ನಟಸಾರ್ವಭೌಮ ನೋಡಲು ರಜೆ ಕೇಳಿ ವಿದ್ಯಾರ್ಥಿನಿ ಬರೆದ ಪತ್ರ ವೈರಲ್

Recommended Video

Natasarvabouma movie : ನಟಸಾರ್ವಭೌಮ ನೋಡಲು ರಜೆ ಕೇಳಿ ಪತ್ರ ಬರೆದ ವಿದ್ಯಾರ್ಥಿ..! | FILMIBEAT KANNADA

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಚಿತ್ರಗಳು ಬಿಡುಗಡೆಯಾಗುತ್ತಿದೆ ಅಂದ್ರೆ ಖಾಸಗಿ ಕಂಪನಿಗಳು, ಖಾಸಗಿ ಶಾಲೆಗಳು ಸ್ವಯುತ್ತವಾಗಿ ರಜೆ ನೀಡುವುದನ್ನ ನೋಡಿದ್ದೀವಿ. ಇನ್ನು ಅಭಿಮಾನಿಗಳು ತಿಂಗಳು ಮುಂಚೆಯೇ ರಜೆ ಕೇಳಿ ಮನವಿ ಮಾಡುವುದನ್ನ ಕೇಳಿದ್ದೀವಿ.

ಇದೀಗ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ನೋಡುವ ಕಾರಣದಿಂದ ಕಾಲೇಜಿನಲ್ಲಿ ರಜೆ ಕೋರಿ ವಿದ್ಯಾರ್ಥಿನಿಯೊಬ್ಬರು ಪತ್ರ ಬರೆದಿದ್ದಾರೆ. ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೆಬ್ರವರಿ 7 ರಂದು ನಟಸಾರ್ವಭೌಮ ಸಿನಿಮಾ ತೆರೆಕಾಣುತ್ತಿದ್ದು, 8ನೇ ತಾರೀಖು ಸಿನಿಮಾ ನೋಡಲು ನಿರ್ಧರಿಸಿದ್ದೇನೆ. ಆ ದಿನ ತರಗತಿಗೆ ಹಾಜರಾಗಲು ಸಾಧ್ಯವಿಲ್ಲ. ರಜೆ ಮಂಜೂರು ಮಾಡಬೇಕೆಂದು'' ವಿದ್ಯಾರ್ಥಿನಿ ನಿಸರ್ಗ ಪತ್ರ ಬರೆದಿದ್ದಾರೆ.

Student applied leave for watch natasarvabhouma movie

ಮೈಸೂರು ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಎರಡನೇ ವರ್ಷದ ಕಾಮರ್ಸ್ ಓದುತ್ತಿರುವ ನಿಸರ್ಗ ಈ ಪತ್ರ ಬರೆದಿದ್ದಾರೆ. ಸ್ವತಃ ನಿರ್ದೇಶಕ ಪವನ್ ಒಡೆಯರ್ ಅವರೇ ಈ ಪತ್ರವನ್ನ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, ಖುಷಿ ಹಂಚಿಕೊಂಡಿದ್ದಾರೆ.

ಇನ್ನುಳಿದಂತೆ ಪುನೀತ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ರವಿಶಂಕರ್ ಅಭಿನಯದ ಈ ಚಿತ್ರವನ್ನ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಡಿ ಇಮ್ಮಾನ್
ಸಂಗೀತ ನೀಡಿದ್ದು, ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಕುತೂಹಲ ಮೂಡಿಸಿದೆ.

More from Filmibeat

English summary
Maharani arts and commerce college mysore student nisarga has applied one day leave for watch natasarvabhouma movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X