For Quick Alerts
  ALLOW NOTIFICATIONS  
  For Daily Alerts

  ವಿಷ್ಣು ಅಭಿಮಾನಿಗಳಿಗೆ ಬ್ಯಾಂಕಾಕ್'ನಿಂದ ಬಂತು ಕಿಚ್ಚನ ವಿಡಿಯೋ ಸಂದೇಶ

  By Bharath Kumar
  |

  ಕಿಚ್ಚ ಸುದೀಪ್ ಮೊದಲಿನಿಂದಲೂ ವಿಷ್ಣುದಾದ ಅವರ ಅಭಿಮಾನಿ. ಮತ್ತು ಅವರ ನಟನೆ, ತತ್ವ-ಆದರ್ಶಗಳನ್ನ ಮೆಚ್ಚಿಕೊಂಡಿರುವ ನಟ. ಅದು ಎಷ್ಟರ ಮಟ್ಟಿಗೆ ಎಂಬುದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

  ಆಗಸ್ಟ್ 27 ರಂದು ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಷ್ಣು ಅಭಿಮಾನಿಗಳು, ರಾಜಕೀಯ ಗಣ್ಯರು, ಸಿನಿಮಾ ದಿಗ್ಗಜರು ಭಾಗಿಯಾಗಲಿದ್ದಾರೆ. ಇವರ ಜೊತೆ ಕಿಚ್ಚ ಸುದೀಪ್ ಕೂಡ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಕಾರಣಾಂತರಗಳಿಂದ ಸುದೀಪ್ ದೆಹಲಿಗೆ ಹೋಗುತ್ತಿಲ್ಲ.

  ರಾಷ್ಟ್ರ ಮಟ್ಟದ ಈ ಉತ್ಸವಕ್ಕೆ ಸುದೀಪ್ ಬರಲು ಸಾಧ್ಯವಾಗದಿದ್ದರೂ, ಸುದೀಪ್ ಅವರಿಂದ ಬ್ಯಾಂಕಾಕ್ ನಿಂದ ವಿಶೇಷವಾದ ವಿಡಿಯೋ ಒಂದು ಬಂದಿದೆ. ಈ ವಿಡಿಯೋದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಅಭಿಮಾನ ಮೆರೆದಿರುವ ಕಿಚ್ಚ, ಈ ಉತ್ಸವ ಯಶಸ್ವಿಯಾಗಲಿ ಎಂದು ಶುಭ ಕೋರಿದ್ದಾರೆ. ಹಾಗಿದ್ರೆ, ವಿಷ್ಣುದಾದ ಬಗ್ಗೆ ಸುದೀಪ್ ಏನಂದ್ರು? ಮುಂದೆ ಓದಿ.....

  ನಿಜವಾದ ಅಭಿಮಾನ ಅಂದ್ರೆ ಇದು

  ನಿಜವಾದ ಅಭಿಮಾನ ಅಂದ್ರೆ ಇದು

  ''ಕಲಾವಿದರು ಅಂದ್ಮೇಲೆ ಅಭಿಮಾನಿಗಳು ಇದ್ದೇ ಇರ್ತಾರೆ. ಅಭಿಮಾನಿಗಳು ಅಂದ್ಮೇಲೆ ಒಂದು ಕಾರ್ಯಕ್ರಮ ಅಥವಾ ಉತ್ಸವ ನಡೆಯುವುದು ಸಹಜ. ಕೆಲವೊಮ್ಮೆ ಕಲಾವಿದರು ನಮ್ಮ ಮಧ್ಯೆ ಇಲ್ಲ ಅಂದ್ಮೇಲೂ ಕೂಡ ಆ ಅಭಿಮಾನಿಗಳು, ಅದೇ ಅಭಿಮಾನದಿಂದ ಕಾರ್ಯಕ್ರಮ, ಉತ್ಸವಗಳು ನಡೆಸುತ್ತಿದ್ದಾರೆ ಅಂದ್ರೆ.....'ಅದು ಅಭಿಮಾನಿಗಳು'. ಅಂತಹ ಅಭಿಮಾನಿಗಳನ್ನ ನಮ್ಮ ವಿಷ್ಣು ಸರ್ ಸಂಪಾದಿಸಿದ್ದಾರೆ'' - ಸುದೀಪ್, ನಟ

  ವಿಷ್ಣು ಅಭಿಮಾನಿಗಳಿಗೆ ಸಲ್ಯೂಟ್

  ವಿಷ್ಣು ಅಭಿಮಾನಿಗಳಿಗೆ ಸಲ್ಯೂಟ್

  ''ಅವರ ನೆನಪಲ್ಲಿ, ಈ ಕಾರ್ಯಕ್ರಮಗಳನ್ನ, ಉತ್ಸವಗಳನ್ನ ಉತ್ಸಾಹದಿಂದ ನಡೆಸುತ್ತಿರುವ ಅಭಿಮಾನಿಗಳಿಗೆ ನನ್ನ ಸಲ್ಯೂಟ್. ದೆಹಲಿಯಲ್ಲಿ ಈ ಉತ್ಸವ ನಡೆಯುತ್ತಿರುವುದು, ವಿಷ್ಣು ಸರ್ ಅವರ ಆರಡಿ ಎತ್ತರದ ಪ್ರತಿಮೆ ಉದ್ಘಾಟನೆ ಆಗುತ್ತಿರುವುದು, ದೆಹಲಿ ಬಾಗಿಲಿನಲ್ಲಿ ಮೆರವಣಿಗೆ ಮಾಡುತ್ತಿರುವುದು ತುಂಬಾ ಬಹಳ ಖುಷಿ ಆಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸುಮಾರು 500 ಜನ ಅಭಿಮಾನಿಗಳು ಬೆಂಗಳೂರಿನಿಂದ ದೆಹಲಿಗೆ ಹೋಗಿ ಭಾಗವಹಿಸುತ್ತಿರುವುದು, ವಿಷ್ಣು ಸರ್ ಅವರ ಭಾವಚಿತ್ರಗಳನ್ನ ಪ್ರದರ್ಶನ ಮಾಡುತ್ತಿರುವುದು ನಿಜಕ್ಕೂ ಖುಷಿ ವಿಚಾರ'' - ಸುದೀಪ್, ನಟ

  ವಿಷ್ಣು ಸರ್ ಮಹಾನ್ ವ್ಯಕ್ತಿ

  ವಿಷ್ಣು ಸರ್ ಮಹಾನ್ ವ್ಯಕ್ತಿ

  ''ವಿಷ್ಣು ಸರ್ ಬಹಳ ದೊಡ್ಡ ಕಲಾವಿದರು. ಬಹಳ ಮಹಾನ್ ವ್ಯಕ್ತಿ. ಅವರ ಹೆಸರಲ್ಲಿ ಎಷ್ಟೇ ಕಾರ್ಯಕ್ರಮಗಳು ನಡೆದರೂ ಕೂಡ ಕಮ್ಮಿ. ನನಗೆ ತುಂಬ ಸಂತೋಷವಿದೆ. ಯಾಕಂದ್ರೆ, ಜೀವನದಲ್ಲಿ ಕೆಲವು ಸಂದರ್ಭಗಳು ಅವರೊಂದಿಗೆ ಕಾಲಕಳೆಯುವ ಅವಕಾಶ ಸಿಕ್ಕಿತ್ತು. ಹತ್ತಿರದಲ್ಲಿ ಕೂತು ಮಾತನಾಡುವುದಕ್ಕೆ ಅವಕಾಶ ಸಿಕ್ಕಿತ್ತು. ಅದೇ ನನಗೆ ಒಂದು ಅವಾರ್ಡ್'' - ಸುದೀಪ್, ನಟ

  ನಿಮ್ಮಂತ ಅಭಿಮಾನಿಗಳಿರಬೇಕು

  ನಿಮ್ಮಂತ ಅಭಿಮಾನಿಗಳಿರಬೇಕು

  ''ವಿಷ್ಣು ಸರ್ ಅವರ ಆ ದೊಡ್ಡ ಅಭಿಮಾನಿಗಳಿಗೆ ಶುಭ ಕೋರುತ್ತಾನೆ. ಅಭಿಮಾನಿಗಳು ಇರ್ಬೇಕು, ಇದ್ರೆ ನಿಮ್ಮ ತರ ಇರ್ಬೇಕು. ಥ್ಯಾಂಕ್ ಯೂ...'' - ಸುದೀಪ್, ನಟ

  ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಶುಭ ಕೋರಿದ ಸುದೀಪ್

  ಈ ಅಭಿಮಾನ ಶಾಶ್ವತವಾಗಿರಲಿ

  ಈ ಅಭಿಮಾನ ಶಾಶ್ವತವಾಗಿರಲಿ

  ''ಬಹಳ ಆಸೆ ಇತ್ತು. ನನಗೂ ಬಂದು ಭಾಗವಹಿಸಬೇಕೆಂದು. ಆದ್ರೆ, ಇನ್ನು ಶೂಟಿಂಗ್ ಮುಗಿಯದ ಕಾರಣ ನಾನು ಇನ್ನು ಬ್ಯಾಂಕಾಕ್ ನಲ್ಲಿದ್ದೀನಿ. ನಾನು ನಿಮ್ಮ ಜೊತೆಯಲ್ಲಿದ್ದೀನಿ. ವಿಷ್ಣು ಸರ್ ಹೆಸರಲ್ಲಿ ಕಾರ್ಯಕ್ರಮಗಳನ್ನ ನಡೆಸಿ, ವಿಷ್ಣು ಸರ್ ಅವರನ್ನ ಜೀವಂತವಾಗಿ ಇಟ್ಟಿದ್ದೀರಿ ಅದು ಶಾಶ್ವತವಾಗಿರಲಿ'' - ಸುದೀಪ್, ನಟ

  ಸುದೀಪ್ ಮಾತನಾಡಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  English summary
  Kiccha Sudeep Talk about dr vishnuvardhan and dr vishnuvardhan national festival at delhi

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X