»   » ಕಿಚ್ಚನ 'ಹೆಬ್ಬುಲಿ' ಹೇರ್ ಸ್ಟೈಲ್ ಇನ್ಮುಂದೆ ನೋಡೋಕೆ ಆಗಲ್ಲ

ಕಿಚ್ಚನ 'ಹೆಬ್ಬುಲಿ' ಹೇರ್ ಸ್ಟೈಲ್ ಇನ್ಮುಂದೆ ನೋಡೋಕೆ ಆಗಲ್ಲ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರ ಹೆಬ್ಬುಲಿ 'ಹೇರ್ ಸ್ಟೈಲ್' ಸಖತ್ ವೈರಲ್ ಆಗಿದೆ. ಯುವಕರು, ಯುವತಿಯರು, ಮಕ್ಕಳು, ಮುದುಕರು ಕೂಡ ಈ ಹೇರ್ ಸ್ಟೈಲ್ ಗೆ ಫಿದಾ ಆಗಿದ್ದಾರೆ. ಆದ್ರೆ, ಇನ್ಮುಂದೆ ಹೆಬ್ಬುಲಿಯ ಈ ಹೇರ್ ಸ್ಟೈಲ್ ನೋಡೋಕೆ ಆಗಲ್ಲ ಎಂಬುದು ಸದ್ಯಕ್ಕೆ ಶಾಕಿಂಗ್ ನ್ಯೂಸ್.

ಹೌದು, 'ಹೆಬ್ಬುಲಿ' ಚಿತ್ರಕ್ಕಾಗಿ ಸ್ಟೈಲಿಶ್ ಹೇರ್ ಡಿಸೈನ್ ಮಾಡಿಸಿದ್ದ ಸುದೀಪ್, ಈಗ ತಮ್ಮ ಮುಂದಿನ ಚಿತ್ರಕ್ಕಾಗಿ ಬದಲಾಗಬೇಕಿದೆ. ಹೀಗಾಗಿ, ತಮ್ಮ ಕುದುರೆ (Pony) ಮಾದರಿಯ ಹೇರ್ ಸ್ಟೈಲ್ ಗೆ ಸುದೀಪ್ ಗುಡ್ ಬೈ ಹೇಳುತ್ತಿದ್ದಾರೆ.[ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'!]

Sudeep's Pony Hair Style Will Change Again

ಈ ವಿಷ್ಯವನ್ನ ಸ್ವತಃ ಸುದೀಪ್ ಅವರೇ ಟ್ವಿಟ್ಟರ್ ಮೂಲಕ ಖಚಿತ ಪಡಿಸಿದ್ದು, ''Pony ಹೇರ್ ಸ್ಟೈಲ್ ಮೆಂಯ್ಟೇನ್ ಮಾಡಿದ್ದು ನನಗೆ ಒಂದು ರೀತಿಯ ಟಾಸ್ಕ್ ಆಗಿತ್ತು. ನನ್ನ ಹೇರ್ ಡಿಸೈನರ್ ಗೆ ಧನ್ಯವಾದಗಳು. ಮತ್ತೆ ನಾನು ಮೊದಲಿನಂತೆ ನನ್ನ ಕೂದಲನ್ನ ಬೆಳಸಬಹುದು'' ಎಂದು ಟ್ವೀಟ್ ಮಾಡಿದ್ದಾರೆ.[ತಮಿಳುನಾಡಿನಲ್ಲಿ ಟ್ರೆಂಡಿಂಗ್ ನಲ್ಲಿದೆ ಕಿಚ್ಚನ 'ಹೆಬ್ಬುಲಿ'!]

Sudeep's Pony Hair Style Will Change Again

ಅಂದ್ರೆ, ಸುದೀಪ್ ಅವರು ಈಗೀರುವ ಹೇರ್ ಸ್ಟೈಲ್ ಬದಲಾಯಿಸಿಕೊಳ್ಳಲು ನಿರ್ಧಾರ ಮಾಡಿದ್ದು, ಮೊದಲಿನಂತೆ ತಮ್ಮ ಕೇಶವಿನ್ಯಾಸ ಮಾಡಿಕೊಳ್ಳಲಿದ್ದಾರೆ. ಅಂದ್ಹಾಗೆ, ಕಿಚ್ಚ ಅಭಿನಯದ 'ಹೆಬ್ಬುಲಿ' ಇದೇ ತಿಂಗಳು 23 ರಂದು ಸುಮಾರು 500 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಾಣಲಿದೆ.[ಎಕ್ಸ್ ಕ್ಲೂಸಿವ್: ಕಿಚ್ಚ ಸುದೀಪ್ ರವರ 'ಹೆಬ್ಬುಲಿ' ಚಿತ್ರದ ಕಥೆ ಏನು.?]

English summary
Kiccha Sudeep Finally Decided to Relieved His Pony hairstylle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada