'ಎ' ನೋಡಿ ಥ್ರಿಲ್ ಆಗಿದ್ದರಂತೆ ಸುದೀಪ್: ಆ ದಿನಗಳು ನೆನೆದ ಉಪೇಂದ್ರ
Recommended Video
ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ 'ಐ ಲವ್ ಯೂ' ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿದ್ದ ಕಿಚ್ಚ ಸುದೀಪ್ ಬಗ್ಗೆ ಉಪ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಪೇಂದ್ರ ಅವರು ಮಾತನಾಡುವುದಕ್ಕು ಮೊದಲು ಮಾತನಾಡಿದ್ದ ಸುದೀಪ್ ''ಸರ್ ನೀವು ಡೈರೆಕ್ಟ್ ಮಾಡಿ, ನಿಮ್ಮಿಂದ ಹಲವರು ಸ್ಫೂರ್ತಿಯಾಗಿ ಸಿನಿಮಾಗಳನ್ನ ಮಾಡ್ತಿದ್ದಾರೆ. ನಿಮ್ಮ ಚಿತ್ರದಲ್ಲಿ ನೀವಿ ಅಭಿನಯಿಸಿ'' ಎಂದು ಮನವಿ ಮಾಡಿದ್ದರು.
ಬಳಿಕ ಮೈಕ್ ತಗೊಂಡು ಮಾತನಾಡಿದ ಉಪೇಂದ್ರ ಅವರು ''ಸುದೀಪ್ ಅವರ ಬೆಳವಣಿಗೆ ಬಗ್ಗೆ ನನಗೆ ಖುಷಿ ಇದೆ. ನಮ್ಮಿಬ್ಬರ ಪರಿಚಯ ಸುಮಾರು 25 ವರ್ಷದ ಹಳೆಯದು. ಆಗ ಇಬ್ಬರು ಕಷ್ಟದ ದಿನಗಳಲ್ಲೇ ಇದ್ದೇವು'' ಎಂದು ನೆನಪು ಮೆಲುಕು ಹಾಕಿದರು.

''ನನ್ನ 'ಎ' ಸಿನಿಮಾ ನೋಡಿದ್ದ ಸುದೀಪ್ ತುಂಬಾ ಥ್ರಿಲ್ ಆಗಿದ್ದರು. ಸಿನಿಮಾ ನೋಡಿದ ನಂತರ ನನ್ನನ್ನು ಭೇಟಿಯಾಗಿದ್ದರು. ಆ ವೇಳೆ ಅವರ ರಿಯಾಕ್ಷನ್ ಈಗಲೂ ಮರೆಯಲು ಸಾಧ್ಯವಾಗಲ್ಲ. ಸುದೀಪ್ ಅವರಲ್ಲಿ ಎಂತಹ ಕಲಾವಿದ, ಎಂತಹ ನಿರ್ದೇಶಕ ಇದ್ದಾರೆ ಎಂಬುದು ನನಗೆ ಆವತ್ತೆ ಗೊತ್ತಾಗಿತ್ತು. ಆದರೆ ಇಷ್ಟೊಂದು ಉತ್ತುಂಗಕ್ಕೆ ಹೋಗ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಬಗ್ಗೆ ಹೆಮ್ಮೆ ಇದೆ'' ಉಪ್ಪಿ ಖುಷಿ ವ್ಯಕ್ತಪಡಿಸಿದರು.
ಜೂನ್ 14ರಂದು ಐ ಲವ್ ಯೂ ಸಿನಿಮಾ ರಿಲೀಸ್ ಆಗ್ತಿದೆ. ಆರ್ ಚಂದ್ರು ನಿರ್ದೇಶನ ಮಾಡಿದ್ದಾರೆ. ಮತ್ತೊಂದೆಡೆ ಕೋಟಿಗೊಬ್ಬ-3, ಪೈಲ್ವಾನ್, ಸೈರಾ ಮುಗಿಸಿರುವ ಸುದೀಪ್ ದಬಾಂಗ್-3 ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.


Click it and Unblock the Notifications











