»   » ಸುದೀಪ್, ಶಶಾಂಕ್ ಜೋಡಿಯಲ್ಲಿ ಮತ್ತೊಂದು ಚಿತ್ರ

ಸುದೀಪ್, ಶಶಾಂಕ್ ಜೋಡಿಯಲ್ಲಿ ಮತ್ತೊಂದು ಚಿತ್ರ

Posted By:
Subscribe to Filmibeat Kannada
ಅದು ಆಡಿಯೋ ಬಿಡುಗಡೆ ಸಮಾರಂಭ ಇರಬಹುದು, ಚಿತ್ರದ ಮುಹೂರ್ತ ಸನ್ನಿವೇಶ ಇರಬಹುದು ಕಿಚ್ಚ ಸುದೀಪ್ ಇಲ್ಲದೆ ಕಾರ್ಯಕ್ರಮಕ್ಕೆ ಕಳೆಯೇ ಇಲ್ಲ ಎಂಬಂತಹ ಪರಿಸ್ಥಿತಿ ಕನ್ನಡ ಚಿತ್ರೋದ್ಯಮದಲ್ಲಿ ನಿರ್ಮಾಣವಾಗಿದೆ. ಒಂದು ಕಡೆ ಚುನಾವಣಾ ಪ್ರಚಾರ, ಇನ್ನೊಂದು ಕಡೆ ಚಿತ್ರರಂಗ ಕಾರ್ಯಕ್ರಮಗಳಲ್ಲಿ ಕಿಚ್ಚ ಸುದೀಪ್ ಬಿಜಿಯೋ ಬಿಜಿ.

ಎಲ್ಲರೂ ಅಷ್ಟೇ ಗೆದ್ದೆತ್ತಿನ ಬಾಲ ಹಿಡಿಯುವವರೆ. ಅದರಲ್ಲೂ ನಮ್ಮ ಸಿನಿಮಾ ಮಂದಿಯಂತೂ ಈ ವಿಚಾರದಲ್ಲಿ ಒಂದೆರಡು ಹೆಜ್ಜೆ ಮುಂದು. ಸುದೀಪ್ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸದ್ದಿನ ಮೇಲೆ ಸದ್ದು ಮಾಡುತ್ತಿವೆ. ಅವರ 'ಬಚ್ಚನ್' ಚಿತ್ರವೂ ಅಷ್ಟೇ ನಿರ್ಮಾಪಕರ ಜೇಬು ಭರ್ಜಿ ಮಾಡಿದೆ.

ಸೋಲು, ಗೆಲುವನ್ನು ಸರಿಸಮನಾಗಿ ಸ್ವೀಕರಿಸುವ ಸುದೀಪ್ ಮಾತ್ರ ತಮ್ಮ ಪಾಡಿನ ಕೆಲಸವನ್ನು ತಾವು ಮಾಡಿಕೊಂಡು ಹೋಗುತ್ತಿದ್ದಾರೆ. ಇನ್ನೊಂದು ಕಡೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ.

'ಬಚ್ಚನ್' ಚಿತ್ರದ ನಿರ್ಮಾಪಕ ಶಶಾಂಕ್ ಅವರನ್ನು ಮುಂದೇನು ಎಂದು ಕೇಳಿದರೆ ಇನ್ನೂ ಬಚ್ಚನ್ ಹ್ಯಾಂಗೋವರ್ ನಿಂದ ಹೊರಬಂದಿಲ್ಲ ಎನ್ನುತ್ತಿದ್ದರು. ಈಗಲೂ ಅಷ್ಟೇ ಬಚ್ಚನ್ ಚಿತ್ರದ ಗುಂಗಿನಲ್ಲೇ ಇದ್ದಾರೆ ಶಶಾಂಕ್. ಅವರೀಗ ಬಚ್ಚನ್ ಪಾರ್ಟ್ 2 ಮಾಡಲು ಮುಂದಾಗಿದ್ದಾರೆ.

ಸುದೀಪ್ ಅವರು ಈ ವರ್ಷ ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅವು ಮುಗಿದ ಬಳಿಕವಷ್ಟೇ ಬಚ್ಚನ್ 2 ಸೆಟ್ಟೇರಲಿದೆ. ಭಾಗ ಎರಡರಲ್ಲಿ ಸುದೀಪ್ ಹೊರತುಪಡಿಸಿದರೆ ಉಳಿದವರೆಲ್ಲಾ ಹೊಸಬರಂತೆ. ಬಚ್ಚನ್ 2 ಚಿತ್ರದ ಕಥೆ ಏನು ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಶಶಾಂಕ್. (ಏಜೆನ್ಸೀಸ್)

English summary
Kannada film Bachchan sequel is on the cards. Sudeep agreed to be part of the Bachchan sequel. He will complete his pending projects and start the sequel sometime next year, sources says. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada