For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಸಿಂಬು ಹೊಸ ಚಿತ್ರಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್

  |

  ತಮಿಳು ನಟ ಸಿಂಬು ಅಭಿನಯಿಸಿರುವ ಹೊಸ ಚಿತ್ರಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ಸ್ ಸಾಥ್ ನೀಡುತ್ತಿದ್ದಾರೆ. ಸಿಂಬು ನಟಿಸಿರುವ 'ಮಾನಡು' ಸಿನಿಮಾ ಬಹುಭಾಷೆಯಲ್ಲಿ ತೆರೆಕಾಣಲು ಸಜ್ಜಾಗಿದ್ದು, ಸ್ಟಾರ್ ನಟರು ಹಾಗೂ ಸ್ಟಾರ್ ಮೇಕರ್ಸ್ ಕೈ ಜೋಡಿಸಿದ್ದಾರೆ.

  ಫೆಬ್ರವರಿ 3 ರಂದು ಸಿಂಬು ಅವರ ಮಾನಡು ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಐದು ಭಾಷೆಯಲ್ಲಿ ಮಾನಡು ಟೀಸರ್ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಕಿಚ್ಚ ಸುದೀಪ್ ರಿಲೀಸ್ ಮಾಡಲಿದ್ದಾರೆ. ಮಧ್ಯಾಹ್ನ 2.34 ಗಂಟೆಗೆ ಮಾನಡು ಕನ್ನಡ ಟೀಸರ್ ಅನಾವರಣ ಮಾಡಲಿದ್ದಾರೆ.

  50 ದೇಶ, 6 ಭಾಷೆಯಲ್ಲಿ ಸುದೀಪ್ 'ವಿಕ್ರಾಂತ್ ರೋಣ' ಬಿಡುಗಡೆ50 ದೇಶ, 6 ಭಾಷೆಯಲ್ಲಿ ಸುದೀಪ್ 'ವಿಕ್ರಾಂತ್ ರೋಣ' ಬಿಡುಗಡೆ

  ತೆಲುಗಿನಲ್ಲಿ ನಟ ರವಿತೇಜ ಮಾನಡು ಟೀಸರ್ ರಿಲೀಸ್ ಮಾಡುತ್ತಿದ್ದಾರೆ. ಮಲಯಾಳಂ ಭಾಷೆಯಲ್ಲಿ ಪೃಥ್ವಿರಾಜ್ ಸುಕುಮಾರ್ ಬಿಡುಗಡೆ ಮಾಡುತ್ತಿದ್ದಾರೆ. ಹಾಗೂ ಹಿಂದಿಯಲ್ಲಿ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್ ಸಾಥ್ ನೀಡುತ್ತಿದ್ದಾರೆ.

  ಅಂದ್ಹಾಗೆ, ಮಾನಡು ಸಿನಿಮಾ ರಾಜಕೀಯ ಥ್ರಿಲ್ಲರ್ ಕಥೆ ಹೊಂದಿದೆ. ವೆಂಕಟ್ ಪ್ರಭು ಈ ಚಿತ್ರ ನಿರ್ದೇಶಿಸಿದ್ದು, ಸುರೇಶ್ ಕೆ ನಿರ್ಮಾಣ ಮಾಡಿದ್ದಾರೆ.

  ಸಿಂಬು ಜೊತೆ ಕಲ್ಯಾಣಿ ಪ್ರಿಯಾದರ್ಶನಿ, ಎಸ್‌ಜೆ ಸೂರ್ಯ, ಭಾರತೀರಾಜ, ಎಸ್‌ಎ ಚಂದ್ರಶೇಖರ್, ಕರುಣಾಕರ್ಣನ್, ಮನೋಜ್ ಭಾರತೀರಾಜ, ಉದಯ, ಅರವಿಂದ್ ಆಕಾಶ್, ರವಿಕಾಂತ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ತಾರಬಳಗದಲ್ಲಿದ್ದಾರೆ.

  Recommended Video

  ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅಖಿಲಾ ಪಜಿಮಣ್ಣು | Akhila Pajimannu
  English summary
  Tamil actor Silambarasan's Maanadu teaser to release in 5 languages tomorrow. Kannada Version will be revealed by sudeep.
  Wednesday, February 3, 2021, 9:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X