ಕಿಕಿ ಡ್ಯಾನ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ರೋರಿಂಗ್ ಸ್ಟಾರ್
Recommended Video

ಎಲ್ಲೆಡೆ ವೈರಲ್ ಆಗಿರುವ ಕಿಕಿ ಡ್ಯಾನ್ಸ್ ಅಪಾಯಕಾರಿ ಎನ್ನುವುದು ತಿಳಿದಿದ್ದರೂ ಕೂಡ ಕೆಲವು ಸ್ಯಾಂಡಲ್ ವುಡ್ ಸ್ಟಾರ್ ಗಳು ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ. ನಿನ್ನೆಯಷ್ಟೇ ಕಿಕಿ ಹಾಡಿಗೆ ನೃತ್ಯ ಮಾಡಿದ್ದ ಬಿಗ್ ಬಾಸ್ ನಿವೇದಿತಾ ಗೌಡ ವಿರುದ್ಧ ಹಲವಾರು ಸಂಘಟನೆಯವರು ದೂರು ದಾಖಲು ಮಾಡಿದ್ದರು.
ಈ ಬೆಳವಣಿಗೆ ಆದ ಬೆನ್ನಲ್ಲೇ ನಟ ಜೈಜಗದೀಶ್ ಅವರ ಪುತ್ರಿಯರು ಕಿಕಿ ಡ್ಯಾನ್ಸ್ ಗೆ ನೃತ್ಯ ಮಾಡಿದ್ದಾರೆ. ವೈನಿಧಿ ಮತ್ತು ವೈಸಿರಿ ಇಬ್ಬರು ಸೇರಿ ಮಾಡಿರುವ ನೃತ್ಯ ಎಲ್ಲೆಡೆ ವೈರಲ್ ಆಗಿದೆ.
ಇದೀಗ ಕಿಕಿ ಡ್ಯಾನ್ಸ್ ವಿಚಾರವಾಗಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಪ್ರತಿಕ್ರಿಯೆ ನೀಡಿದ್ದಾರೆ. 'ಅಯೋಗ್ಯ' ಸಿನಿಮಾದ ಸುದ್ದಿಗೋಷ್ಟಿಯಲ್ಲಿ ಶ್ರೀ ಮುರಳಿ ಈ ಬಗ್ಗೆ ಮಾತನಾಡಿದ್ದು, ಕಲೆ ಅನ್ನೋದು ಪ್ರತಿಯೊಬ್ಬರಲ್ಲೂ ಇರುತ್ತೆ, ಆದ್ರೆ ನಾವು ಸೆಲೆಬ್ರಿಟಿಗಳು ಆಗಿದ್ರಿಂದ ನಮ್ಮನ್ನ ಫಾಲೋ ಮಾಡುವವರು ತುಂಬ ಜನ ಇರುತ್ತಾರೆ.

ಹಾಗಾಗಿ ನಾನು ಯಾರಿಗೂ ಡ್ಯಾನ್ಸ್ ಮಾಡಬೇಡಿ ಅಂತ ಹೇಳುವುದಿಲ್ಲ. ಕಾನೂನನ್ನು ಕೈಗೆ ತೆಗೆದುಕೊಳ್ಳದೇ, ಸ್ವಲ್ಪ ಹುಷಾರಾಗಿರಿ ಎನ್ನುವುದನ್ನು ಮಾತ್ರ ಹೇಳುತ್ತೇನೆ ಎಂದಿದ್ದಾರೆ. ಒಟ್ಟಾರೆ, ಕಿಕಿ ಡ್ಯಾನ್ಸ್ ಅದೆಷ್ಟೇ ಅಪಾಯಕಾರಿ ಎನ್ನುವ ವಿಚಾರ ಗೊತ್ತಿದ್ದರೂ ಕೂಡ ಸಮಾಜದ ಬಗ್ಗೆ ಕಾಳಜಿ ವಹಿಸಬೇಕಿರುವ ಕಲಾವಿದರೇ ಈ ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ.


Click it and Unblock the Notifications











