For Quick Alerts
  ALLOW NOTIFICATIONS  
  For Daily Alerts

  ಕನ್ನಡದ 'ಜಂಟಲ್‌ಮ್ಯಾನ್‌' ರಮೇಶ್ ಅರವಿಂದ್‌ ಬರ್ತಡೆಗೆ ಶುಭಕೋರಿದ ಸಿನಿ ತಾರೆಯರು

  |

  ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ, ಚಿರಯುವಕ ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 56ನೇ ವಸಂತಕ್ಕೆ ಕಾಲಿಟ್ಟಿರುವ ಸ್ಯಾಂಡಲ್‌ವುಡ್‌ ಜಂಟಲ್‌ಮ್ಯಾನ್‌ಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಕೋರಿದ್ದಾರೆ.

  ಸ್ನೇಹ ಜೀವಿ ರಮೇಶ್ ಅರವಿಂದ್ ಎಂದರೆ ಸಿನಿ ಜಗತ್ತಿನಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಪ್ರತಿಯೊಬ್ಬ ಕಲಾವಿದನು ಇಷ್ಟ ಪಡುವಂತಹ ನಟ. ರಮೇಶ್ ಅರವಿಂದ್ ಸಿನಿಮಾ ಜೊತೆಗೆ ಕಿರುತೆರೆಯಲ್ಲಿಯೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಭಿನಯದ ಜೊತೆಗೆ ನಿರ್ದೇಶನದಲ್ಲಿಯೂ ಸೈ ಎನಿಸಿಕೊಂಡಿರುವ ರಮೇಶ್ ಅರವಿಂದ್ ಅವರಿಗೆ ಯಾರೆಲ್ಲ ವಿಶ್ ಮಾಡಿದ್ದಾರೆ? ಏನ್ ಹೇಳಿದ್ದಾರೆ? ಮುಂದೆ ಓದಿ..

  ನಿಷ್ಠಾವಂತ ಮೇಕಪ್ ಮ್ಯಾನ್ ನಿಧನಕ್ಕೆ ಕಂಬನಿ ಮಿಡಿದ ನಟ ರಮೇಶ್ ಅರವಿಂದ್ನಿಷ್ಠಾವಂತ ಮೇಕಪ್ ಮ್ಯಾನ್ ನಿಧನಕ್ಕೆ ಕಂಬನಿ ಮಿಡಿದ ನಟ ರಮೇಶ್ ಅರವಿಂದ್

   ನಟ ಸುದೀಪ್

  ನಟ ಸುದೀಪ್

  "ನೀವು ಕೇವಲ ಬಹುಮುಖ ನಟ ಮಾತ್ರವಲ್ಲ, ನೀವು ಒಬ್ಬ ಜೆಂಟಲ್ ಮ್ಯಾನ್. ಸರ್, ನಿಮ್ಮನ್ನು ತುಂಬಾ ವರ್ಷಗಳಿಂದ ತಿಳಿದಿದ್ದೇನೆ. ಇಲ್ಲಿಯವರೆಗೂ ನಾನು ಅದೇ ಅದ್ಭುತ ಮನುಷ್ಯನನ್ನು ನೋಡುತ್ತಿದ್ದೀನಿ. ನಿಮಗೆ ಆರೋಗ್ಯ, ಸಂತೋಷ ಸಿಗಲಿ. ಹುಟ್ಟುಹಬ್ಬದ ಶುಭಾಶಯಗಳು ರಮೇಶ್ ಅರವಿಂದ್ ಸರ್" ಎಂದು ಹೇಳಿದ್ದಾರೆ.

   ಕಾಜಲ್ ಅಗರ್ ವಾಲ್

  ಕಾಜಲ್ ಅಗರ್ ವಾಲ್

  ತೆಲುಗು ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರ್ ವಾಲ್ ಸಹ ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ರಮೇಶ್ ಸರ್' ಎಂದು ಟ್ಟೀಟ್ ಮಾಡಿದ್ದಾರೆ.

  ಗಡಿದಾಟಿ ಹೋಗಲಿದೆ ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್'

   ಧನಂಜಯ್- ನಿರೂಪ್ ಭಂಡಾರಿ

  ಧನಂಜಯ್- ನಿರೂಪ್ ಭಂಡಾರಿ

  ಸ್ಯಾಂಡಲ್ ವುಡ್ ಡಾಲಿ ಧನಂಜಯ್ ಸಹ ರಮೇಶ್ ಅರವಿಂದ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸಿದ್ದಾರೆ. ಇನ್ನೂ ನಟ ನಿರೂಪ್ ಭಂಡಾರಿ, ಹುಟ್ಟುಹಬ್ಬದ ಶುಭಾಶಯಗಳು ಸರ್. ನಿಮ್ಮ 100ನೇ ಚಿತ್ರಕ್ಕೆ ಅಭಿನಂದನೆಗಳು. ಸದಾ ಸಕಾರಾತ್ಮಕತೆಯನ್ನು ಹರಡುತ್ತಿರುವುದಕ್ಕಾಗಿ ಮತ್ತು ನಾವು ಭೇಟಿಯಾದಾಗಲೆಲ್ಲ ಪ್ರೋತ್ಸಾಹದ ಮಾತುಗಳನ್ನು ಹೇಳುತ್ತಿರುತ್ತೀರಿ ಧನ್ಯವಾದಗಳು' ಎಂದು ಹೇಳಿದ್ದಾರೆ.

  BiggBoss ಗೆದ್ಮೆಲೆ ಪ್ರಥಮ ಒಳ್ಳೆ ಕೆಲಸ | Olle Hudga Pratham | Filmibeat Kannada
   ನಟ ಶ್ರೀಮುರಳಿ

  ನಟ ಶ್ರೀಮುರಳಿ

  'ರಮೇಶ್ ಅರವಿಂದ್ ಸರ್, ಜನ್ಮ ದಿನದ ಶುಭಾಶಯಗಳು. ನಿಮ್ಮ ನಗು ಮುಖ ಮತ್ತು ನಗುವ ಕಣ್ಣುಗಳು ಸದಾ ಹೀಗೆ ಇರಲಿ. ಮತ್ತಷ್ಟು ಯಶಸ್ಸು, ಸಂತೋಷ ಸಿಗಲಿ' ಎಂದು ಹೇಳುತ್ತ '100' ಸಿನಿಮಾದ ಹಾಡನ್ನು ಶೇರ್ ಮಾಡಿದ್ದಾರೆ.

  English summary
  Actor Sudeep, Srimurali, Kajal Agarwal and other stars wish to Ramesh Aravind on his Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X