For Quick Alerts
  ALLOW NOTIFICATIONS  
  For Daily Alerts

  'ಅನಂತು v/s ನುಸ್ರತ್' ಚಿತ್ರದ ಬಗ್ಗೆ ಸುದೀಪ್ ಟ್ವೀಟ್

  |

  ನಟ ವಿನಯ್ ರಾಜ್ ಕುಮಾರ್ ನಟನೆಯ 'ಅನಂತು v/s ನುಸ್ರತ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಧರ್ಮದ ಹಿನ್ನಲೆಯಲ್ಲಿ ಇರುವ ಒಂದೊಳ್ಳೆ ಪ್ರೇಮಕಥೆ ಎಲ್ಲರಿಗೂ ಇಷ್ಟ ಆಗುವಂತಿದೆ. ಪ್ರೇಕ್ಷಕರ ಮನ ಗೆದ್ದ ಈ ಚಿತ್ರದ ಬಗ್ಗೆ ಈಗ ಸುದೀಪ್ ಟ್ವೀಟ್ ಮಾಡಿದ್ದಾರೆ.

  ''ಅನಂತು v/s ನುಸ್ರತ್' ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳನ್ನು ಕೇಳುತ್ತಿದ್ದೇನೆ. ವಿನಯ್ ಹಾಗೂ ಇಡೀ ತಂಡಕ್ಕೆ ನನ್ನ ಶುಭಾಶಯಗಳು. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿ.'' ಎಂದು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  ಸುದೀಪ್ ಮಾತ್ರವಲ್ಲದೆ ಈ ಹಿಂದೆ ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಸಹ ಸಿನಿಮಾಗೆ ವಿಶ್ ಮಾಡಿದ್ದರು. ಈ ಚಿತ್ರದ ಒಂದು ಹಾಡು ಪುನೀತ್ ಗೆ ಬಹಳ ಇಷ್ಟವಾಗಿದೆ.

  ವಿಮರ್ಶೆ : ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

  'ಅನಂತು v/s ನುಸ್ರತ್' ವಿಮರ್ಶೆ

  'ಅನಂತು v/s ನುಸ್ರತ್' ಒಂದು ಪ್ರೇಮಕಥೆ ಸಿನಿಮಾ. ಆದರೆ, ಇದು ಬರೀ ಪ್ರೇಮಕತೆಯಲ್ಲ ಬ್ರಾಹ್ಮಣ ಹುಡುಗ ಮತ್ತು ಮುಸ್ಲಿಂ ಹುಡುಗಿ ನಡುವಿನ ಅಪರೂಪದ ಪ್ರೀತಿಯ ಕಥೆ. ಹಾಗೆಂದ ಮಾತ್ರಕ್ಕೆ ಇದೊಂದು ಧರ್ಮ ಯುದ್ಧವಲ್ಲ, ಒಂದು ಸರಳ ಪ್ರೇಮ ಯುದ್ಧ. ಕುವೆಂಪು ಅವರ ''ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?'' ಎಂಬ ಸಂದೇಶವನ್ನ ಈ ಸಿನಿಮಾ ಹೇಳುತ್ತಿದೆ.

  English summary
  Kannada Actor Sudeep tweets about Vinay Rajkumar and Actress Latha Hegde's 'Ananthu vs Nusruth' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X