»   » ಹೃದಯಾಘಾತದಿಂದ ನಂಜುಂಡಿ ನಾಗರಾಜ್ ನಿಧನ

ಹೃದಯಾಘಾತದಿಂದ ನಂಜುಂಡಿ ನಾಗರಾಜ್ ನಿಧನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹೆಸರಾಂತ ಸಾಹಸ ನಿರ್ದೇಶಕ ನಂಜುಂಡಿ ನಾಗರಾಜ್ (55) ನಿಧನರಾಗಿದ್ದಾರೆ. ಕಳೆದ ರಾತ್ರಿ 1.30 ರ ಸುಮಾರಿಗೆ ಹೃದಯಾಘಾತಕ್ಕೆ ಒಳಗಾಗಿ, ಬೆಂಗಳೂರಿನ ಅರಕೆರೆಯ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಾಮಾನ್ಯ ಫೈಟರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ನಂಜುಂಡಿ ನಾಗರಾಜ್, ವರನಟ ಡಾ.ರಾಜ್ ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅನೇಕ ಸ್ಟಾರ್ ಹೀರೋಗಳಿಗೆ ಪರ್ಮನೆಂಟ್ ಡ್ಯೂಪ್ ಆರ್ಟಿಸ್ಟ್ ಆಗಿದ್ದವರು.

Nanjundi Nagaraj

ಫೈಟರ್ ಆಗಿ ನಂಜುಂಡಿ ನಾಗರಾಜ್ ಮಾಡುತ್ತಿದ್ದ ಸಾಹಸಕ್ಕೆ ಡಾ.ರಾಜ್ ಕುಮಾರ್, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಬೆರಗಾಗಿದ್ದರು. ಅವರ ಸಾಹಸ ಸಂಯೋಜನೆಯಲ್ಲಿ ಅನೇಕ ಚಿತ್ರಗಳು ಅದಾಗಲೇ ತೆರೆಕಂಡಿದ್ದರೂ, ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಅಭಿನಯದ 'ನಂಜುಂಡಿ ಕಲ್ಯಾಣ' ಸಿನಿಮಾ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಡ್ತು.

'ನಂಜುಂಡಿ ಕಲ್ಯಾಣ' ಚಿತ್ರದಿಂದಲೇ 'ನಂಜುಂಡಿ' ನಾಗರಾಜ್ ಗಾಂಧಿನಗರದಲ್ಲಿ ಜನಪ್ರಿಯರಾದರು. ರಿಯಲಿಸ್ಟಿಕ್ ಸ್ಟಂಟ್ಸ್ ಗಳಿಂದ ಹೆಚ್ಚು ಖ್ಯಾತರಾಗಿದ್ದ ನಂಜುಂಡಿ ನಾಗರಾಜ್ 350 ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜಿಸಿದ್ದಾರೆ.

nanjundi nagaraj

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಅನೇಕ ಚಿತ್ರಗಳಿಗೆ ಮೈನವಿರೇಳಿಸುವ ಸಾಹಸ ಸಂಯೋಜಿಸಿರುವ ಖ್ಯಾತಿ ಕೂಡ ನಂಜುಂಡಿ ನಾಗರಾಜ್ ಅವರಿಗೆ ಸಲ್ಲಬೇಕು.

ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು ಚಿತ್ರರಂಗದಲ್ಲೂ ಬಹುಬೇಡಿಕೆಯ ಸಾಹಸ ನಿರ್ದೇಶಕರಾಗಿದ್ದ ನಂಜುಂಡಿ ನಾಗರಾಜ್, ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಿಗೂ ಸ್ಟಂಟ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ.

nanjundi nagaraj

ಅಲ್ಲದೇ, ವಿನೋದ್ ಆಳ್ವ, ನಿವೇದಿತಾ ಜೈನ್ ನಟಿಸಿದ್ದ 'ಸ್ಕೆಚ್' ಅನ್ನುವ ಸಾಹಸಮಯ ಚಿತ್ರಕ್ಕೆ ನಂಜುಂಡಿ ನಾಗರಾಜ್ ಆಕ್ಷನ್ ಕಟ್ ಹೇಳಿದ್ದರು. ಇತ್ತೀಚೆಗಷ್ಟೇ ಅವರ ಪುತ್ರ ಧನಂಜಯ್ '24 ಕ್ಯಾರೆಟ್' ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದರು.

ತೆರೆಮರೆಯಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸಾಹಸಕ್ಕೆ ಕೈಹಾಕುತ್ತಿದ್ದ ಸ್ಟಂಟ್ ಮಾಸ್ಟರ್ ನಂಜುಂಡಿ ನಾಗರಾಜ್ ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

English summary
Sandalwood Stunt Master Nanjundi Nagaraj(55)expired due to Heart Attack today (March 26th). Nanjundi Nagaraj have choreographed stunts for more than 350 movies. He was the favorite Stunt Master for Dr.Rajkumar, Dr.Vishnuvardhan and many Stars.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada