For Quick Alerts
  ALLOW NOTIFICATIONS  
  For Daily Alerts

  ಇಂತಹ ಸಿನಿಮಾ ಮಾಡೋಕೆ ಧೈರ್ಯ ಬೇಕು ಎಂದ ಜಕ್ಕಣ್ಣ: 'ವಿಕ್ರಾಂತ್ ರೋಣ'ದಲ್ಲಿ ಇಷ್ಟ ಆಗಿದ್ದೇನು?

  |

  ಈ ವಾರ ಅದ್ಯಾವ ಇಂಡಸ್ಟ್ರಿಯಲ್ಲಿ ಅದೆಂತಹದ್ದೇ ಸಿನಿಮಾ ಬಂದರೂ, 'ವಿಕ್ರಾಂತ್ ರೋಣ' ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಸದ್ಯಕ್ಕೀಗ ಎಲ್ಲರ ಬಾಯಲ್ಲೂ 'ವಿಕ್ರಾಂತ್ ರೋಣ' ಸಿನಿಮಾದ್ದೇ ಟಾಕ್. ನಿಧಾನವಾಗಿಯೇ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುವುದಕ್ಕೆ ಆರಂಭಿಸಿದೆ.

  'ವಿಕ್ರಾಂತ್ ರೋಣ' ರಿಲೀಸ್‌ಗೂ ಮುನ್ನವೇ ಬೇರೆ ಬೇರೆ ಚಿತ್ರರಂಗದ ಸೆಲೆಬ್ರೆಟಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಕಿಚ್ಚ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾದ ಬೆಂಬಲಕ್ಕೆ ನಿಂತಿದ್ದರು. ಹಾಗೇ ಕೊನೆಯ ಕ್ಷಣದಲ್ಲಿ ಸುದೀಪ್‌ ಸಿನಿಮಾಗೆ ಮೂವಿ ಮಾಂತ್ರಿಕ ರಾಜಮೌಳಿ ಶುಭ ಕೋರಿದ್ದರು. ಅಲ್ಲದೆ ಸಿನಿಮಾ ನೋಡುವ ಮುನ್ಸೂಚನೆ ಕೂಡ ನೀಡಿದ್ದರು.

  VR vs Pushpa vs KGF 1: ಮೊದಲ ಬಾರಿಗೆ ಪ್ಯಾನ್ ಇಂಡಿಯಾ ರಿಲೀಸ್ ಆದ ಸಿನಿಮಾಗಳ ಫಸ್ಟ್ ಡೇ ಕಲೆಕ್ಷನ್ ಎಷ್ಟು?VR vs Pushpa vs KGF 1: ಮೊದಲ ಬಾರಿಗೆ ಪ್ಯಾನ್ ಇಂಡಿಯಾ ರಿಲೀಸ್ ಆದ ಸಿನಿಮಾಗಳ ಫಸ್ಟ್ ಡೇ ಕಲೆಕ್ಷನ್ ಎಷ್ಟು?

  ಸುಳಿವು ನೀಡಿದಂತೆಯೇ ರಾಜಮೌಳಿ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿಂದಾರೆ. ಹಾಗಿದ್ದರೆ, 'ವಿಕ್ರಾಂತ್ ರೋಣ' ಸಿನಿಮಾ ನೋಡಿ ರಾಜಮೌಳಿ ಹೇಳಿದ್ದೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  ರಾಜಮೌಳಿ ಹೇಳಿದ್ದೇನು?

  ರಾಜಮೌಳಿ ಹೇಳಿದ್ದೇನು?

  ಮೆಗಾ ಬ್ಲಾಸ್ಟರ್ ಸಿನಿಮಾ ಕೊಟ್ಟಿರೊ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಸಿನಿಮಾ ಬಗ್ಗೆ ಏನೇ ಹೇಳಿದರೂ ಅದು ತುಂಬಾನೇ ಮುಖ್ಯ ಆಗುತ್ತೆ. ಈ ಕಾರಣಕ್ಕೆ 'ವಿಕ್ರಾಂತ್ ರೋಣ' ಸಿನಿಮಾ ನೋಡಿ ರಾಜಮೌಳಿ ಏನು ಹೇಳುತ್ತಾರೆ? ಅನ್ನೋ ಕುತೂಹಲ ಇದ್ದೇ ಇತ್ತು. ನಿರೀಕ್ಷೆಯಂತೆಯೇ ಮೂವಿ ಮಾಂತ್ರಿಕ ರಾಜಮೌಳಿ ಕಿಚ್ಚನ 'ವಿಕ್ರಾಂತ್ ರೋಣ' ಸಿನಿಮಾ ನೋಡಿದ್ದಾರೆ. ಅಲ್ಲದೆ ಚಿಕ್ಕದಾಗಿ ಚೊಕ್ಕದಾಗಿ ಟ್ವಿಟರ್‌ನಲ್ಲಿ ರಿವ್ಯೂ ಮಾಡಿದ್ದಾರೆ. ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ವಿಕ್ರಾಂತ್ ರೋಣ' ಮುಂದೆ ಅಂಗಾತ ಮಲಗಿದ 'ರಾಮಾ ರಾವ್' & 'ಏಕ್ ವಿಲನ್'!ವಿಕ್ರಾಂತ್ ರೋಣ' ಮುಂದೆ ಅಂಗಾತ ಮಲಗಿದ 'ರಾಮಾ ರಾವ್' & 'ಏಕ್ ವಿಲನ್'!

  'ವಿಕ್ರಾಂತ್ ರೋಣ' ಮಾಡಲು ಧೈರ್ಯ ಬೇಕು!

  'ವಿಕ್ರಾಂತ್ ರೋಣ' ಸಿನಿಮಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಒಮ್ಮೆ ಸಿನಿಮಾ ನೋಡಿದವರು ಸೀಕ್ರೆಟ್ ರಿವೀಲ್ ಆದರೆ, ಮತ್ತೆ ಸಿನಿಮಾ ನೋಡಲು ಹೋಗದೇ ಇರುವ ಆಪಾಯವಿರುತ್ತೆ. ಆದರೆ, 'ವಿಕ್ರಾಂತ್ ರೋಣ' ಸಿನಿಮಾವನ್ನು ಹಲವು ಮಂದಿ ಎರಡು ಮೂರು ಬಾರಿ ನೋಡಿ ಮೆಚ್ಚುಗೆ ಸೂಚಿಸಿದ್ದು ಹೊಸ ಅಧ್ಯಾಯಕ್ಕೆ ಮುನ್ನುಡಿ ಎನ್ನಲಾಗಿದೆ. ಈ ಮಧ್ಯೆ ರಾಜಮೌಳಿ ಕೂಡ "ವಿಕ್ರಾಂತ್ ರೋಣ ಯಶಸ್ಸು ಕಂಡಿದ್ದಕ್ಕೆ ಧನ್ಯವಾದಗಳು. ಇಂತಹ ಸಾಲನ್ನು ಸಿನಿಮಾ ಮಾಡುವುದಕ್ಕೆ ಧೈರ್ಯ ಹಾಗೂ ನಂಬಿಕೆ ಎರಡೂ ಬೇಕು. ನೀವು ಅದನ್ನು ಮಾಡಿದ್ರಿ, ಅದಕ್ಕೆ ಬೆಲೆ ಸಿಕ್ಕಿದೆ." ಎಂದಿದ್ದಾರೆ.

  ಸಿನಿಮಾದ ಹೃದಯ ಪ್ರೀ ಕ್ಲೈಮ್ಯಾಕ್ಸ್!

  ಸಿನಿಮಾದ ಹೃದಯ ಪ್ರೀ ಕ್ಲೈಮ್ಯಾಕ್ಸ್!

  'ವಿಕ್ರಾಂತ್ ರೋಣ' ಸಿನಿಮಾ ನೋಡಿ ರಾಜಮೌಳಿ ಮೆಚ್ಚಿಕೊಂಡಿದ್ದಾರೆ. "ಸಿನಿಮಾದ ಪ್ರೀ ಕ್ಲೈಮ್ಯಾಕ್ಸ್ ಹೃದಯವಿದ್ದಂತೆ. ಅದು ಬರುತ್ತೆ ಎಂದು ನಾವು ಅಂದುಕೊಂಡಿರಲಿಲ್ಲ. ಆದರೂ ಅದು ಅದ್ಭುತವಾಗಿದೆ. " ಎಂದಿದ್ದಾರೆ. 'ವಿಕ್ರಾಂತ್ ರೋಣ' ಪ್ರೀ ಕ್ಲೈಮ್ಯಾಕ್ಸ್ ನೋಡಿ ಇಷ್ಟ ಪಟ್ಟಿರುವ ರಾಜಮೌಳಿ ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ. ಮೂವಿ ಮಾಂತ್ರಿಕನೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರಿಂದ ತೆಲುಗು ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

  ಭಾಸ್ಕರ್‌ನ ನೆನೆದ ರಾಜಮೌಳಿ

  ಭಾಸ್ಕರ್‌ನ ನೆನೆದ ರಾಜಮೌಳಿ

  ಇಷ್ಟೇ ಅಲ್ಲ. 'ವಿಕ್ರಾಂತ್ ರೋಣ' ಸಿನಿಮಾ ಪೂರ್ತಿ ನೋಡಿದರೂ, ಪ್ರೇಕ್ಷಕರ ಕಣ್ಮುಂದೆ ಬಾರದ ಒಂದು ಪಾತ್ರ ಭಾಸ್ಕರ್. ಈ ಪಾತ್ರದ ಬಗ್ಗೆ ರಾಜಮೌಳಿ ವಿಶೇಷವಾಗಿ ಮಾತಾಡಿದ್ದು ಟ್ವೀಟ್‌ನ ಬೆಸ್ಟ್ ಪಾರ್ಟ್. ಒಟ್ನಲ್ಲಿ ಸ್ಯಾಂಡಲ್‌ವುಡ್‌ನ ಮತ್ತೊಂದು ಪ್ಯಾನ್ ಇಂಡಿಯಾ ಭಾರತದ ಸೆಲೆಬ್ರೆಟಿಗಳಿಗೂ ಇಷ್ಟ ಆಗುತ್ತಿದೆ. ಸಿನಿಮಾದ ಕಥೆಯಷ್ಟೇ ತಾರೆಯರ ಟ್ವೀಟ್ ಕೂಡ ಕಿಕ್ ಕೊಡುತ್ತಿದೆ. 100 ಕೋಟಿ ರೂ. ಸಮೀಪದಲ್ಲಿರುವ 'ವಿಕ್ರಾಂತ್ ರೋಣ' ಮುಂದೆ ಹೇಗೆ ಕಲೆ ಹಾಕುತ್ತೆ ಅನ್ನೋದು ಕುತೂಹಲ.

  English summary
  SS Rajamouli Congratulate Kichcha Sudeep And Vikrant Rona Team, Know More.
  Sunday, July 31, 2022, 15:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X