»   » ಸುದೀಪ್ ಜೊತೆ ನಟಿಸಿದ ನಂತರ ಶ್ರುತಿ ಟ್ವೀಟ್ ಮಾಡಿದ್ದೇನು.?

ಸುದೀಪ್ ಜೊತೆ ನಟಿಸಿದ ನಂತರ ಶ್ರುತಿ ಟ್ವೀಟ್ ಮಾಡಿದ್ದೇನು.?

Posted By:
Subscribe to Filmibeat Kannada
ನನ್ನ ಸೀರಿಯಸ್ ಇಮೇಜ್ ಹಾಳುಮಾಡಬೇಡ ಅಂದ್ರು ಸುದೀಪ್ | Oneindia Kannada

ಕನ್ನಡದ ಮುದ್ದು ಚೆಲುವೆ ಶ್ರುತಿ ಹರಿಹರನ್ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಟಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ನಾಯಕನಾಗಿ ಅಭಿನಯಿಸುತ್ತಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ಜೂನಿಯರ್ ಅಂಬರೀಶ್ ಪಾತ್ರಕ್ಕೆ ಸುದೀಪ್ ಬಣ್ಣ ಹಚ್ಚಿದ್ದಾರೆ.

ಸುದೀಪ್ ಗೆ ಜೋಡಿಯಾಗಿ ಶ್ರುತಿ ಹರಿಹರನ್ ಕಾಣಿಸಿಕೊಂಡಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸಂತಸವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಶ್ರುತಿ ''ಸುದೀಪ್ ಅವರ ಜೊತೆಯಲ್ಲಿ ಅಭಿನಯಿಸಿದ್ದು ನನಗೆ ಖುಷಿ ಕೊಟ್ಟಿದೆ'' ಎಂದು ಟ್ವೀಟ್ ಮಾಡಿದ್ದಾರೆ.

'ಕಿಚ್ಚನ್ ಟೈಂ'ನಿಂದ ಕಿಚ್ಚನ ಸಿನಿಮಾವರೆಗೂ ನಡೆದ ಶ್ರುತಿ ಹರಿಹರನ್

Sruthi Hariharan spoke about sudeep

''ನಿಮ್ಮಿಂದ ತುಂಬಾ ಕಲಿತಿದ್ದೇನೆ. ಸಿನಿಮಾ, ಆಹಾರ, ಸಂಗೀತದ ಮೇಲೆ ನಿಮಗಿರುವ ಕಾಳಜಿ ಅದ್ಭುತ. ಮುಂದಿನ ಎರಡ್ಮೂರು ದಿನ ಚಿತ್ರೀಕರಣದಲ್ಲಿ ನಾನು ಮತ್ತಷ್ಟು ಒಳ್ಳೆಯ ಅನುಭವವನ್ನ ಪಡೆಯಲು ಕಾಯುತ್ತಿದ್ದೇನೆ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್ ''ನೀನು ನನ್ನ ಗಂಭೀರತೆಯ ಇಮೇಜ್ ನ್ನ ಹಾಳು ಮಾಡುತ್ತಿರುವೇ'' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಷ್ಟೇ ಅಲ್ಲದೇ, ನಿಮ್ಮ ಜೊತೆ ನಟಿಸುತ್ತಿರುವುದು ನನಗೂ ಖುಷಿ ಕೊಟ್ಟಿದೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

'ಅಂಬಿ ನಿಂಗ್ ವಯಸ್ಸಾಯ್ತೋ' ಫಸ್ಟ್ ಲುಕ್ ಔಟ್: ವಯಸ್ಸಾದ ಅಂಬಿ ಹೇಗ್ ಕಾಣ್ತಾರೆ?

ಅಂದ್ಹಾಗೆ, 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್. ತಮಿಳಿನಲ್ಲಿ ರಾಜ್ ಕಿರಣ್ ಮಾಡಿದ್ದ ಪಾತ್ರಕ್ಕೆ ಕನ್ನಡದಲ್ಲಿ ಅಂಬರೀಶ್ ಬಣ್ಣ ಹಚ್ಚಿದ್ದಾರೆ. ಧನುಶ್ ಕಾಣಿಸಿಕೊಂಡಿದ್ದ ಪಾತ್ರದಲ್ಲಿ ಸುದೀಪ್ ಅಭಿನಯಿಸಿದ್ದಾರೆ.

ಕನ್ನಡದ ಈ ಹುಡುಗಿಯರಿಗೆ ಪರಭಾಷೆಯಲ್ಲಿ ಇರುವ ಡಿಮ್ಯಾಂಡ್ ನೋಡಿ!

ಅನೇಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದಿರುವ ಗುರುದತ್ ಮೊದಲ ಬಾರಿಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕಿಚ್ಚ ಸುದೀಪ್ ಅವರ ಸಹೋದರ ಸಂಬಂಧಿ ಆಗಿರುವ ಸಂಚಿತ್ ಸಂಜೀವ್ ಸಹ ನಿರ್ದೇಶಕರಾಗಿ ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಅಂಬರೀಶ್ ಮತ್ತು ಸುದೀಪ್ ಜೊತೆಯಲ್ಲಿ ಸುಹಾಸಿನಿ, ಶ್ರುತಿ ಹರಿಹರನ್ ಸೇರಿದಂತೆ ಮುಂತಾದವರಿದ್ದಾರೆ.

English summary
Kannada actress Sruthi Hariharan has taken her twitter account to express their opinion about kiccha sudeep in Ambi Ning Vysaitho movie set.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X