»   » 'ಶ್ರೀಕಂಠ'ನ ಆಡಿಯೋ ಬಿಡುಗಡೆಗೆ ಸಿದ್ದವಾಯ್ತು ವೇದಿಕೆ.!

'ಶ್ರೀಕಂಠ'ನ ಆಡಿಯೋ ಬಿಡುಗಡೆಗೆ ಸಿದ್ದವಾಯ್ತು ವೇದಿಕೆ.!

Posted By:
Subscribe to Filmibeat Kannada

'ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ಅಭಿನಯದ 'ಶ್ರೀಕಂಠ' ಚಿತ್ರದ ಆಡಿಯೋ ಬಿಡುಗಡೆಗೆ ಎಲ್ಲ ಸಿದ್ದತೆ ನಡೆಯುತ್ತಿದ್ದು, ಡಿಸೆಂಬರ್ 17 ರಂದು 'ಶ್ರೀಕಂಠ'ನ ಹಾಡುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

ಮಂಜು ಸ್ವರಾಜ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಶಿವಣ್ಣ ಕಾಮನ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ, ಡಬ್ಬಿಂಗ್ ಕೆಲಸಗಳಲ್ಲಿ ತೊಡಗಿಕೊಂಡಿರುವ ಚಿತ್ರತಂಡ, ಈಗ ಧ್ವನಿ ಸುರಳಿ ಬಿಡುಗಡೆ ಮಾಡುತ್ತಿದೆ.[ಅಂದು ಯಶ್, ಇಂದು ಶಿವಣ್ಣ: ಇಬ್ಬರಿಗೂ 'ನಾಗರಹಾವಿನ' ದ್ವೇಷ.!]

Srikanta Audio Launch On Dec 17th

'ಶ್ರೀಕಂಠ' ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ಇದೇ ಮೊದಲ ಬಾರಿಗೆ ದೊಡ್ಡ ಸ್ಟಾರ್ ನಟನ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ 'ಶ್ರೀಕಂಠ'ನ ಹಾಡುಗಳು ಟ್ರೆಂಡ್ ಕ್ರಿಯೆಟ್ ಮಾಡುವ ನಿರೀಕ್ಷೆಯಿದ್ದು, ಅಜನೀಶ್ ಅವರ ಸಂಗೀತ ಮೇಲೆ ಕೂಡ ಭರವಸೆ ಹುಟ್ಟಿಕೊಂಡಿದೆ.[ಶಿವಣ್ಣನ 'ಕಡಗ ಸ್ಟೈಲ್' ಗೆ ಚಿಕ್ಕವರು, ದೊಡ್ಡವರು, ಎಲ್ಲರೂ ಫಿದಾ ]

ಸದ್ಯ, ಅಜನೀಶ್ ಲೋಕನಾಥ್ ಕಂಪೋಸ್ ಮಾಡಿರುವ 'ಕಿರಿಕ್ ಪಾರ್ಟಿ' ಹಾಡುಗಳು ಸಖತ್ ಸೌಂಡ್ ಮಾಡುತ್ತಿವೆ. ಇದರ ಜೊತೆಗೆ 'ಮಮ್ಮಿ' ಚಿತ್ರಕ್ಕೂ ಅಜನೀಶ್ ಅದ್ಬುತವಾದ ಹಿನ್ನೆಲೆ ಸಂಗೀತ ನೀಡಿದ್ದರು. ಹೀಗಾಗಿ 'ಶ್ರೀಕಂಠ' ಚಿತ್ರದ ಮೇಲೆ ಎಕ್ಸ್ ಪೆಕ್ಟೇಶನ್ ಜಾಸ್ತಿಯಿದೆ.

Srikanta Audio Launch On Dec 17th

ಚಿತ್ರದ ವಿತರಣ ಹಕ್ಕು ಈಗಾಗಲೇ ಖರೀದಿಯಾಗಿದ್ದು, 'ಎನ್ ಎಂ ಎಂಟರ್ ಟೈನ್ಮೆಂಟ್' ಅವರು 'ಶ್ರೀಕಂಠ' ಚಿತ್ರವನ್ನ ಬಿಡುಗಡೆ ಮಾಡಲಿದ್ದಾರೆ. ಈ ಹಿಂದೆ 'ಜಗ್ಗುದಾದ', 'ರಾಮಾ ರಾಮಾ ರೇ' ಚಿತ್ರಗಳನ್ನ 'ಎನ್ ಎಂ ಎಂಟರ್ ಟೈನ್ಮೆಂಟ್' ಅವರು ರಿಲೀಸ್ ಮಾಡಿದ್ದರು.[ಶಿವಣ್ಣನ 'ಶ್ರೀಕಂಠ' ಚಿತ್ರಕ್ಕೆ ಅದ್ದೂರಿ ಮುಹೂರ್ತ]

Srikanta Audio Launch On Dec 17th

ಈಗಾಗಲೇ 'ಶ್ರೀಕಂಠ' ಚಿತ್ರದ ಟೀಸರ್ ಟ್ರೆಂಡ್ ಸೃಷ್ಠಿ ಮಾಡಿದೆ. ಇನ್ನೂ ಇತ್ತೀಚೆಗೆ ಚಿತ್ರೀಕರಣ ಮುಗಿಸಿರುವ ಶಿವಣ್ಣ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ ಜನವರಿ 6 ರಂದು ಕಾಮನ್ ಮ್ಯಾನ್ ಅವತಾರದಲ್ಲಿ ಶಿವರಾಜ್ ಕುಮಾರ್ ಅವರನ್ನ ನೋಡಬಹುದು.

English summary
The Audio launch of Shivarajkumar's upcoming movie Srikanta will take Place on Dec 17th. The Movie Directed by Manju Swaraj and Music Composed by Ajaneesh Lokanath. Read all the details here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada