»   » ಸುದೀಪ್ ಬಚ್ಚನ್ ಬಿಡುಗಡೆಗೆ ಕೌಂಟ್ ಡೌನ್ ಶುರು

ಸುದೀಪ್ ಬಚ್ಚನ್ ಬಿಡುಗಡೆಗೆ ಕೌಂಟ್ ಡೌನ್ ಶುರು

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ ಬಚ್ಚನ್. ಈ ಚಿತ್ರದ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಶಶಾಂಕ್ ಆಕ್ಷನ್, ಕಟ್ ಹೇಳಿರುವ ಈ ಚಿತ್ರ ಏಪ್ರಿಲ್ 11ರ ಗುರುವಾರದಂದು ತೆರೆಗೆ ಅಪ್ಪಳಿಸುತ್ತಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಚಿತ್ರ ವಿಮರ್ಶೆ ಓದಿ) ಚಿತ್ರದ ಬಳಿಕ ಭಾರಿ ಬಜೆಟ್ ನಲ್ಲಿ ನಿರ್ಮಿಸಿರುವ ಕನ್ನಡ ಚಿತ್ರ ಇದಾಗಿದೆ. ಪ್ರೇಕ್ಷಕರಿಗೆ ಈ ಚಿತ್ರ ಮರೆಯಲಾಗದ ಅನುಭವ ನೀಡುತ್ತದೆ. ಅಷ್ಟೊಂದು ಅದ್ಭುತವಾಗಿ ಚಿತ್ರವನ್ನು ತೆರೆಗೆ ತಂದಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ.

ಚಿತ್ರದ ಟ್ರೇಲರ್ ಗಳು ಈಗಾಗಲೆ ಬಿಡುಗಡೆಯಾಗಿದ್ದು ಫೈಟ್ ಗಳು ಮೈನವಿರೇಳಿಸುವಂತಿವೆ. ಶೀಘ್ರದಲ್ಲೇ ಚಿತ್ರದ ಧ್ವನಿಸುರುಳಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದೇವೆ. ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಭಾರಿ ಜನಮನ್ನಣೆ ಗಳಿಸಿದೆ ಎಂದಿದ್ದಾರೆ ಸುದೀಪ್.

ಬಹುಶಃ ಚಿತ್ರದ ಧ್ವನಿಸುರುಳಿ ಏಪ್ರಿಲ್ 1ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಪ್ರೊಮೋಗಳ ಬಗ್ಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಸುದೀಪ್ ಟ್ವೀಟಿಸಿದ್ದಾರೆ. ಸುದೀಪ್, ಪರೂಲ್ ಯಾದವ್, ತುಲಿಪ್ ಜೋಷಿ, ಭಾವನಾ ಮೆನನ್, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರ ತಾರಾಬಳಗವಿದೆ.

ಈ ಚಿತ್ರಕ್ಕೆ ಶೇಖರ್ ಚಂದ್ರು ರವರ ಛಾಯಾಗ್ರಹಣವಿದೆ. ಸಂಗೀತ ವಿ ಹರಿಕೃಷ್ಣ. 'ಜರಾಸಂಧ' ಚಿತ್ರದ ಸೋಲಿನ ಬಳಿಕ ಶಶಾಂಕ್ ಕೈಗೆತ್ತಿಕೊಂಡಿರುವ ಚಿತ್ರ ಇದಾಗಿದ್ದು ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.

"ಚಿತ್ರದ ಧ್ವನಿಸುರುಳಿ ಇದೇ ಶುಭ ಶುಕ್ರವಾರದ ದಿನದಿಂದ (ಮಾ 29) ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಮತ್ತು ಚಿತ್ರಕ್ಕೆ U/A ಸರ್ಟಿಫಿಕೇಟ್ ಸೆನ್ಸಾರ್ ಮಂಡಳಿ ನೀಡಿದೆ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

English summary
Kichcha Sudeep's much expected Kannada film Bachchan slated for release on 11th April 2013. Sudeep tweeted, "I'm glad u all luvd Bachchan promo. Audio wil hit th market shortly n April 1wth is th release."
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada