»   » ಕ್ರಿಕೆಟ್ ಬಿಟ್ಟು ಕಬಡ್ಡಿ ಅಖಾಡಕ್ಕಿಳಿದ ಕಿಚ್ಚ ಸುದೀಪ್

ಕ್ರಿಕೆಟ್ ಬಿಟ್ಟು ಕಬಡ್ಡಿ ಅಖಾಡಕ್ಕಿಳಿದ ಕಿಚ್ಚ ಸುದೀಪ್

Posted By:
Subscribe to Filmibeat Kannada
ಕಿಚ್ಚ ಸುದೀಪ್ ಈಗ ಕ್ರಿಕೆಟ್ ಬಿಟ್ಟು ಕಬಡ್ಡಿ ಅಖಾಡಕ್ಕಿಳಿದಿದ್ದಾರೆ ! | Filmibeat Kannada

ಕಿಚ್ಚ ಸುದೀಪ್ ಕ್ರಿಕೆಟ್ ಬಿಟ್ಟು ಕಬಡ್ಡಿ ಆಟ ಆಡುವುದಕ್ಕೆ ಶುರು ಮಾಡಿದ್ದಾರೆ. ಇದನ್ನ ನಾವ್ ಹೇಳುತ್ತಿಲ್ಲ ಖುದ್ದು ಸುದೀಪ್ ಅವರೇ ಹೇಳುತ್ತಿದ್ದಾರೆ. ಅಂದರೆ ಸುದೀಪ್ ಕಬಡ್ಡಿ ಆಡುತ್ತಿರುವುದು ಸಿನಿಮಾದಲ್ಲಿ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಸೆಟ್ ನಲ್ಲಿ ಕಿಚ್ಚ ಸುದೀಪ್ ಎಂಟ್ರಿ ಆಗಿದೆ. ಈಗಾಗಲೇ ಅಂಬರೀಶ್ ಚಿತ್ರೀಕರಣದಲ್ಲಿ ಭಾಗಿ ಆಗಿರುವುದು ಹಳೆ ವಿಚಾರ ಆದರೆ ಸೋಮವಾರದಿಂದ ಸುದೀಪ್ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ನಿರ್ದೇಶಕ ಯಾವ ರೀತಿಯಲ್ಲಿ ಸಿನಿಮಾ ಮಾಡಿರುತ್ತಾನೆ. ಕಿಚ್ಚ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.

ಕಳೆದ ವಾರವಷ್ಟೇ ಅಂಬರೀಶ್ ಅವರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾಗ ತೆಗೆದ ಕೆಲ ಫೋಟೋಗಳನ್ನ ಸಿನಿಮಾತಂಡ ಬಿಡುಗಡೆ ಮಾಡಿತ್ತು. ಈಗ ಕಿಚ್ಚ ಸುದೀಪ್ ಅವರ ಫೋಟೋಗಳನ್ನ ರಿಲೀಸ್ ಮಾಡಿದ್ದಾರೆ ನಿರ್ದೇಶಕ ಗುರುದತ್ತ್ ಗಾಣಿಗ.

ತಮಿಳು ನಟ ಆರ್ಯ ಗೆಟಪ್ ಗೆ ಕಿಚ್ಚ ಸುದೀಪ್ ಸ್ಫೂರ್ತಿ.!

ಕಿಚ್ಚನ ಎಂಟ್ರಿ ಸೀನ್ ಚಿತ್ರೀಕರಣ ಮಾಡುವ ಅದ್ಧೂರಿಯಾಗಿರುವ ಸೆಟ್ ಹಾಕಲಾಗಿದೆಯಂತೆ. ಹಗಲು ರಾತ್ರಿಯನ್ನ ಲೆಕ್ಕ ಮಾಡದೇ ಸಿನಿಮಾತಂಡ ಚಿತ್ರೀಕರಣದಲ್ಲಿ ಭಾಗಿ ಆಗಿದೆ. ಹಾಗಾದರೆ ಸುದೀಪ್ ಬಂದ ನಂತರ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಸೆಟ್ ನಲ್ಲಿ ಏನೆಲ್ಲಾ ನಡೆಯುತ್ತಿದೆ. ಹೊಸ ಲುಕ್ ನಲ್ಲಿ ಕಿಚ್ಚ ಹೇಗೆ ಕಾಣಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಕಚ್ಚೆ ಹಾಕಿ ತೊಡೆ ತಟ್ಟಿದ ಕಿಚ್ಚ

ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಕಿಚ್ಚ ಸುದೀಪ್ ಎಂಟ್ರಿ ಸೀನ್ ಶೂಟಿಂಗ್ ಶುರುವಾಗಿದ್ದು ಕಿಚ್ಚ ಸುದೀಪ್ ಕಚ್ಚೆ ಹಾಕಿಕೊಂಡು ಕಬಡ್ಡಿ ಅಖಾಡದಿಂದ ಎಂಟ್ರಿ ಪಡೆದುಕೊಳ್ಳಲಿದ್ದಾರೆ. ಸದ್ಯ ಕಿಚ್ಚ ಕಬ್ಬಡ್ಡಿ ಆಡುತ್ತಿರುವ ಪೋಟೋಗಳನ್ನ ಬಿಡುಗಡೆ ಮಾಡಿದೆ ಸಿನಿಮಾತಂಡ. ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು ಕಿಚ್ಚನ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ.

ಚಿತ್ರೀಕರಣಕ್ಕಾಗಿ ಹಳ್ಳಿ ಸೆಟ್

ಕಿಚ್ಚನ ಇಂಟ್ರಡಕ್ಷನ್ ಸೀನ್ ಚಿತ್ರೀಕರಣ ಮಾಡಲು ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಹಳ್ಳಿಯ ಸೆಟ್ ಹಾಕಲಾಗಿದೆ. ಹಳ್ಳಿಯಲ್ಲಿ ನಡೆಯುವ ಕಬಡ್ಡಿ ಪಂದ್ಯಾವಳಿಗೆ ಬೇಕಿರುವ ರೀತಿಯಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಶೇಖರ್ ಚಂದ್ರ ಸುದೀಪ್ ಅಭಿನಯದ ದೃಶ್ಯಗಳನ್ನ ಚಿತ್ರೀಕರಣ ಮಾಡುತ್ತಿದ್ದಾರೆ.

ಚಿತ್ರತಂಡದ ಬಗ್ಗೆ ಕಿಚ್ಚನ ಮೆಚ್ಚುಗೆ

ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದು ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದಾರೆ. ಅಂಬರೀಶ್ ಅವರ ಯಂಗ್ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದು ಸುಹಾಸಿನಿ ಅವರ ಯಂಗ್ ಪಾತ್ರವನ್ನ ಶೃತಿ ಹರಿಹರನ್ ಮಾಡುತ್ತಿದ್ದಾರೆ. ಟೆಕ್ನಾಲಜಿ ಬಳಸಿ ಇಬ್ಬರ ಎತ್ತರವನ್ನು ಒಂದೇ ರೀತಿಯಲ್ಲಿ ಕಾಣುವಂತೆ ಮಾಡಲಾಗುತ್ತಿದೆ.

ಟ್ವಿಟ್ ಮೂಲಕ ಸಂತಸ ವ್ಯಕ್ತ ಪಡಿಸಿದ ಸುದೀಪ್

ಸಿನಿಮಾ ಸೆಟ್ ಗೆ ಎಂಟ್ರಿ ಕೊಟ್ಟ ನಂತರ ಸುದೀಪ್ ಈ ಬಗ್ಗೆ ಟ್ವಿಟ್ ಮಾಡಿದ್ದು "ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದೇನೆ. ಮನೆಗೆ ಬಂದಂತೆ ಎನ್ನಿಸುತ್ತಿದೆ. ನನ್ನ ಅಸಿಸ್ಟೆಂಟ್ ಆಗಿದ್ದ ಗುರು ನಿರ್ದೇಶಕನಾಗಿದ್ದಾನೆ. ಅಕ್ಕನ ಮಗ ಸಂಚಿತ್ ಅಸಿಸ್ಟೆಂಟ್ ಡೈರೆಕ್ಟರ್ ತಂಡವನ್ನ ನೋಡಿಕೊಳ್ಳುತ್ತಿದ್ದಾನೆ. ಈ ಸಣ್ಣ ವಯಸ್ಸಿನಲ್ಲೇ ಇಷ್ಟೆಲ್ಲಾ ಜವಾಬ್ದಾರಿ ಕೆಲಸ ಮಾಡುತ್ತಿರುವುದನ್ನ ನೋಡಿದರೆ ಖುಷಿ ಆಗುತ್ತಿದೆ ಎಂದಿದ್ದಾರೆ ಸುದೀಪ್ .

ಪ್ರೇಮ್ ಬರೆದ ಹಾಡಿಗೆ ಅಂಬಿ ಡ್ಯಾನ್ಸ್

ಅಂಬಿ ನಿಂಗ್ ವಯಸ್ಸಯ್ತೋ ಸಿನಿಮಾತಂಡ ಹಗಲು ರಾತ್ರಿ ಎರಡು ಹೊತ್ತು ಚಿತ್ರೀಕರಣ ಮಾಡುತ್ತಿದೆ. ರಾತ್ರಿ ಸುದೀಪ್ ಅವರ ಸೀನ್ ಗಳನ್ನ ಚಿತ್ರೀಕರಿಸಿದ್ರೆ ಬೆಳ್ಳಗ್ಗೆ ಅಂಬರೀಶ್ ಅವರ ಹಾಡಿನ ಚಿತ್ರೀಕರಣ ಮಾಡುತ್ತಿದೆ. ಪ್ರೇಮ್ ಬರೆದ ಹಾಡಿಗೆ ಅಂಬಿ ಹೆಜ್ಜೆ ಹಾಕುತ್ತಿದ್ದಾರೆ.

ಹುಚ್ಚ ವೆಂಕಟ್ ಗೆ ಉಗಿದು ಉಪ್ಪಿನಕಾಯಿ ಹಾಕಿದ ಶಿವಣ್ಣನ ಅಭಿಮಾನಿಗಳು!

English summary
Kannada actor Sudeep start shooting 'Ambhi ning vaisaytho' film, Sudeep's shooting scenes are being directed by Guru Dutt Ganiga. Ambarish, Suhasini and Shruti Hariharan are acting in movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada