For Quick Alerts
  ALLOW NOTIFICATIONS  
  For Daily Alerts

  ಜುಲೈ 30 ರಂದು 'ಸಿನಿಮಾ ಸಾಹಿತ್ಯ ಮತ್ತು ವಿಮರ್ಶೆ' ಕುರಿತು ವಿಚಾರ ಸಂಕಿರಣ

  By Bharath Kumar
  |

  ಕರ್ನಾಟಕ ಚಲನಚಿತ್ರ ಅಕಾಡೆಮಿ, ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಹಾಗೂ ಸಾಹಿತ್ಯ ಸಂಸ್ಕೃತಿ ವೇದಿಕೆ ಅವರ ಸಹಯೋಗದಲ್ಲಿ ಜುಲೈ 30 ರಂದು ಒಂದು ದಿನದ 'ಸಿನಿಮಾ ಸಾಹಿತ್ಯ ಮತ್ತು ವಿಮರ್ಶೆ' ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

  ಸಿನಿಮಾ ಕ್ಷೇತ್ರದ ವಿದ್ವಾಂಸರು, ಪತ್ರಕರ್ತರು, ಸಿನಿಮಾ ನಿರ್ದೇಶಕರು ಹಾಗೂ ರಂಗಕರ್ಮಿಗಳು ಈ ವಿಚಾರ ಸಂಕಿರಣವನ್ನ ಆಯೋಜಿಸಿದ್ದು, ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಇಡೀ ದಿನ ಈ ವಿಚಾರ ಸಂಕಿರಣ ನಡೆಯಲಿದೆ.

  ಈ ಕಾರ್ಯಕ್ರಮವನ್ನ ಹೆಸರಾಂತ ಸಾಹಿತಿ ಮತ್ತು ಸಿನಿಮಾ ನಿರ್ದೇಶಕರು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಉದ್ಘಾಟನೆ ಮಾಡಲಿದ್ದು, ಪ್ರೋ ಎಂ ಕೆ ನಾಯಕ್, ನಟಿ ತಾರಾ, ಜನಾರ್ಧನ್ ನಾಯಕ್, ಹಾಗೂ ನಟ ಸುಂದರ್ ರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

  ಕಾರ್ಯಕ್ರಮಗಳು ಇಂತಿವೆ
  ಗೋಷ್ಠಿ 1: ಬೆಳಿಗ್ಗೆ 11.30 ಕ್ಕೆ 'ಸಿನಿಮಾ ಮತ್ತು ಧಾರಾವಾಹಿ ವಿಮರ್ಶೆಯ ಸ್ವರೂಪ'.

  ಗೋಷ್ಠಿ 2: ಬೆಳಿಗ್ಗೆ 12.45 ಕ್ಕೆ 'ಸೃಜನ ಶೀಲ ಅಭಿವ್ಯಕ್ತಿಯಾಗಿ ಸಿನಿಮಾ ಸಾಹಿತ್ಯ ಮತ್ತು ಸಂಪ್ರದಾಯಿಕ ಸಾಹಿತ್ಯ ಮೀಮಾಂಸೆ'.

  ಗೋಷ್ಠಿ 3: ಮಧ್ಯಾಹ್ನ 1.15 ಕ್ಕೆ ಸಿನಿಮಾ ಮಾಧ್ಯಮಗಳಲ್ಲಿ ತಳವರ್ಗಗಳ ಅಭಿವ್ಯಕ್ತಿ.

  ಗೋಷ್ಠಿ 4: ಮಧ್ಯಾಹ್ನ 2.30 ಕ್ಕೆ ಸಿನಿಮಾಗಳಲ್ಲಿ ಕುಲ ವೃತ್ತಿಗಳು ಮತ್ತು ಕಲೆಗಳ ಚಿತ್ರಣದ ಬಗ್ಗೆ ಸಂವಾದ ಮತ್ತು ವಿಚಾರಕ ಸಂಕೀರ್ಣ ನಡೆಯಲಿದೆ.

  ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಕುಲಸಚಿ ಬಿಕೆ ರವಿ ಅವರಿಂದ ಸಮಾರೋಪ ನುಡಿ

  ಮಧ್ಯಾಹ್ನ 3.30 ಕ್ಕೆ 'ಕೌದಿ' ಸಿನಿಮಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವೂ ಇದೆ.

  English summary
  Banjara social and cultural academy conducting state level seminar on cinema literature and criticism on july 30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X