»   » ಊಹಾಪೋಹಗಳಿಗೆ ತೆರೆ ಎಳೆದ ಕಿಚ್ಚ ಸುದೀಪ್

ಊಹಾಪೋಹಗಳಿಗೆ ತೆರೆ ಎಳೆದ ಕಿಚ್ಚ ಸುದೀಪ್

Posted By:
Subscribe to Filmibeat Kannada

ನೆಲ, ಜಲದ ರಕ್ಷಣೆಯ ಮಾತು ಬಂದಾಗ ಎಲ್ಲಾ ತಾರೆಗಳೂ ಒಟ್ಟಾಗಿ ಬೀದಿಗಿಳಿದು ಪ್ರತಿಭಟಿಸಿದ್ದನ್ನು ನೋಡಿದ್ದೇವೆ. ಆದರೆ ಈ ಬಾರಿ ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಬೆಂಬಲಿಸಲು ಕೆಲವು ತಾರೆಗಳು ಗೈರುಹಾಜರಾದರು.

ಅದರಲ್ಲಿ ಪ್ರಮುಖವಾಗಿ ಕೇಳಿಬಂದ ಹೆಸರುಗಳು ಸುದೀಪ್, ದರ್ಶನ್, ಉಪೇಂದ್ರ ಹಾಗೂ ಯಶ್. ಇವರೆಲ್ಲಾ ಯಾಕೆ ಪ್ರತಿಭಟನೆಗೆ ಬರಲಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಸುದೀಪ್ ಅವರು ತಾವು ಬರದೇ ಇರಲು ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಈ ಹೋರಾಟಕ್ಕೆ ತಮ್ಮ ಬೆಂಬಲ ಇದೆ, ಪ್ರತಿಭಟನೆಯಲ್ಲಿ ಭಾಗಿಯಾವುದಾಗಿಯೂ ಹೇಳಿದ್ದ ಸುದೀಪ್, ಏಪ್ರಿಲ್ 18ರಂದು ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸುದೀಪ್ ಭಾಗಿಯಾಗಲು ಸಾಧ್ಯವಾಗಿಲ್ಲ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರ್ ನಲ್ಲಿ ವಿವರ ನೀಡಿದ್ದಾರೆ.

Sudeep clear the air on unnecessary fights

"ನನ್ನನ್ನು ಸಾಕಿ ಸಲುಹಿದ ಅಂಕಲ್ ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರೀಗ ಸೆಮಿ ಕೋಮಾ ಹಂತ ತಲುಪಿದ್ದಾರೆ..." ಹಾಗಾಗಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ.

"ಇದು ಗೊತ್ತಿಲ್ಲದೆ ಕೆಲವರು ಏನೇನೋ ಸುದ್ದಿಗಳನ್ನು ಹಬ್ಬಿಸುತ್ತಿರುವುದು ತಪ್ಪು. ತಾವು ಹೇಳಿಕೆ ಕೊಟ್ಟು ಭಾಗಿಯಾಗಲಿಲ್ಲ ಎಂದರೆ ಅದಕ್ಕೆ ಏನೋ ಬಲವಾದ ಕಾರಣ ಇರಲೇಬೇಕಲ್ಲವೇ...ಇದನ್ನು ಅರ್ಥ ಮಾಡಿಕೊಂಡರೆ ಸಾಕು"

"ಈ ರೀತಿಯ ಸಣ್ಣಪುಟ್ಟದಕ್ಕೆಲ್ಲಾ ಟ್ವಿಟ್ಟರ್ ನಲ್ಲಿ ಜಗಳವಾಡುವುದು ಸರಿಕಾಣುತ್ತಿಲ್ಲ. ನಾವೆಲ್ಲಾ ಕಲಾವಿದರು ಒಬ್ಬರಿಗೊಬ್ಬರು ಚೆನ್ನಾಗಿಯೇ ಇದ್ದೇವೆ. ಅನಾವಶ್ಯಕ ಸಂಗತಿಗಳಿಗೆ ಕಿವಿಗೊಡದೆ ಅದಕ್ಕೆ ಪೂರ್ಣವಿರಾಮ ಹಾಕಿ ಎಂದು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kichcha Sudeep clears air on unnecessary fights on tweets over small issues. The actor clear the decks on why he is not part of the State-wide bandh on Saturday to pressurise the State government to take up the Mekedatu Drinking Water project, among various other demands.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada