊತೆಗೆ 'ಕೆಂಪೇಗೌಡ-2' ಚಿತ್ರಕ್ಕೆ ಶಂಕರೇ ಗೌಡ ಬಂಡವಾಳ ಕೂಡ ಹಾಕಲಿದ್ದಾರೆ.

English summary
Sreesanth makes Sandalwood Debut with Kempegowda 2

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada