For Quick Alerts
  ALLOW NOTIFICATIONS  
  For Daily Alerts

  ವೀಣಾ ಮಲಿಕ್ ವಿರುದ್ಧ ಶ್ರೀರಾಮ ಸೇನೆ ಪ್ರತಿಭಟನೆ

  By Rajendra
  |

  ಪಾಕಿಸ್ತಾನದ ಹಾಟ್ ತಾರೆ ವೀಣಾ ಮಲಿಕ್ ವಿರುದ್ಧ ಶ್ರೀರಾಮ ಸೇನೆ ಕಾರ್ಯಕರ್ತರು ಸೋಮವಾರ (ಜು.9) ಪ್ರತಿಭಟನೆ ನಡೆಸಿದರು. ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲಿ ಪಾಕಿಸ್ತಾನದ ತಾರೆ ವೀಣಾ ಮಲಿಕ್ ಅಭಿನಯಿಸುತ್ತಿರುವುದು ಶ್ರೀರಾಮ ಸೇನೆ ಕಾರ್ಯಕರ್ತರ ಕಣ್ಣು ಕೆಂಪಗೆ ಮಾಡಿದೆ.

  ಈ ಚಿತ್ರದಲ್ಲಿ ಪಾಕಿಸ್ತಾನಿ ತಾರೆಗೆ ಬದಲಾಗಿ ಯಾರಾದರೂ ಭಾರತೀಯ ತಾರೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು ಎಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಆಗ್ರಹಿಸಿದರು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

  ಭಾರತದಲ್ಲಿ ಬಹಳಷ್ಟು ಪ್ರತಿಭಾನ್ವಿತ ತಾರೆಗಳಿದ್ದಾರೆ. ಅವರಲ್ಲಿ ಯಾರಾದರೂ ಒಬ್ಬರನ್ನು ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಪಾಕಿಸ್ತಾನಿ ತಾರೆಯೊಬ್ಬಳನ್ನು ಹಾಕಿಕೊಂಡಿರುವುದು ಸರಿಯಲ್ಲ ಎಂಬುದು ಅವರೆಲ್ಲರ ವಾದ.

  ಆದರೆ ಅವರ ವಾದಕ್ಕೆ 'ಡರ್ಟಿ ಪಿಕ್ಚರ್' ಚಿತ್ರತಂಡ ಯಾವುದೇ ಸೊಪ್ಪುಹಾಕಿಲ್ಲ. ಇತ್ತೀಚೆಗೆ ವೀಣಾ ಮಲಿಕ್ ಬೆಂಗಳೂರಿನ ಜನನಿಬಿಡ ಮೆಜೆಸ್ಟಿಕ್ ಪ್ರದೇಶಕ್ಕೆ ಬಂದಿಳಿದಾಗ ಅಪಾರ ಜನಸ್ತೋಮ ಜಮಾಯಿಸಿತ್ತು. 'ಡರ್ಟಿ ಪಿಕ್ಚರ್' ಚಿತ್ರೀಕರಣಕ್ಕೆ ಅಡಚಣೆಯುಂಟಾಗಿತ್ತು.

  ಸುಮಾರು 20,000ಕ್ಕೂ ಅಧಿಕ ಮಂದಿ ಜಮಾಯಿಸಿದ ಕಾರಣ ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಶೂಟಿಂಗ್ ಕ್ಯಾನ್ಸಲ್ ಆಯಿತು. ಆದರೂ ವೀಣಾ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದೆ ಧಾರಾಳವಾಗಿ ಹಸ್ತಾಕ್ಷರ ನೀಡಿದರು. ಬಿಂಕ ಬಿಟ್ಟು ಅವರ ಜೊತೆ ಫೋಟೋಗಿಳಿದ್ದರು.

  ಸಿಲ್ಕ್ ಸ್ಮಿತಾ ಜೀವನ ಕತೆಯಾಧಾರಿತ ಚಿತ್ರ ಇದಾಗಿದೆ. ಆಕ್ಷನ್ ಕಟ್ ಹೇಳುತ್ತಿರುವವರು ತ್ರಿಶೂಲ್. ಚಿತ್ರದಲ್ಲಿ ತಮ್ಮದು ವೇಶ್ಯೆಯ ಪಾತ್ರವಲ್ಲ ಎಂದು ವೀಣಾ ಸ್ಪಷ್ಟಪಡಿಸಿದ್ದಾರೆ. ಈ ಭಾರಿ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿರುವವರು ವೆಂಕಟಪ್ಪ. ಈ ಚಿತ್ರಕ್ಕಾಗಿ ವೀಣಾರಿಗೆ ರು.70ರಿಂದ 80 ಲಕ್ಷ ಸಂಭಾವನೆ ಸಂದಾಯವಾಗಿದೆಯಂತೆ. ಅಂದರೆ ನಮ್ಮ ರಮ್ಯಾ, ರಾಗಿಣಿಯರ ಎರಡೂವರೆ ಪಟ್ಟು ಜಾಸ್ತಿ. (ಏಜೆನ್ಸೀಸ್)

  English summary
  The activists of Sri Ram Sena staged a protest against casting of controversial Pakistani actress Veena Malik in the Kannada version of 'The Dirty Picture' movie and demanded her replacement with another Indian actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X