»   » ಮತ್ತಿಬ್ಬರ ಹೆಸರು ಲೀಕ್ ಮಾಡಿದ ಶ್ರೀರೆಡ್ಡಿ.! ಅವರದ್ದು ಅದೇ ಬುದ್ಧಿಯಂತೆ.!

ಮತ್ತಿಬ್ಬರ ಹೆಸರು ಲೀಕ್ ಮಾಡಿದ ಶ್ರೀರೆಡ್ಡಿ.! ಅವರದ್ದು ಅದೇ ಬುದ್ಧಿಯಂತೆ.!

Posted By:
Subscribe to Filmibeat Kannada

ತೆಲುಗು ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ 'ಕಾಸ್ಟಿಂಗ್ ಕೌಚ್' ಚರ್ಚೆ ದಿನೇ ದಿನೇ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಸ್ವತಃ ಕಲಾವಿದರು ಸಂಘ, ಹಿರಿಯ ಕಲಾವಿದರು ಈ ವಿಷ್ಯವನ್ನ ಇಲ್ಲಿಗೆ ಮುಗಿಸೋಣ ಎನ್ನುತ್ತಿದ್ದರು ನಟಿ ಶ್ರೀ ರೆಡ್ಡಿ ಮಾತ್ರ ತನ್ನ ಪ್ರತಿಭಟನೆ, ಹೋರಾಟವನ್ನ ಮುಂದುವರೆಸುತ್ತಲೇ ಇದ್ದಾರೆ.

ಖ್ಯಾತ ನಟ ರಾಣಾ ಸಹೋದರ ಅಭಿರಾಮ್ ಜೊತೆಗಿನ ಖಾಸಗಿ ಫೋಟೋ ಬಿಡುಗಡೆ ಮಾಡಿ ದೊಡ್ಡ ಸಂಚಲನ ಸೃಷ್ಟಿದ್ದರು. ಇದಾದ ಬಳಿಕ ಬರಹಗಾರ ಕೋನ ವೆಂಕಟ್ ಅವರು ಕಳುಹಿಸಿರುವ ವಾಟ್ಸಾಪ್ ಸಂಭಾಷಣೆ ಲೀಕ್ ಮಾಡಿದ್ದರು. ಅದಾದ ನಂತರ ನಿರ್ಮಾಪಕ ವಾಕಡಾ ಅಪ್ಪಾರಾವ್ ಬಗ್ಗೆ ಹೇಳಿಕೆ ನೀಡಿದರು.

ಎಲ್ಲರನ್ನ ಬಿಟ್ಟು ಕೊನೆಗೆ ಪವನ್ ಕಲ್ಯಾಣ್ ಬಳಿ ಬಂದ ಶ್ರೀರೆಡ್ಡಿ

ಇಷ್ಟೆಲ್ಲಾ ದೊಡ್ಡ ದೊಡ್ಡ ಹೆಸರುಗಳನ್ನ ಬಹಿರಂಗಪಡಿಸುತ್ತಿರುವ ನಟಿ ಈಗ ಮತ್ತಿಬ್ಬರು ಯುವ ಕಲಾವಿದರ ವಿರುದ್ಧ ಕಿಡಿಕಾರಿದ್ದಾರೆ. ಯುವ ಗಾಯಕನ ವಿರುದ್ಧ ಕಾಮೆಂಟ್ ಮಾಡಿದ್ದಾರೆ. ಯಾರದು.? ಏನು ಈ ಆರೋಪ.? ಮುಂದೆ ಓದಿ.....

ಗಾಯಕ ಶ್ರೀರಾಮ್ ಅವರದ್ದು ಅದೇ ಬುದ್ಧಿ

ತೆಲುಗಿನ ಯುವ ಗಾಯಕ ಶ್ರೀರಾಮ್ ಅವರ ವ್ಯಕ್ತಿತ್ವದ ಬಗ್ಗೆ ಶ್ರೀರೆಡ್ಡಿ ಕಾಮೆಂಟ್ ಮಾಡಿದ್ದಾರೆ. ''ನೋಡಲು ಅಮಾಯಕನ ರೀತಿಯಲ್ಲಿ ಇರುವ ಶ್ರೀರಾಮ್ ಅವರದ್ದು ಅದೇ ಬುದ್ದಿ. ಅವರಲ್ಲಿರುವ ಟ್ಯಾಲೆಂಟ್ ನೋಡಿ ಎಲ್ಲರೂ ವೋಟ್ ಮಾಡಿ ಇಂಡಿಯನ್ ಐಡಿಯಲ್ ಮಾಡಿದ್ದು. ಆದ್ರೆ, ಅವನ ಬುದ್ಧಿ ಕೂಡ ಅದೇ'' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಯೂಟ್ಯೂಬ್ ಸ್ಟಾರ್ ವೈವಾ ಹರ್ಷ ಕಥೆಯೂ ಅದೇ.!

ಯೂಟ್ಯೂಬ್ ಸ್ಟಾರ್ ಅಂತಾನೆ ಗುರುತಿಸಿಕೊಂಡಿರುವ ವೈವಾ ಹರ್ಷ ಅವರ ಬಗ್ಗೆಯೂ ಶ್ರೀರೆಡ್ಡಿ ಕಿಡಿಕಾರಿದ್ದಾರೆ. ''ನಾವು ನಟಿಯಾಗಿ ಅಭಿನಯಿಸಿ, ಮತ್ತೆ ಕಿರುಚಿತ್ರಗಳಲ್ಲಿ ಅಭಿನಯಿಸುತ್ತೇವೆ ಎಂದರೆ ಅದು ನಮ್ಮ ಕೆಲಸದ ಮೇಲೆ ಇರುವ ಶ್ರದ್ಧೆ. ಆದ್ರೆ, ಅವನು ಕೂಡ ಬುದ್ದಿಯಿಲ್ಲದೇ ರೀತಿಯಲ್ಲಿ ಮಾತನಾಡುತ್ತಾನೆ. ಸಿನಿಮಾದಲ್ಲಿ ಮಾತ್ರವಲ್ಲ, ಇಂತಹ ಕಡೆಗಳಲ್ಲಿಯೂ ಕ್ರೂರಿಗಳಿದ್ದಾರೆ'' ಎಂದಿದ್ದಾರೆ.

'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ಚಿರಂಜೀವಿಗೆ ಎಚ್ಚರಿಕೆ ನೀಡಿದ ಶ್ರೀರೆಡ್ಡಿ

ನಿಷೇಧ

ತೆಲುಗು ಚಿತ್ರರಂಗದ ಮೇಲೆ ಆರೋಪಗಳ ಸುರಿಮಳೆ ಮಾಡುತ್ತಿರುವ ನಟಿಯನ್ನ ತೆಲುಗು ಕಲಾವಿದರ ಸಂಘ ನಿಷೇಧ ಮಾಡಿತ್ತು. ಯಾವ ಸಿನಿಮಾಗಳಲ್ಲಿಯೂ ಶ್ರೀರೆಡ್ಡಿಯನ್ನ ಹಾಕಿಕೊಳ್ಳುವಂತಿಲ್ಲ ಎಂದು ತೀರ್ಮಾನಕ್ಕೆ ಬಂದಿತ್ತು. ಆದ್ರೀಗ, ಶ್ರೀರೆಡ್ಡಿ ಮೇಲಿದ್ದ ನಿಷೇಧವನ್ನ ತೆರೆವುಗೊಳಿಸಲಾಗಿದೆ.

ಶ್ರೀರೆಡ್ಡಿ ಸಂಚಲನ: ಮತ್ತೊಬ್ಬ ದೊಡ್ಡ ವ್ಯಕ್ತಿಯ ಹೆಸರು ಬಯಲುಗೆಳೆದ ನಟಿ

ಚಿರು-ಪವನ ಕಲ್ಯಾಣ್ ಹೆಸರು ಪ್ರಸ್ತಾಪಿಸಿದ್ದ ನಟಿ

'ಕಾಸ್ಟಿಂಗ್ ಕೌಚ್' ಎಂಬ ಲೋಕದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತೆ. ಇಂತಹವ ಬಗ್ಗೆ ಎಚ್ಚರದಿಂದಿರಿ ಎಂದು ನಟಿ ತಿಳಿಸಿದ್ದರು. ಇನ್ನು ಪವನ್ ಕಲ್ಯಾಣ್ ಅವರಿಂದ ಸಹಾಯ ಬೇಡಿದ ನಟಿ ಇಂತಹವ ಬಗ್ಗೆ ನೀವು ಮಾತನಾಡಿ, ನಮ್ಮಂತಹ ಹೆಣ್ಣು ಮಕ್ಕಳ ಬೆಂಬಲಕ್ಕೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದರು.

English summary
Sri Reddy now targets Singer Sri Ram after accusing Suresh Babu's son Abhiram and Kona Venkat's of sexual harassment. now, She apparently Comment on Singer Sri Ram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X