For Quick Alerts
  ALLOW NOTIFICATIONS  
  For Daily Alerts

  ಮಲ್ಟಿಫ್ಲೆಕ್ಸ್ ಗಳಲ್ಲೂ ಶ್ರೀಮುರಳಿ 'ರಥಾವರ' ದರ್ಬಾರ್..!

  By Suneetha
  |

  ಇವತ್ತು ಸಂಡೆ. ಒಂದೊಳ್ಳೆ ಕನ್ನಡ ಸಿನಿಮಾ ನೋಡ್ಬೇಕು. ಅದ್ರಲ್ಲೂ 'ಉಗ್ರಂ' ಖ್ಯಾತಿಯ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ರಥಾವರ' ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕಿದ್ಯಲ್ಲಾ. ಒಮ್ಮೆ ನೋಡ್ಕೊಂಡ್ ಬರೋಣ ಅಂತ ಪ್ಲಾನ್ ಮಾಡಿ ಟಿಕೆಟ್ ಬುಕ್ ಮಾಡೋ ಭರದಲ್ಲಿ ನೀವಿದ್ರೆ ನಿಮಗೆ ನಿರಾಸೆ ಗ್ಯಾರಂಟಿ.

  ಯಾಕಂದ್ರೆ, ಮಲ್ಟಿಪ್ಲೆಕ್ಸ್ ಗಳಲ್ಲಿ 'ರಥಾವರ' ಚಿತ್ರದ ಇವತ್ತಿನ ಎಲ್ಲಾ ಶೋಗಳು ಬಹುತೇಕ ಬುಕ್ ಆಗಿವೆ. ಅಲ್ಲೊಂದು ಇಲ್ಲೊಂದು ಸೀಟ್ ಗಳು ಒಂದೊಂದು ಶೋಗಳಲ್ಲಿ ಮಾತ್ರ ಪೆಂಡಿಂಗ್ ಇದೆ.[ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]

  ಅಷ್ಟರಮಟ್ಟಿಗೆ 'ರಥಾವರ' ಆರ್ಭಟಿಸುತ್ತಿದ್ದಾನೆ. ಮೂಲಗಳ ಪ್ರಕಾರ, ಎರಡು ದಿನಗಳಲ್ಲಿ 'ರಥಾವರ' ಮಾಡಿರುವ ಕಲೆಕ್ಷನ್ ಬರೋಬ್ಬರಿ 5 ಕೋಟಿ. ಶ್ರೀಮುರಳಿಯ 'ರಥಾವರ' ಈ ಪಾಟಿ ಕಲೆಕ್ಷನ್ ಮಾಡುತ್ತಿರುವುದರಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಶೋಗಳನ್ನ ಹೆಚ್ಚಿಸುವ ಬಗ್ಗೆ ಮಾತುಕತೆ ನಡೆದಿದೆ.

  ಸಿನಿಪೊಲೀಸ್ ಸೇರಿದಂತೆ ಕೆಲ ಮಲ್ಟಿಪ್ಲೆಕ್ಸ್ ಗಳಲ್ಲಿ ಈಗಾಗಲೇ 'ರಥಾವರ' ಚಿತ್ರದ ಪ್ರದರ್ಶನ ದಿನಕ್ಕೆ 10-12 ಬಾರಿ! ಕನ್ನಡ ಚಿತ್ರರಂಗದ ಮಟ್ಟಿಗೆ ಇದು ದಾಖಲೆ.![ಅಬ್ಬರಿಸಿ, ಬೊಬ್ಬಿರಿಯುತ್ತಿರುವ 'ರಥಾವರ'ನ ಬಗ್ಗೆ ವಿಮರ್ಶಕರು ಏನಂದ್ರು?]

  ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳಿಗೆ ಬೆಲೆ ಇಲ್ಲ ಅನ್ನುತ್ತಿದ್ದವರ ಬಾಯಿಗೆ 'ರಥಾವರ' ಬೀಗ ಜಡಿದಿದ್ದಾನೆ. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ರಥಾವರ' ಸಿನಿಮಾ ಶ್ರೀಮುರುಳಿ ವೃತ್ತಿ ಬದುಕಿನಲ್ಲೇ ಬಿಗ್ ಓಪನಿಂಗ್ ಪಡೆದುಕೊಂಡಿದೆ.[ಶ್ರೀಮುರಳಿ 'ರಥಾವರ' ಆರ್ಭಟಕ್ಕೆ ಬಾಕ್ಸ್ ಫೀಸ್ ಉಡೀಸ್!]

  'ರಥಾವರ' ಕಲೆಕ್ಷನ್ ನೋಡಿ ನಿರ್ಮಾಪಕ ಜಯಣ್ಣ ಫುಲ್ ಹ್ಯಾಪಿ ಆಗಿದ್ದಾರೆ. ಉತ್ತಮ ಚಿತ್ರಕ್ಕೆ ಕನ್ನಡ ಪ್ರೇಕ್ಷಕ ಎಂದೂ ಕೈಬಿಡುವುದಿಲ್ಲ ಅನ್ನುವುದಕ್ಕೆ 'ರಥಾವರ' ಉದಾಹರಣೆ ಅನ್ನಬಹುದಲ್ಲವೇ..? ನೀವೇನಂತೀರಾ?.

  English summary
  Srimurali starrer Kannada Movie Rathaavara shows increases in Multiplex. Actor Srimurali, Kannada Actress Rachita Ram, Actor Ravishankar, Actor Saurav Loki in the lead role. The movie is directed by Chandrashekar Bandiyappa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X