For Quick Alerts
  ALLOW NOTIFICATIONS  
  For Daily Alerts

  'ಪೈಲ್ವಾನ್' ಸಿನಿಮಾದ್ದು ನಕಲಿ ಪೋಸ್ಟರ್ ಎಂದವರಿಗೆ ಕಿಚ್ಚನ ತಿರುಗೇಟು

  |
  pailwan kannada movie ; 'ಪೈಲ್ವಾನ್' ಸಿನಿಮಾದ್ದು ನಕಲಿ ಪೋಸ್ಟರ್ ಎಂದವರಿಗೆ ಕಿಚ್ಚನ ತಿರುಗೇಟು..!

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬ್ಯುಸಿ ಇರುವ ಸಿನಿಮಾಗಳ ಪೈಕಿ 'ಪೈಲ್ವಾನ್' ಕೂಡ ಒಂದಾಗಿದೆ. ಈ ಸಿನಿಮಾಗಾಗಿ, ಕುಸ್ತಿ ಪಟುವಿನ ಪಾತ್ರಕ್ಕಾಗಿ ಸುದೀಪ್ ಸಾಕಷ್ಟು ಬೆವರು ಸುರಿಸಿದ್ದಾರೆ.

  ಅಂದಹಾಗೆ, ಇತ್ತೀಚಿಗಷ್ಟೆ ಈ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿತ್ತು. ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿ ಇದ್ದ ಈ ಪೋಸ್ಟರ್ ಅಭಿಮಾನಿಗಳಿಗೆ ಬಹಳ ಇಷ್ವವಾಯ್ತು. ಆದರೆ, ಇನ್ನೊಂದು ಕಡೆ ಪೋಸ್ಟರ್ ನೋಡಿ ಕೆಲವರು ಕೊಂಕು ತೆಗೆಯೋಕ್ಕೆ ಶುರು ಮಾಡಿದರು.

  'ಪೈಲ್ವಾನ್' ಸಿನಿಮಾದ ಪೋಸ್ಟರ್ ನಕಲಿ. ಇಲ್ಲಿ ಯಾರದ್ದೋ ದೇಹಕ್ಕೆ ಸುದೀಪ್ ಅವರ ತಲೆ ಅಂಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಇಂತಹ ಮಾತುಗಳು ಕಿಚ್ಚನ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು.

  ಆದರೆ, ಈಗ ಈ ಘಟನೆಯ ಬಗ್ಗೆ ಸ್ವತಃ ಸುದೀಪ್ ಅವರೇ ಟ್ವೀಟ್ ಮಾಡಿ ಉತ್ತರ ನೀಡಿದ್ದಾರೆ. ಮುಂದೆ ಓದಿ...

  ಟ್ವಿಟ್ಟರ್ ನಲ್ಲಿ ಕಿಚ್ಚನ ಸ್ಪಷ್ಟನೆ

  ಟ್ವಿಟ್ಟರ್ ನಲ್ಲಿ ಕಿಚ್ಚನ ಸ್ಪಷ್ಟನೆ

  'ಪೈಲ್ವಾನ್' ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಚಿತ್ರದ ಪೋಸ್ಟರ್ ನಕಲಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಪೋಸ್ಟರ್ ಬಗ್ಗೆ ಕಮೆಂಟ್ ಮಾಡುತ್ತಿದ್ದವರಿಗೆ ಸುದೀಪ್ ಉತ್ತರ ನೀಡಿದ್ದಾರೆ. ಕೆಲವರಿಗೆ ಇದ್ದ ಅನುಮಾನಗಳಿಗೆ ತೆರೆ ಏಳೆದಿದ್ದಾರೆ.

  ಸುದೀಪ್ ಟ್ವೀಟ್ ನಲ್ಲಿ ಏನಿದೆ?

  ''ನಾನು 'ಪೈಲ್ವಾನ್' ಸಿನಿಮಾದ ಪೋಸ್ಟರ್ ನಕಲಿ ಎಂದವರನ್ನು ದೂಷಣೆ ಮಾಡುವುದಿಲ್ಲ. ನಾನೇ ಅವರಿಗೆ ಆ ರೀತಿ ಭಾವನೆ ಬರುವ ಹಾಗೆ ಮಾಡಿರಬಹುದು. 'ಪೈಲ್ವಾನ್' ಎನ್ನುವುದು ಒಂದು ಪ್ರಯೋಗ. ನಾನು ಅದನ್ನು ಆನಂದಿಸಿದ್ದೇನೆ. ಜಿಮ್ ಗೆ ಹೋಗುವುದು ಕಥೆಗೆ ಇದ್ದ ಅಗತ್ಯ.'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  ನಿರ್ದೇಶಕರ ಟ್ವೀಟ್

  ನಿರ್ದೇಶಕರ ಟ್ವೀಟ್

  ಈ ಹಿಂದೆ ಅಂದರೆ ಪೋಸ್ಟರ್ ಬರುವುದಕ್ಕೆ ಮುಂಚೆಯೇ ಚಿತ್ರದ ನಿರ್ದೇಶಕರಾದ ಕೃಷ್ಣ ಸುದೀಪ್ ಅವರ ವರ್ಕ್ ಔಟ್ ಬಗ್ಗೆ ಟ್ವೀಟ್ ಮಾಡಿದ್ದರು. ಸತತ ನಾಲ್ಕು ತಿಂಗಳು ಸುದೀಪ್ ದೇಹವನ್ನು ಹುರಿಗೊಳಿಸಿರುವ ಫೋಟೋವನ್ನು ಹಂಚಿಕೊಂಡಿದ್ದರು.

  ರಚಿತಾ ರಾಮ್ ಮೆಚ್ಚಿಗೆ

  ರಚಿತಾ ರಾಮ್ ಮೆಚ್ಚಿಗೆ

  'ಪೈಲ್ವಾನ್' ಪೋಸ್ಟರ್ ನೋಡಿ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಅನೇಕರು ಮೆಚ್ಚಿಕೊಂಡಿದ್ದಾರೆ. ನಟಿ ರಚಿತಾ ರಾಮ್ ಚಿತ್ರದ ಪೋಸ್ಟರ್ ಗೆ ಮನಸೋತಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ಶಶಾಂಕ್, ರವಿವರ್ಮ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ.

  'ಪೈಲ್ವಾನ್' ಲುಕ್ ಗೆ ಮನಸೋತ ರಚಿತಾ ರಾಮ್

  8 ಭಾಷೆಗಳಲ್ಲಿ ಸಿನಿಮಾ

  8 ಭಾಷೆಗಳಲ್ಲಿ ಸಿನಿಮಾ

  8 ಭಾಷೆಗಳಲ್ಲಿ 'ಪೈಲ್ವಾನ್' ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲಾನ್ ನಡೆಸಿದೆ. 'ಹೆಬ್ಬುಲಿ' ಕೃಷ್ಣ ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ಆಕಾಂಕ್ಷ ಸಿಂಗ್ ನಾಯಕಿಯಾಗಿದ್ದಾರೆ. ಈಗಾಗಲೇ ಪೋಸ್ಟರ್ ದೊಡ್ಡ ಮಟ್ಟದ ಸುದ್ದಿ ಮಾಡಿದೆ.

  English summary
  Kannada actor Sudeep tweets about 'Pailwaan' movie poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X