For Quick Alerts
  ALLOW NOTIFICATIONS  
  For Daily Alerts

  ತಾರೆ ಶ್ರೀದೇವಿಗೆ ಕನ್ನಡಿಗನ ಒಲವಿನ ಉಡುಗೊರೆ

  By Rajendra
  |

  ಸಿನೆಮಾ ತಾರೆಗಳನ್ನು ಆರಾಧಿಸುವುದು, ಅವರನ್ನು ಅನುಕರಿಸುವುದು, ಅವರ ಹುಚ್ಚು ಅಭಿಮಾನದಲ್ಲಿ ಮುಳುಗುವುದು ಸರ್ವೇ ಸಾಮಾನ್ಯವಾದ ಸಂಗತಿ. ಆದರೆ ತಮ್ಮ ನೆಚ್ಚಿನ ನಟನಟಿಯರನ್ನು ಭೇಟಿ ಮಾಡುವ ಅವಕಾಶ ಕೂಡಿ ಬರುವುದು ಕಷ್ಟ. ಅದೂ ತಾರೆಗಳ ಜನ್ಮದಿನದಂದಾದರೆ ಇನ್ನೂ ಕಷ್ಟ. ಅದರಲ್ಲೂ ಬಾಲಿವುಡ್ ತಾರೆಯಾದರಂತೂ ಮುಗಿದೇ ಹೋಯಿತು. ಭೇಟಿ ಮಾಡಿ ಶುಭ ಕೋರಿ ಬರಬೇಕೆಂದರೆ ಅದು ಅಸಾಧ್ಯ ಕೆಲಸ.

  ಪ್ರಭಾವಿ ವ್ಯಕ್ತಿಗಳು ಮಾತ್ರ ಹಾಗೆ ಮಾಡಲು ಸಾಧ್ಯ. ಹಾಗೆಂದ ಮಾತ್ರಕ್ಕೆ ಅದೊಂದು ಮಹಾನ್ ಸಾಧನೆಯೆಂದೂ ಪರಿಗಣಿಸಲಾಗುವುದಿಲ್ಲ. ಅದನ್ನು ಪ್ರಮುಖ ಸುದ್ದಿಯಾಗಿ ಪರಿಗಣಿಸುವ ಅವಶ್ಯಕತೆ ಕೂಡ ಇಲ್ಲ. ಆದರೆ ಅಲ್ಲೊಂದು ಭಾವನಾತ್ಮಕ ವಿಶೇಷ ನಡೆದರೆ ಅದನ್ನು ನಾವು ಸಹಜವಾಗಿ ಹಂಚಿಕೊಳ್ಳಬಹುದಷ್ಟೇ.

  ಈಗ ಹಂಚಿಕೊಳ್ಳಬಹುದಾದ ವಿಚಾರವೇನೆಂದರೆ ಕನ್ನಡ ಮೂಲದ ಬಾಲಿವುಡ್ ನಿರ್ದೇಶಕ ಸಂದೀಪ್ ಮಲಾನಿ ಅವರು ಶ್ರೀದೇವಿಯ ಪರಮ ಆರಾಧಕ (ಜಾನ್ ಲೇವ 555 ಚಿತ್ರದ ನಿರ್ದೇಶಕ). ಮುಂಬೈನಲ್ಲಿರುವ ನಟಿ ಶ್ರೀದೇವಿಯ ಸ್ವಗೃಹಕ್ಕೆ ಭೇಟಿ ನೀಡಿ ಆಕೆಯ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿ, ಆಕೆಯ ಮುಖದಲ್ಲಿ ಆನಂದದ ಕಂಬನಿ ಮಿಡಿಯುವಂತೆ ಮಾಡಿದ್ದಾರೆ.

  ಸಂದೀಪ್ ಮಲಾನಿ ಬಾಲ್ಯದಿಂದಲೂ ಶ್ರೀದೇವಿ ಅಭಿಮಾನಿ. ಆಕೆಯ ಹಳೆಯ ಭಾವಚಿತ್ರಗಳ ಸರಮಾಲೆಯನ್ನೇ ನೀಡಿ ಅಚ್ಚರಿಯಾಗುವಂತೆ ಮಾಡಿದ್ದಾರೆ. ಶ್ರೀದೇವಿಯ ಬಾಲ್ಯದ ಹಾಗೂ ಕುಟುಂಬದ ಜೊತೆಗಿರುವ ಅತ್ಯಮೂಲ್ಯ ಚಿತ್ರಗಳ ಜೊತೆಗೆ ಆಕೆಯ ಅಭಿನಯದ ಚಲನಚಿತ್ರಗಳ ಆಯ್ದ ಫೋಟೋಗಳನ್ನು ಕೊಲಾಜ್ ಮಾಡಿ ಜನ್ಮದಿನದಂದು (ಆಗಸ್ಟ್ 13) ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಸ್ವೀಕರಿಸಿ ಸಂತಸ ಪಟ್ಟ ಶ್ರೀದೇವಿ ಟ್ವಿಟ್ಟರ್ರಿನಲ್ಲೂ ಅದನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

  ಅಂದ ಹಾಗೆ ಸಂದೀಪ್ ಮಲಾನಿ ಇತ್ತೀಚೆಗಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಬೆಳೆಯುತ್ತಿರುವ ಯುವ ನಿರ್ದೇಶಕ. ಮಂಗಳೂರು ಮೂಲದ ಈ ನಿರ್ದೇಶಕ ಆದಷ್ಟು ಬೇಗ ಶ್ರೀದೇವಿಯ ಚಿತ್ರವನ್ನೂ ನಿರ್ದೇಶಿಸುವಂತಾಗಲಿ ಎಂದು ಆಶಿಸೋಣ. (ಒನ್ ಇಂಡಿಯಾ ಕನ್ನಡ)

  English summary
  Actress Sridevi who celebrated her birthday on August 13, got a special gift from one of her fan. He is not just an ardent diehard fan of the actress but the director of upcoming romantic musical thriller JANLEVA 555, Sandeep Malani, from Mangalore based director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X