»   » ಮೊದಲ ಪ್ರೇಕ್ಷಕನಾಗಿ 'ಮಾಸ್ ಲೀಡರ್' ದರ್ಶನ ಪಡೆಯಲಿರುವ ಸುದೀಪ್

ಮೊದಲ ಪ್ರೇಕ್ಷಕನಾಗಿ 'ಮಾಸ್ ಲೀಡರ್' ದರ್ಶನ ಪಡೆಯಲಿರುವ ಸುದೀಪ್

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರ ಇದೇ ವಾರ (ಆಗಸ್ಟ್ 11) ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಫಸ್ಟ್ ಡೇ ಫಸ್ಟ್ ಶೋ ಈ ಚಿತ್ರವನ್ನ ನೋಡಲೇಬೇಕೆಂದು ಹ್ಯಾಟ್ರಿಕ್ ಹೀರೋ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಹೀಗಿರುವಾಗ, ಮಾಸ್ ಲೀಡರ್ ಚಿತ್ರವನ್ನ ಮೊದಲ ಪ್ರೇಕ್ಷಕನಾಗಿ ನೋಡುತ್ತಿದ್ದಾರೆ ಕಿಚ್ಚ ಸುದೀಪ್.

ಹೌದು, ಟ್ರೈಲರ್ ನೋಡಿ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವ ಸುದೀಪ್, ಶಿವಣ್ಣ ಅಭಿನಯದ 'ಮಾಸ್ ಲೀಡರ್' ಚಿತ್ರವನ್ನ ನೋಡಲಿದ್ದಾರೆ. ಬಿಡುಗಡೆಗೂ ಮುಂಚೆಯೇ 'ಮಾಸ್ ಲೀಡರ್' ಚಿತ್ರವನ್ನ ಕಿಚ್ಚ ನೋಡುತ್ತಿದ್ದು, ಇದಕ್ಕಾಗಿ ವಿಶೇಷ ಸ್ಕ್ರೀನಿಂಗ್ ಏರ್ಪಡಿಸಲಾಗಿದೆ. ಯಾವಾಗ ? ಎಲ್ಲಿ ಎಂಬುದರ ನಿಖಿರವಾದ ಮಾಹಿತಿ ಸಿಕ್ಕಿಲ್ಲವಾದರೂ, ಇಂದು ಸಿನಿಮಾ ನೋಡುತ್ತಿದ್ದಾರೆ ಎನ್ನಲಾಗಿದೆ.

'ಮಾಸ್ ಲೀಡರ್'ಗಾಗಿ ಒಂದಾದ ಸ್ಯಾಂಡಲ್ ವುಡ್ ತಾರೆಯರು

Sudeep to Watch Mass Leader Movie before release

ಈ ವಿಶೇಷ ಪ್ರದರ್ಶನದಲ್ಲಿ ನಟ ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಶಿವಣ್ಣ ಅವರ ಕುಟುಂಬ ಸದಸ್ಯರು ಭಾಗಿಯಾಗಲಿದ್ದಾರೆ. 'ಮಾಸ್ ಲೀಡರ್' ಚಿತ್ರದಲ್ಲಿ ಶಿವಣ್ಣ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದು, ಶಿವರಾಜ್ ಕುಮಾರ್ ಜೊತೆಯಲ್ಲಿ ಪ್ರಣಿತಾ, ವಿಜಯ ರಾಘವೇಂದ್ರ, ಲೂಸ್ ಮಾದ ಯೋಗೀಶ್, ಗುರು ಜಗ್ಗೇಶ್, ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಟೈಟಲ್ ವಿವಾದ ಅಂತ್ಯ: 'ಮಾಸ್ ಲೀಡರ್' ಆಗಸ್ಟ್ 11ಕ್ಕೆ ರಿಲೀಸ್

Sudeep to Watch Mass Leader Movie before release

ನರಸಿಂಹ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವೀರ ಸಮರ್ಥ ಸಂಗೀತ ನೀಡಿದ್ದಾರೆ. ತರುಣ್ ಕಂಬೈನ್ಸ್ ಅಡಿಯಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ರಾಜ್ಯಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ಮಾಸ್ ಲೀಡರ್ ಬಿಡುಗಡೆಯಾಗುತ್ತಿದೆ.

ಚಿತ್ರಕೃಪೆ: ಡಾ.ಶಿವರಾಜ್ ಕುಮಾರ್ ಯುವಸೇನೆ ಫ್ಯಾನ್ಸ್ ಕ್ಲಬ್

English summary
Kannada Actor Kiccha Sudeep will Watch Shivarajkumar starrer Mass Leader Movie before release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada