For Quick Alerts
  ALLOW NOTIFICATIONS  
  For Daily Alerts

  'ಮಾದೇವ'ನ ಅಂಗಳಕ್ಕೆ ಖಡಕ್​ ವಿಲನ್: ಮರಿ ಟೈಗರ್​ ಎದುರು ಕಿಟ್ಟಿ ಘರ್ಜನೆ

  |

  ಶ್ರೀನಗರ ಕಿಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ. ಯಾವುದೇ ಪಾತ್ರಕ್ಕಾದರೂ ನೂರಕ್ಕೆ ನೂರು ಜೀವ ತುಂಬುವ ಕಲಾವಿದರಾಗಿರುವ ಶ್ರೀನಗರ ಕಿಟ್ಟಿ ತಮ್ಮ ಅದ್ಧುತ ನಟನೆಯ ಮೂಲಕ ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಕಿಟ್ಟಿ ಆರಂಭ ದಿನಗಳಲ್ಲಿ ಚಿತ್ರರಂಗದಲ್ಲಿ ತೆರೆ ಮೇಲೆ ಕಾಣಿಸಿಕೊಂಡಷ್ಟು ಪ್ರಸ್ತುತ ತೆರೆ ಮೇಲೆ ಕಾಣಸಿಗುತ್ತಿಲ್ಲ.

  'ಇಂತಿ ನಿನ್ನ ಪ್ರೀತಿಯ' ಚಿತ್ರದ ಖ್ಯಾತಿ ಗಳಿಸಿದ ನಟರಾದ ಶ್ರೀನಗರ ಕಿಟ್ಟಿ, 'ಮತ್ತೆ ಮುಂಗಾರು', 'ಹುಡುಗರು', 'ಸಂಜು ವೆಡ್ಸ್​ ಗೀತಾ' ಚಿತ್ರಗಳಲ್ಲಿ ನಾಯಕನಾಗಿ ಲವರ್​ ಬಾಯ್​ ಆಗಿ ಕಾಣಿಸಿಕೊಂಡಿದ್ದ ಶ್ರೀನಗರ ಕಿಟ್ಟಿ 'ಬಹುಪರಾಕ್'​ ಚಿತ್ರದಲ್ಲಿ ಎಲ್ಲಾ ಲುಕ್​ನಲ್ಲೂ ಕಾಣಿಸಿಕೊಂಡಿದರು. ಇತ್ತೀಚಿಗೆ ಬೆರಳೆಣಿಕೆಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಿಟ್ಟಿ ವಿಲನ್​ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

  ಇತ್ತೀಚಿಗೆ ತೆರೆ ಕಂಡ ಶರಣ್​ ನಾಯಕ ನಟರಾಗಿ ನಟಿಸಿರುವ 'ಅವತಾರ ಪುರುಷದಲ್ಲಿ' ಶ್ರೀನಗರ ಕಿಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹುದಿನಗಳ ಬಳಿಕ ಶ್ರೀ ನಗರ ಕಿಟ್ಟಿ ಅವರನ್ನು 'ಅವತಾರ ಪುರುಷ' ಮೂಲಕ ತೆರೆ ಮೇಲೆ ಕಂಡ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೇವಲ ವಿಭಿನ್ನ ಪಾತ್ರಗಳನಷ್ಟೇ ಒಪ್ಪಿಕೊಳ್ಳುತ್ತಿರುವ ಶ್ರೀನಗರ ಕಿಟ್ಟಿ ಇದೀಗ ಹೊಸ ಅವತಾರದ ಮೂಲಕ ಮತ್ತೆ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

   ಹೊಸ ಲುಕ್​ನಲ್ಲಿ ಮರಿ ಟೈಗರ್​ಗೆ ಟಕ್ಕರ್​

  ಹೊಸ ಲುಕ್​ನಲ್ಲಿ ಮರಿ ಟೈಗರ್​ಗೆ ಟಕ್ಕರ್​

  ಖಾಕಿ ಚಿತ್ರ ಖ್ಯಾತಿಯ ನವೀನ್​ ರೆಡ್ಡಿ ನಿದೇರ್ಶನದ ಮರಿ ಟೈಗರ್ ವಿನೋದ್​ ಪ್ರಭಾಕರ್​ ನಾಯಕ ನಟನಾಗಿ ನಟಿಸುತ್ತಿರುವ 'ಮಾದೇವ' ಚಿತ್ರ ಈಗಾಗಲೇ ಚಿತ್ರೀಕರಣ ಆರಂಭಿಸಿದೆ. ಕಳೆದ ಎರಡು ತಿಂಗಳಿನಿಂದ 'ಮಾದೇವ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಚಿತ್ರತಂಡದಿಂದ ಹೊಸ ಅಪ್ಡೇಟ್​ವೊಂದು ಹೊರ ಬಿದ್ದಿದೆ. 'ಮಾದೇವ'ನಿಗೆ ಟಕ್ಕರ್​ ಕೊಡಲು ಚಿತ್ರಕ್ಕೆ ವಿಲನ್​ ಎಂಟ್ರಿಯಾಗಿದೆ. ವಿನೋದ್​ ಪ್ರಭಾಕರ್​ ನಟನೆಯ 'ಮಾದೇವ' ಚಿತ್ರಕ್ಕೆ ಶ್ರೀನಗರ ಕಿಟ್ಟಿ ಖಳ ನಾಯಕನಾಗಿ ಚಿತ್ರತಂಡ ಸೇರ್ಪಡೆಗೊಂಡಿದ್ದಾರೆ. ಶ್ರೀನಗರ ಕಿಟ್ಟಿ ಈಗಾಗಲೇ 'ಮಾದೇವ' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಶೂಟಿಂಗ್​ ಭರ್ಜರಿಯಾಗಿ ನಡೆಯುತ್ತಿದೆ. 'ಮಾದೇವ' ಚಿತ್ರದಲ್ಲಿ ಶ್ರೀ ನಗರ ಕಿಟ್ಟಿ ಖಡಕ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಕಿಟ್ಟಿ ವೇಷಭೂಷಣ ನೋಡುಗರಿಗೆ ಭಯಹುಟ್ಟಿಸುವಂತಿದೆ.

   ಮಾದೇವ ಚಿತ್ರಕ್ಕೆ ಸೋನಲ್​ ಮೊಂಥೆರೋ ನಾಯಕಿ

  ಮಾದೇವ ಚಿತ್ರಕ್ಕೆ ಸೋನಲ್​ ಮೊಂಥೆರೋ ನಾಯಕಿ

  'ಮಾದೇವ' ಚಿತ್ರ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು, ಚಿತ್ರದಲ್ಲಿ ವಿನೋದ್​ ಪ್ರಭಾಕರ್ ಅವ​ರಿಗೆ ನಾಯಕಿಯಾಗಿ ಸೋನಲ್​ ಮೊಂಥೆರೋ ಕಾಣಿಸಿಕೊಳ್ಳಲಿದ್ದಾರೆ. ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅಭಿನಯದ 'ರಾರ್ಬಟ್'​ ಚಿತ್ರದಲ್ಲಿ ತನು ಹಾಗೂ ರಾಘವ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ವಿನೋದ್​ ಪ್ರಭಾಕರ್ ಹಾಗೂ ಸೋನಲ್​ ಮೊಂಥೆರೋ ಜೋಡಿ ಈಗ ಮತ್ತೆ ಜೊತೆಯಾಗಿ ತೆರೆ ಹಚ್ಚಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸೋನಲ್​ ಮೊಂಥೆರೋ ಮಧ್ಯಮ ವರ್ಗ ಕುಟುಂಬದ ಯುವತಿ ಪಾತ್ರದಲ್ಲಿ ಕಾಣಿಕೊಳ್ಳಲಿದ್ದಾರೆ.

   ಹಿಂದೆದೂ ಕಾಣದ ಲುಕ್​ನಲ್ಲಿ ಮರಿ ಟೈಗರ್​

  ಹಿಂದೆದೂ ಕಾಣದ ಲುಕ್​ನಲ್ಲಿ ಮರಿ ಟೈಗರ್​

  'ಮಾದೇವ' ಚಿತ್ರದ ಕೆಲ ಪೋಸ್ಟರ್​ಗಳು ಈಗಾಗಲೇ ವೈರಲ್​ ಆಗಿದ್ದು, ಪೋಸ್ಟರ್​ಗಳನ್ನು ನೋಡಿದ ಪ್ರತಿಯೊಬ್ಬರು ಕೂಡ ಇದೊಂದು ಮಾಸ್​ ಸಿನಿಮಾ ಎಂದು ಹೇಳಬಹುದು. 'ಮಾದೇವ' ಚಿತ್ರ ಎಮೋಷನಲ್​ ಹಾಗೂ ಮಾಸ್​ ಎರಡೂ ವಿಷಯ ಹೊಂದಿರುವ ಚಿತ್ರವಾಗಿದೆ. ಇಂದೊಂದು 80ರ ದಶಕದ ಸ್ಫೂರ್ತಿದಾಯಕ ಕಥೆಯಾಗಿದ್ದು, ಹಿಂದೆದೂ ನೋಡಿರದ ಪಾತ್ರದಲ್ಲಿ ವಿಭಿನ್ನವಾಗಿ ವಿನೋದ್​ ಪ್ರಭಾಕರ್​ ಕಾಣಿಸಿಕೊಳ್ಳಲಿದ್ದಾರೆ.

   ಮತ್ತೆ ವಿಭಿನ್ನ ಪಾತ್ರದಲ್ಲಿ ಅಚ್ಯುತ್​ ಕುಮಾರ್​

  ಮತ್ತೆ ವಿಭಿನ್ನ ಪಾತ್ರದಲ್ಲಿ ಅಚ್ಯುತ್​ ಕುಮಾರ್​

  ರೈಲು ಹಾಗೂ ಜೈಲಿನ ಸುತ್ತಮುತ್ತಲೇ 'ಮಾದೇವ' ಚಿತ್ರದ ಕಥೆ ಸುತ್ತಲಿದ್ದು, ಧಾರಾವಾಡ, ಶಿವಮೊಗ್ಗ ಹಾಗೂ ಹೈದರಬಾದ್​ನಲ್ಲಿ ಚಿತ್ರೀಕರಣ ನಡೆಯಲಿದೆ. ವಿನೋದ್​ ಪ್ರಭಾಕರ್​, ಸೋನಲ್​ ಮೊಂಥೆರೋ ಜೊತೆಗೆ ಹಿರಿಯ ನಟಿ ಶ್ರುತಿ,ಅಚ್ಯುತ್​ ಕುಮಾರ್​ ಹಾಗೂ ಕಾಕ್ರೋಚ್​​ ಸುಧಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಾಯತ್ರಿ ಆರ್​ ಹಳಲೆ 'ಮಾದೇವ' ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚಿತ್ರ ಯಾವಾಗ ತೆಗೆ ಕಾಣಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

  English summary
  Sandalwood actor Srinagar Kitty is set to be the antagonist in Vinod Prabhakar,s Maadeva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X