For Quick Alerts
  ALLOW NOTIFICATIONS  
  For Daily Alerts

  ದರ್ಶನ್ ನಂತರ ಕಿಲ್ಲರ್ ವೆಂಕಟೇಶ್ ಚಿಕಿತ್ಸೆಗೆ ಹಣ ಸಹಾಯ ಮಾಡಿದ ಸೃಜನ್

  |

  ಖ್ಯಾತ ಪೋಷಕ ನಟ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಣಕಾಸಿನ ತೊಂದರೆಯಲ್ಲಿರುವ ಅವರಿಗೆ ಚಿತ್ರರಂಗದ ಕೆಲವರು ಸಹಾಯಕ್ಕೆ ಬರುತ್ತಿದ್ದಾರೆ. ಇದೀಗ ನಟ ಸೃಜನ್ ಲೋಕೇಶ್ ಕಿಲ್ಲರ್ ವೆಂಕಟೇಶ್ ರಿಗೆ ಹಣಕಾಸಿನ ನೆರವು ನೀಡಿದ್ದಾರೆ.

  ನಟ ಜಗ್ಗೇಶ್ ಮಂಗಳವಾರ ರಾತ್ರಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಕಿಲ್ಲರ್ ವೆಂಕಟೇಶ್ ಪರಿಸ್ಥಿತಿಯನ್ನು ತಿಳಿಸಿದರು. 250ಕ್ಕೂ ಹೆಚ್ಚು ಸಿನಿಮಾ ಮಾಡಿರುವ ಕಿಲ್ಲರ್ ವೆಂಕಟೇಶ್ ಇಂದು ಚಿಕಿತ್ಸೆಗೂ ಹಣ ಇಲ್ಲದಂತೆ ಇದ್ದಾರೆ ಎಂದು ಭಾವುಕವಾಗಿ ಮಾತನಾಡಿದ್ದರು.

  ಚಿಕಿತ್ಸೆಗೂ ಹಣ ಇಲ್ಲ: ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್ ಹೋರಾಟಚಿಕಿತ್ಸೆಗೂ ಹಣ ಇಲ್ಲ: ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್ ಹೋರಾಟ

  ತಮ್ಮ ಜೊತೆಗೆ ನಟಿಸಿದ್ದ ಈ ಕಲಾವಿದನ ಜೊತೆಗೆ ಮೊದಲು ಜಗ್ಗೇಶ್ ನಿಂತರು. ಆಸ್ಪತ್ರೆಗೆ ಹೋಗಿ, ಕಿಲ್ಲರ್ ವೆಂಕಟೇಶ್ ಆರೋಗ್ಯ ವಿಚಾರಿಸಿದರು. ಕಿಲ್ಲರ್ ವೆಂಕಟೇಶ್ ಬಗ್ಗೆ ಜಗ್ಗೇಶ್ ಮಾಡಿದ ಟ್ವೀಟ್ ನಂತರ, ಅದು ದೊಡ್ಡ ಸುದ್ದಿಯಾಗಿದೆ. ಇದೀಗ ಕಲಾವಿದರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

  50 ಸಾವಿರ ಹಣ ನೀಡಿದ ಸೃಜನ್

  50 ಸಾವಿರ ಹಣ ನೀಡಿದ ಸೃಜನ್

  ನಟ ಸೃಜನ್ ಕಿಲ್ಲರ್ ವೆಂಕಟೇಶ್ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಿದ್ದಾರೆ. 50 ಸಾವಿರ ಹಣವನ್ನು ಕಿಲ್ಲರ್ ವೆಂಕಟೇಶ್ ಖಾತೆಗೆ ಸೃಜನ್ ಖಾತೆಗೆ ಜಮಾ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಜಗ್ಗೇಶ್ ವಿಷಯ ತಿಳಿಸಿದ್ದಾರೆ. ''ಧನ್ಯವಾದಗಳು ಸೃಜನ್ ಲೋಕೇಶ್, ಕಿಲ್ಲರ್ ವೆಂಕಟೇಶ್ ಕಲಾ ಬಂಧುವಿನ ಕಷ್ಟಕ್ಕೆ ಸ್ಪಂದಿಸಿದಕ್ಕೆ. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ.'' ಎಂದು ಜಗ್ಗೇಶ್ ಬರೆದಿದ್ದಾರೆ.

  1 ಲಕ್ಷ ನೀಡಿದ ದರ್ಶನ್

  1 ಲಕ್ಷ ನೀಡಿದ ದರ್ಶನ್

  ನಟ ದರ್ಶನ್ ಸಹ ನಿನ್ನೆ (ಫೆಬ್ರವರಿ 19) ಕಿಲ್ಲರ್ ವೆಂಕಟೇಶ್ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಒಂದು ಲಕ್ಷ ಹಣವನ್ನು ನೀಡಿದ್ದಾರೆ. ಜಗ್ಗೇಶ್ ಕರೆ ಮಾಡಿ ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಬಗ್ಗೆ ಹೇಳಿದ ಒಂದು ಗಂಟೆಯ ಒಳಗೆ ದರ್ಶನ್ ಹಣ ನೀಡಿದ್ದಾರೆ. ಚಿತ್ರರಂಗದ ಪೈಕಿ ದರ್ಶನ್ ಮೊದಲು ಕಿಲ್ಲರ್ ವೆಂಕಟೇಶ್ ಗೆ ಸ್ಪಂದನೆ ನೀಡಿದರು.

  ಜಗ್ಗೇಶ್ ಕರೆ ಮಾಡಿದ 1 ಗಂಟೆಯಲ್ಲಿ ಕಿಲ್ಲರ್ ವೆಂಕಟೇಶ್ ಸಹಾಯಕ್ಕೆ ಬಂದ ಡಿ ಬಾಸ್ಜಗ್ಗೇಶ್ ಕರೆ ಮಾಡಿದ 1 ಗಂಟೆಯಲ್ಲಿ ಕಿಲ್ಲರ್ ವೆಂಕಟೇಶ್ ಸಹಾಯಕ್ಕೆ ಬಂದ ಡಿ ಬಾಸ್

  ಧನ ಸಹಾಯಕ್ಕೆ ಮನವಿ ಮಾಡಿದ ಜಗ್ಗೇಶ್

  ಕಿಲ್ಲರ್ ವೆಂಕಟೇಶ್ ಚಿಕಿತ್ಸೆಯ ಹಣಕ್ಕಾಗಿ ಜಗ್ಗೇಶ್ ಮನವಿ ಮಾಡಿದ್ದಾರೆ. ಕಿಲ್ಲರ್ ವೆಂಕಟೇಶ್ ಬ್ಯಾಂಕ್ ಖಾತೆ ವಿವರವನ್ನು ಹಂಚಿಕೊಂಡಿದ್ದಾರೆ. ''ಮಾಧ್ಯಮಮಿತ್ರರೆ, ಕಲಾಭಿಮಾನಿಗಳೆ ಸಹೃದಯರೆ 35 ವರ್ಷ ಕಲಾ ಸೇವೆ ಮಾಡಿದ ಈ ಕಲಾವಿದನಿಗೆ ಧನಸಹಾಯ ಮಾಡುವ ಮನಸ್ಸು ರಾಯರು ನಿಮಗೆ ನೀಡಿದರೆ ಮಾತ್ರ ಅವನ ಖಾತೆಗೆ ಹಣ ಹಾಕಬಹುದು. ಬಲವಂತವಿಲ್ಲ.. ಯಕೃತ್ ಕಸಿಗೆ ತುಂಬ ದೊಡ್ಡ ಮೊತ್ತ ಆಗತ್ತದೆ ಹಾಗಾಗಿ ವಿನಂತಿ.'' ಎಂದಿದ್ದಾರೆ.

  250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

  250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

  ಕಿಲ್ಲರ್ ವೆಂಕಟೇಶ್ ಒಂದು ಕಾಲದಲ್ಲಿ ಬೇಡಿಕೆಯ ಖಳನಟ ಹಾಗೂ ಪೋಷಕನಟರಾಗಿದ್ದರು. 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 'ರಣಧೀರ' ಸಿನಿಮಾದಲ್ಲಿ ಜಗ್ಗೇಶ್ ಹಾಗೂ ಕಿಲ್ಲರ್ ವೆಂಕಟೇಶ್ ಜೊತೆಗೆ ನಟಿಸಿದ್ದರು. ಆ ನಂತರ ಜಗ್ಗೇಶ್ ಹೀರೋ ಆದರು. ಆದರೆ, ಪೋಷಕ ಪಾತ್ರಗಳಲ್ಲಿಯೇ ವೆಂಕಟೇಶ್ ಉಳಿದುಕೊಂಡರು. ಬರುಬರುತ್ತಾ ಸಿನಿಮಾ ಅವಕಾಶಗಳು ಕಡಿಮೆಯಾಯಿತು. ಈಗ ಯಾವುದೇ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ.

  English summary
  Kannada actor Srujan Lokesh helped killer venkatesh, who hospitalized in health problem.
  Thursday, February 20, 2020, 19:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X