ಪೈಶಾಚಿಕ ಕೃತ್ಯವನ್ನ ನಿಲ್ಲಿಸಿ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿದ ಸುದೀಪ್

Recommended Video

The Villain : ಪೈಶಾಚಿಕ ಕೃತ್ಯಗಳನ್ನ ಮಾಡದಂತೆ ಸುದೀಪ್ ರಿಂದ ಮನವಿ | FILMIBEAT KANNADA

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ನಟಿಸಿರುವ 'ದಿ ವಿಲನ್' ಚಿತ್ರದ ಯಶಸ್ಸಿಗಾಗಿ ಅಭಿಮಾನಿಗಳು ಕೋಣವನ್ನು ಬಲಿ ನೀಡಿ, ಬಳಿಕ 'ದಿ ವಿಲನ್' ಪೋಸ್ಟರ್ ಗಳಿಗೆ ರಕ್ತಾಭಿಷೇಕ ಮಾಡಿದ್ದರು.

ಆ ಅಮಾನುಷ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಪರಾಕಾಷ್ಟೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ಕಿಚ್ಚ ಸುದೀಪ್ ಕಿವಿಗೂ ಬಿದ್ದಿದೆ. ಹೀಗಾಗಿ, ಇಂತಹ ಪೈಶಾಚಿಕ ಕೃತ್ಯಗಳನ್ನು ನಿಲ್ಲಿಸುವಂತೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

Stop slaughtering tweets Kannada Actor Kiccha Sudeep

''ಕ್ರೂರತ್ವ ಮೆರೆಯುವುದು ಅಮಾನವೀಯತೆ. ಇದನ್ನೆಲ್ಲ ದಯವಿಟ್ಟು ನಿಲ್ಲಿಸಿ. 'ದಿ ವಿಲನ್' ಚಿತ್ರತಂಡಕ್ಕೆ ಇದು ನೀವು ಸಲ್ಲಿಸುತ್ತಿರುವ ಪ್ರೀತಿ ಹಾಗೂ ಗೌರವ ಅಲ್ಲ. ಪ್ರಾಣಿ ಹತ್ಯೆಯನ್ನ ನಿಲ್ಲಿಸಿ'' ಎಂದು ನಟ ಸುದೀಪ್ ಟ್ವೀಟಿಸಿದ್ದಾರೆ.

ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ 'ದಿ ವಿಲನ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು 'ದಿ ವಿಲನ್' ಚಿತ್ರವನ್ನ ಟೀಕಿಸಿದ್ದಾರೆ. ಹೀಗಿದ್ದರೂ, ಹಲವು ಕಡೆ 'ದಿ ವಿಲನ್' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ನಲ್ಲಿಯೂ 'ದಿ ವಿಲನ್' ಹಿಂದೆ ಬಿದ್ದಿಲ್ಲ.

'ದಿ ವಿಲನ್' ಬಿಡುಗಡೆ ಆದ ದಿನ ಶಿವರಾಜ್ ಕುಮಾರ್ ಅಭಿಮಾನಿಗಳು ಕುಪಿತಗೊಂಡಿದ್ದರು. ಆದ್ರೀಗ, ಎಲ್ಲವೂ ತಣ್ಣಗಾಗಿರುವ ಹಾಗೆ ಕಂಡುಬರುತ್ತಿದೆ. ಅಂದ್ಹಾಗೆ, ನೀವು 'ದಿ ವಿಲನ್' ಚಿತ್ರವನ್ನ ವೀಕ್ಷಿಸಿದ್ರಾ.? ವೀಕ್ಷಿಸಿದ್ರೆ, ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Stop slaughtering tweets Kannada Actor Kiccha Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X