For Quick Alerts
  ALLOW NOTIFICATIONS  
  For Daily Alerts

  "ಮಲ್ಟಿಸ್ಟಾರರ್ ಸಿನಿಮಾ ಮಾಡಲ್ಲ.. ನಾನು ಪೋಷಕ ಕಲಾವಿದ ಕೂಡ ಅಲ್ಲ": ಕಿಚ್ಚ ಸುದೀಪ್

  |

  'ದಿ ವಿಲನ್' ಸಿನಿಮಾ ನಂತರ ಸುದೀಪ್ ಮತ್ತೆ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ ಬೇರೆ ಭಾಷೆಗಳಲ್ಲಿ ಪ್ರಮುಖ ಪಾತ್ರಗಳನ್ನು ಮತ್ತೆ ಮಾಡಿದರು. ಅದು ಯಾಕೆ ಎನ್ನುವುದನ್ನ ಈಗ ರಿವೀಲ್ ಮಾಡಿದ್ದಾರೆ.

  ಕಿಚ್ಚ ಸುದೀಪ್ ಹೀರೊ ಆಗಿ ಮಾತ್ರವಲ್ಲದೇ ಸಾಕಷ್ಟು ಸಿನಿಮಾಗಳ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪರಭಾಷಾ ಸೂಪರ್ ಸ್ಟಾರ್‌ಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ ಶಿವಣ್ಣನ ಜೊತೆ ನಟಿಸಿದ್ದರು. ಆದರೆ ಸಿನಿಮಾ ಬಿಡುಗಡೆಗೂ ಮೊದ್ಲೆ ಇನ್ಮುಂದೆ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ನಟಿಸೋದು ಅನುಮಾನ ಎನ್ನುವಂತೆ ಮಾತನಾಡಿದ್ದರು. ಕೆಲವರು ಯಾಕೆ? 'ದಿ ವಿಲನ್' ಸಿನಿಮಾ ಶೂಟಿಂಗ್ ವೇಳೆ ಏನಾಯಿತು? ಕಿಚ್ಚನ ಈ ನಿರ್ಣಯಕ್ಕೆ ಕಾರಣ ಏನು ? ಎಂದು ಅಚ್ಚರಿಗೊಂಡಿದ್ದರು. ಶಿವಣ್ಣನ ಜೊತೆ ಕಾಂಬಿನೇಷನ್‌ ಅನ್ನುವ ಕಾರಣಕ್ಕೆ ಆ ಸಿನಿಮಾ ಮಾಡಿದ್ದು ಎಂದು ಸುದೀಪ್ ತಿಳಿಸಿದ್ದರು.

  " ಪಬ್ಲಿಕ್ ಫಿಗರ್ ಅಂದ್ಮೇಲೆ ಹಾರ, ಮೊಟ್ಟೆ ಎಲ್ಲಾ ಬೀಳುತ್ತೆ.. ಎಚ್ಚರಿಕೆ ಇರ್ಬೇಕು": ರಶ್ಮಿಕಾಗೆ ಕಿಚ್ಚನ ಬುದ್ಧಿಮಾತು

  'ದಿ ವಿಲನ್' ನಂತರ ಸುದೀಪ್ ಕನ್ನಡದಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ನಟಿಸಲಿಲ್ಲ. ಆದರೆ ತೆಲುಗು, ಹಿಂದಿ ಸಿನಿಮಾಗಳಲ್ಲಿ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿದ್ದರು. ಅದಕ್ಕೆ ಕಾರಣ ಏನು ಎನ್ನುವುದನ್ನು ತೆಲುಗು ಇಂಡಿಯಾ ಗ್ಲಿಟ್ಜ್ ಯೂಟ್ಯೂಬ್‌ ಚಾನಲ್ ಸಂದರ್ಶನದಲ್ಲಿ ವಿವರಿಸಿದ್ದಾರೆ.

  ಮಲ್ಟಿಸ್ಟಾರರ್ ಸಿನಿಮಾ ಮಾಡಲ್ಲ

  ಮಲ್ಟಿಸ್ಟಾರರ್ ಸಿನಿಮಾ ಮಾಡಲ್ಲ

  "ನಾನು ಮಲ್ಟಿಸ್ಟಾರರ್ ಸಿನಿಮಾಗಳನ್ನು ಮಾಡುವುದನ್ನು ನಿಲ್ಲಿಸಿದ್ದೇನೆ. 'ಕಬ್ಜ' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದೇನೆ ಅಷ್ಟೆ. ಇನ್ನು ಬೇರೆ ಭಾಷೆಗಳಲ್ಲಿ ಮಲ್ಟಿಸ್ಟಾರರ್ ಸಿನಿಮಾದಲ್ಲಿ ನಟಿಸುವುದಿಲ್ಲ. ಆ ರೀತಿ ಬಂದರೆ ಹೀರೊ ಆಗಿ ಬರುವುದಿಲ್ಲ. ಮತ್ತೊಬ್ಬ ನಟನಾಗಿ ಬರ್ತೀನಿ. ನಾನು ಅಂತಹ ಪಾತ್ರಗಳನ್ನು ಮಾಡುವುದಿಲ್ಲ" ಎಂದು ಸುದೀಪ್ ವಿವರಿಸಿದ್ದಾರೆ.

  ಚಿರು ಚಿತ್ರಕ್ಕೂ ನಾನು ಬೇಕಿತ್ತು

  ಚಿರು ಚಿತ್ರಕ್ಕೂ ನಾನು ಬೇಕಿತ್ತು

  ಒಂದ್ಕಡೆ ಹೀರೊ ಆಗಿ ಇರುವಾಗ ಮತ್ತೊಂದು ಕಡೆ ಹೋಗಿ ಪೋಷಕ ಪಾತ್ರ ಮಾಡುವುದು ಹೇಗೆ? ಎಂದು ನಿಮಗೆ ಅನ್ನಿಸಲಿಲ್ಲವೇ ಎನ್ನುವ ಪ್ರಶ್ನೆಗೆ "ಯಾಕೆಂದರೆ ಎಲ್ಲರಿಗೂ ನಾನು ಬೇಕಿತ್ತು. ವಿಜಯ್ ಚಿತ್ರಕ್ಕೆ ನಾನು ಬೇಕಿತ್ತು. ಚಿರಂಜೀವಿ ಅವರ ಚಿತ್ರಕ್ಕೂ ನಾನುಬೇಕಿತ್ತು. ಅವರು ಕರೆ ಮಾಡಿ ರಿಕ್ವೆಸ್ಟ್ ಮಾಡಿಕೊಂಡರು. ನಾನು ಆಗಲ್ಲ ಎಂದು ಹೇಳುವಷ್ಟು ದೊಡ್ಡವನಲ್ಲ. ಅದು ಚೆನ್ನಾಗಿರುತ್ತದೆ. ಅವರಿಗೆ ಅನುಕೂಲ ಆಗುತ್ತದೆ ಎಂದರೆ ಮಾಡಲು ಅಭ್ಯಂತರ ಇಲ್ಲ"

  ದುಡ್ಡು ಕೊಡ್ತೀನಿ ಎಂದರೆ ಮಾಡಲ್ಲ

  ದುಡ್ಡು ಕೊಡ್ತೀನಿ ಎಂದರೆ ಮಾಡಲ್ಲ

  "ನಾನು ಪೋಷಕ ಕಲಾವಿದ ಅಲ್ಲ. ದುಡ್ಡು ಕೊಡುತ್ತೇವೆ ಬಂದು ನಟಿಸಿ ಅಂದರೆ ಒಪ್ಪಿಕೊಳ್ಳುವುದಿಲ್ಲ. ನಾನು ಬಂದಿದ್ದು ಆತ್ಮೀಯ ಸಂಬಂಧಕ್ಕಾಗಿ. ಯಾಕಂದರೆ ಪೋಷಕ ಕಲಾವಿದರಿಗೂ ಸಿನಿಮಾದಲ್ಲಿ ಬೆಲೆ ಇರುತ್ತದೆ. ಪೋಷಕ ಪಾತ್ರಗಳು ಇಲ್ಲದೇ ಹೀರೊ ಇರಲು ಸಾಧ್ಯವಿಲ್ಲ. ವಿಲನ್ ಇಲ್ಲದೇ ಹೀರೊ ಆಗಲು ಹೇಗೆ ಸಾಧ್ಯ? ಅದೆಲ್ಲವೂ ಒಂದಾಗಬೇಕು. ಎಲ್ಲದ್ದಕ್ಕೂ ಬೆಲೆ ಕೊಡಬೇಕು. ಯಾರಾದರೂ ಆ ರೀತಿ ಕರೆದಾಗ ಯಾಕೆ ಕರೆದರು? ಅನ್ನೋದು ಮುಖ್ಯ. ಇತ್ತೀಚೆಗೆ ಅದನ್ನು ಕೂಡ ನಾನು ಬಿಟ್ಟಿದ್ದೇನೆ. ಯಾಕಂದರೆ ನನ್ನದೇ ಸಾಕಷ್ಟು ಸಿನಿಮಾಗಳಿವೆ. ಅದನ್ನ ಮುಗಿಸಬೇಕು ಎಂದಿದ್ದಾರೆ"

  ಅಂದು ಸುದೀಪ್ ಹೇಳಿದ್ದು ಏನು?

  ಅಂದು ಸುದೀಪ್ ಹೇಳಿದ್ದು ಏನು?

  ಇನ್ನು ಈ ಹಿಂದೆ 'ದಿ ವಿಲನ್' ಸಿನಿಮಾ ಸಮಯದಲ್ಲಿ ಕೂಡ ಸುದೀಪ್ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ನಟಿಸುವುದರ ಬಗ್ಗೆ ಮಾತನಾಡಿದ್ದರು. "ಪದೇ ಪದೇ ಮಲ್ಟಿಸ್ಟಾರ್ ಸಿನಿಮಾ ಮಾಡುವುದು ಚೆನ್ನಾಗಿರಲ್ಲ. ಅದರಿಂದ ನಮ್ಮ ಗುರುತು ಕೂಡ ಹೋಗಿಬಿಡುತ್ತೆ. ಸದ್ಯಕ್ಕೆ ನಾನು ಯಾವ್ದೆ ಮಲ್ಟಿಸ್ಟಾರ್ ಚಿತ್ರನೂ ಮಾಡ್ಬೇಕು ಅಂತಿಲ್ಲ. ತುಂಬಾ ಒಳ್ಳೆಯ ಹಾಗೂ ದೊಡ್ಡ ವ್ಯಕ್ತಿಗಳ ಜೊತೆ ಸಿನಿಮಾ ಮಾಡಿದ್ದೀನಿ. ಈಗ ನನ್ನ ಕೆಲವು ಚಿತ್ರಗಳಿವೆ, ಸೋ ಅದರ ಬಗ್ಗೆ ಸ್ವಲ್ಪ ಯೋಚನೆ ಮಾಡೋಣ. ದಿ ವಿಲನ್ ಸಿನಿಮಾ ಮಾಡಿದ್ದು ಕೂಡ ಶಿವಣ್ಣನ ಜೊತೆಗಿನ ಕಾಂಬಿನೇಷನ್‌ಗಾಗಿ ಮಾತ್ರ'' ಎಂದು ಸುದೀಪ್ ಹೇಳಿದ್ದರು.

  English summary
  Sudeep on Doing Multi starrer And playing supporting characters in various other languages. Vikrant Rona Acted Said that "they needed me for their scripts", thats why I did Those Roles. know more.
  Wednesday, January 4, 2023, 23:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X