»   » ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರೀಕರಣದಲ್ಲಿ ಅವಘಡ

ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರೀಕರಣದಲ್ಲಿ ಅವಘಡ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿರುವ 'ದಿಲ್ ರಂಗೀಲಾ' ಚಿತ್ರದಲ್ಲಿ ಅವಘಡವೊಂದು ಸಂಭವಿಸಿದೆ. ಫೈಟಿಂಗ್ ಚಿತ್ರೀಕರಣ ವೇಳೆ ಸಾಹಸ ಕಲಾವಿದನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶುಕ್ರವಾರ (ಅ.26) ಬೆಂಗಳೂರಿನ ನಂದಿನಿಲೇಔಟ್ ನಲ್ಲಿ ದಿಲ್ ರಂಗೀಲಾ ಚಿತ್ರದ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಗಣೇಶ್ ಮತ್ತು ಫೈಟರ್ ನಡುವಿನ ಕ್ಲೈಮ್ಯಾಕ್ಸ್ ಸನ್ನಿವೇಶವದು. ಫೈಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ಸನ್ನಿವೇಶಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದರು.


ಸಾಹಸ ಕಲಾವಿದ ತರಕಾರಿ ತಳ್ಳುಗಾಡಿ ಮೇಲೆ ನಿಂತು ಕೆಳಗೆ ಜಂಪ್ ಮಾಡಬೇಕಾಗಿತ್ತು. ಕೆಳಗೆ ಜಿಗಿಯ ಬೇಕಾದರೆ ಆಯಾ ತಪ್ಪಿ ಅವರ ತಲೆಗೆ ಗಂಭೀರ ಪೆಟ್ಟಾಗಿದೆ. ಕೂಡಲೆ ಅವರನ್ನು ಮಹಾಲಕ್ಷ್ಮಲೇಔಟ್ ನಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಜುನಾಥ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಅವರು ಆರಾಮವಾಗಿದ್ದಾರೆ. ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಅವರಿಗೆ ಸೂಚಿಸಿದ್ದಾರೆ. ದಿಲ್ ರಂಗೀಲಾ ಚಿತ್ರೀಕರಣ ಶೇ.80ರಷ್ಟು ಪೂರ್ಣವಾಗಿದ್ದು ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ.

ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಅವರು ನಿರ್ಮಿಸುತ್ತಿರುವ ಚಿತ್ರದಲ್ಲಿ ರಚಿತರಾಂ, ಪ್ರಿಯಾಂಕಾ ರಾವ್, ದತ್ತಣ್ಣ, ರಂಗಾಯಣರಘು, ಅಚ್ಯುತಕುಮಾರ್, ಯಮುನ, ಶ್ರೀನಿಧಿ, ಗಿರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರೀತಂ ಗುಬ್ಬಿ ನಿರ್ದೇಶಿಸಿ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ದೀಪು.ಎಸ್.ಕುಮಾರ್ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಯೋಗಿ ಸಹನಿರ್ದೇಶನವಿರುವ 'ದಿಲ್ ರಂಗೀಲಾ'ಕ್ಕೆ ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಯೋಗರಾರ್ಜ್ ಭಟ್, ಜಯಂತ ಕಾಯ್ಕಿಣಿ ಗೀತರಚನೆ ಮಾಡಿದ್ದಾರೆ. (ಏಜೆನ್ಸೀಸ್)

English summary
A stuntman named Manjunath has been was seriously injured on the set of Golden Star Ganesh lead Dil Rangeela. The man was immediately admitted to hospital. Doctors stated that the stuntman condition is out of danger now.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada