For Quick Alerts
  ALLOW NOTIFICATIONS  
  For Daily Alerts

  ಟೀಸರ್ ನಲ್ಲಿ ಕೌತುಕ ಕೆರಳಿಸಿದ "ದಿ ಲಾಸ್ಟ್ ಕನ್ನಡಿಗ"

  By ರಾಘವೇಂದ್ರ ಸಿ.ವಿ
  |

  ಸದ್ಯ ಸ್ಯಾಂಡಲ್ವುಡ್ ನಲ್ಲಿ ಪ್ರಯೋಗಾತ್ಮಕ ಚಿತ್ರಗಳು ಮತ್ತು ಕಿರುಚಿತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಸದ್ದುಮಾಡುತ್ತಿವೆ. ಆ ವಿಶಿಷ್ಟ ಮತ್ತು ವಿಭಿನ್ನತೆಯ ಪಟ್ಟಿಗೆ ಹೊಸ ಸೇರ್ಪಡೆ ಈಗ ನಾವು ಹೇಳಲು ಹೊರಟಿರುವ ಕಿರುಚಿತ್ರ "ದಿ ಲಾಸ್ಟ್ ಕನ್ನಡಿಗ ".

  ಕನ್ನಡದ ಹೆಸರಾಂತ ನಟರ ಕನ್ನಡ ಪರ ಸಂಭಾಷಣೆಗಳನ್ನು ಸೇರಿಸಿ ತಯಾರಿಸಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ ಮತ್ತು ಸಾಮಾಜಿಕಜಾಲ ತಾಣಗಳಲ್ಲಿ ಒಳ್ಳೆಯ ಪ್ರಶಂಸೆಯ ಪ್ರತಿಕ್ರಿಯೆ ಪಡೆಯುತ್ತಿದೆ.

  ಶೀರ್ಷಿಕೆಯಿಂದಲೇ ಕನ್ನಡ ಸಿನಿರಸಿಕರ ಗಮನ ಸೆಳೆಯುತ್ತಿರುವ ಈ ಕಿರುಚಿತ್ರ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ.

  ರಾಜಾಹುಲಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಗಳಲ್ಲಿನ ಅದ್ಭುತ ನಟನೆಯ ಮೂಲಕ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸರುವ ವಸಿಷ್ಠ ಎನ್ ಸಿಂಹ, ರವಿಕಿರಣ್ ರಾಜೇಂದ್ರನ್ ಮತ್ತು ಹಿರಿಯ ನಟರಾದ ಜಯಪ್ರಕಾಶ್ ಎನ್ ಬಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ .

  ಹಿರಿಯ ಮತ್ತು ಕಿರಿಯ ಕಲಾವಿದರನ್ನು ಒಟ್ಟುಗೂಡಿಸಿ ಈ ಕಿರುಚಿತ್ರವನ್ನು ತಯಾರಿಸಿರುವ ಹೆಗ್ಗಳಿಕೆ ನಿರ್ದೇಶಕ ಮದನ್ ರಾಮ್ ವೆಂಕಟೇಶ್ ಅವರಿಗೆ ಸಲ್ಲಬೇಕು ಮತ್ತು ಬ್ಯೂಟಿಫುಲ್ ಮನಸು "ಶ್ರುತಿ ಹರಿಹರನ್ " ಅವರ ಚೊಚ್ಚಲ ನಿರ್ಮಾಣದ ಈ ಚಿತ್ರ ಕಲಾತ್ಮಿಕ ಬ್ಯಾನರ್ ಅಡಿಯಲ್ಲಿ ಹೊರಬರುತ್ತಿದೆ .

  Shruthi Hariharan's The Last Kannadiga Teaser is out

  ಈ ಗಿಡ್ಡ ಚಿತ್ರಕ್ಕೆ ಅಕ್ಷಯ್ ಪಿ ರಾವ್ ಸಂಕಲನವಿದ್ದು , ಅಭಿಷೇಕ್ ಜಿ ಕಾಸರ್ಗೋಡ್ ಅವರ ಛಾಯಾಗ್ರಹಣವಿದೆ ಮತ್ತು ರಾಘವ್ ಅವರ ಸ್ಟಿಲ್ ಫೋಟೋಗ್ರಫಿ ಇದೆ.

  ಲಾಸ್ಟ್ ಕನ್ನಡಿಗನಿಗೆ ಯಶಸ್ಸು ಸಿಗಲಿ ಮತ್ತು ನಟಿ ಶ್ರುತಿ ಅವರ "ಕಲಾತ್ಮಿಕ " ಸಂಸ್ಥೆಯಿಂದ ಮತ್ತಷ್ಟು ಸದಭಿರುಚಿಯ ಚಿತ್ರಗಳು ಹೊರಬರಲಿ ಕನ್ನಡ ಚಿತ್ರಪ್ರೇಮಿಗಳು ನೋಡುವಂತಾಗಲಿ ಎಂದು ನಾವೆಲ್ಲರೂ ಹಾರೈಸೋಣ..

  English summary
  Kannada Actress Sruthi launched her own production house, Kalaathmika which is producing a short film 'The Last Kannadiga' Madan Venkatesh directorial film has Vasishta N Simha in the lead role. Here is a report on the promising teaser of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X