»   » ಒಂದು ದಿನ ಮುಂಚೆನೇ 'ಕುಚಿಕು ಗೆಳಯ'ನಿಗೆ ವಿಶ್ ಮಾಡಿದ ಸುದೀಪ್

ಒಂದು ದಿನ ಮುಂಚೆನೇ 'ಕುಚಿಕು ಗೆಳಯ'ನಿಗೆ ವಿಶ್ ಮಾಡಿದ ಸುದೀಪ್

Posted By:
Subscribe to Filmibeat Kannada
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಕರುನಾಡ ಕಲಾರತ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಧ್ಯೆ ಎಲ್ಲವೂ ಸರಿಯಿಲ್ಲ, ಇವರಿಬ್ಬರ ಮಧ್ಯೆ ಮನಸ್ತಾಪ ಮೂಡಿದೆ, ಹಾಗೆ, ಹೀಗೆ ಅಂತ ಮಾತನಾಡಿಕೊಳ್ಳುತ್ತಿರುವವರಿಗೇನು ಕಮ್ಮಿಯಿಲ್ಲ.

ಆದ್ರೆ, ಅವರಿವರ ಮಾತಿಗೆ ಕಿವಿ ಕೊಡದ ಈ ಇಬ್ಬರು ಸೂಪರ್ ಸ್ಟಾರ್ ಗಳು ಮಾತ್ರ ಒಬ್ಬರಿಗೊಬ್ಬರು ಸಂತೋಷ, ದುಃಖಗಳನ್ನ ಹಂಚಿಕೊಂಡು ಆರಾಮಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ, ದರ್ಶನ್ ಅವರ 40ನೇ ವರ್ಷದ ಹುಟ್ಟುಹಬ್ಬ.[ದರ್ಶನ್ ಹುಟ್ಟು ಹಬ್ಬಕ್ಕೆ ಬೆಳ್ಳಿತೆರೆಯ ಯಾರೆಲ್ಲಾ ವಿಶ್ ಮಾಡಿದ್ದಾರೆ..?]

ಹೌದು, 'ಚಕ್ರವರ್ತಿ'ಯ 40ನೇ ಬರ್ತ್ ಡೇ ಗೆ ಕಿಚ್ಚ ಸುದೀಪ್ ಶುಭ ಕೋರಿದ್ದು, ಅದು ಒಂದು ದಿನ ಮುಂಚೆಯೇ ಎಂಬುದು ವಿಶೇಷವಾಗಿದೆ.

'ದಚ್ಚು' ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಕಿಚ್ಚ

'ದಾಸ'ನ ಜನುಮದಿನಕ್ಕೆ ತಮ್ಮ ಕುಚಿಕು ಗೆಳೆಯ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಶುಭಕೋರಿರುವ ಸುದೀಪ್ ದರ್ಶನ್ ಗೆ ಅರಿಸಿ, ಹಾರೈಸಿದ್ದಾರೆ.[ಮಧ್ಯರಾತ್ರಿ 'ಚಕ್ರವರ್ತಿ'ಯ ಬರ್ತ್ ಡೇ ಸೆಲೆಬ್ರೇಷನ್: ದರ್ಶನ್ ಮನೆ ಮುಂದೆ ಜಾತ್ರೆ]

ಒಂದು ದಿನ ಮುಂಚೆಯೇ ಬರ್ತ್ ಡೇ ವಿಶ್

ಫೆಬ್ರವರಿ 16 ದರ್ಶನ್ ಅವರ ಹುಟ್ಟುಹಬ್ಬ. ಆದ್ರೆ, ಅಭಿನಯ ಚಕ್ರವರ್ತಿ ಒಂದು ದಿನ ಮುಂಚೆಯೇ ಅಂದ್ರೆ, ಫೆಬ್ರವರಿ 15 ರಂದೇ ಟ್ವಿಟ್ಟರ್ ಮೂಲಕ ದರ್ಶನ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.[ಕುಚುಕು ಸ್ನೇಹಿತರ ನಡುವೆ ವಿರಸ: ಸುದೀಪ್ ಸ್ಪಷ್ಟನೆ]

ದರ್ಶನ್ ಗೆ ಅರಸಿ, ಹಾರೈಸಿದ ಕಿಚ್ಚ

''ದಾಸ ದರ್ಶನ್, ಆ ದೇವರು ನಿನಗೆ ಆರೋಗ್ಯ ಮತ್ತು ಸಂತೋಷ ನೀಡಲಿ, ಈ ವರ್ಷ ನಿನಗೆ ರಾಕಿಂಗ್ ಆಗಿರಲಿ. ಹ್ಯಾಪಿ ಬರ್ತ್ ಡೇ ಮೈ ಫ್ರೆಂಡ್. ನಾಳೆ ನಿನ್ನ ದಿನ ಸೂಪರ್ ಆಗಿರಲಿ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.[ಎಲ್ಲರ ಬಾಯಿಗೆ ಗೋದ್ರೇಜ್ ಬೀಗ ಹಾಕಿದ ದರ್ಶನ್, ಸುದೀಪ್]

ಪ್ರತಿ ವರ್ಷವೂ ವಿಶ್ ಮಾಡುವ ಕಿಚ್ಚ

ದರ್ಶನ್ ಹುಟ್ಟುಹಬ್ಬದ ದಿನ ಸುದೀಪ್, ಸುದೀಪ್ ಹುಟ್ಟುಹಬ್ಬದ ದಿನ ದರ್ಶನ್ ವಿಶ್ ಮಾಡಿದ್ರಾ ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತೆ. ಆದ್ರೆ, ಪ್ರತಿ ವರ್ಷವೂ ಸುದೀಪ್ ಹಾಗೂ ದರ್ಶನ್ ಎಲ್ಲೇ ಇದ್ರೂ ತಮ್ಮ ತಮ್ಮ ಬರ್ತ್ ಡೇಗೆ ಮರೆಯದೆ ವಿಶ್ ಮಾಡುತ್ತಾರೆ ಎಂಬುದಕ್ಕೆ ನಿದರ್ಶನಗಳು ಕಣ್ಮುಂದೆ ಇವೆ.

ದರ್ಶನ್-ಸುದೀಪ್ ಚೆನ್ನಾಗಿದ್ದಾರಾ?

ಇಷ್ಟೆಲ್ಲಾ ಇದ್ರೂ, ದರ್ಶನ್-ಸುದೀಪ್ ಚೆನ್ನಾಗಿದ್ದಾರಾ? ಎಂಬ ಪ್ರಶ್ನೆ ಮಾತ್ರ ಪದೇ ಪದೇ ಉದ್ಬವವಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ಇಬ್ಬರು ಒಟ್ಟಿಗೆ ಯಾವುದೇ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿಲ್ಲ, ಈ ಮಧ್ಯೆ, ಸುದೀಪ್ ನಿರೂಪಣೆ ಮಾಡುವ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಅತಿಥಿಯಾಗಿ ದರ್ಶನ್ ಬರುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ, ಇದುವರೆಗೂ ದರ್ಶನ್ ಬರದೇ ಇರುವುದು ಈ ಪ್ರಶ್ನೆಗೆ ಮತ್ತಷ್ಟು ಪುಷ್ಠಿ ನೀಡಿತ್ತು.

ಅಂತೆ-ಕಂತೆಗಳನ್ನ ನಂಬಬೇಡಿ

ಅದೇನೆ ಇರಲಿ, ದರ್ಶನ್ ಮತ್ತು ಸುದೀಪ್ ಮಧ್ಯೆ ಬಾಂಧವ್ಯ ಚೆನ್ನಾಗಿಯೇ ಇದೆ. ಅದನ್ನ ಇಬ್ಬರು ನಟರು ಆಗಾಗ ಹೇಳುತ್ತಲೇ ಬಂದಿದ್ದಾರೆ. ಇದಕ್ಕೆ ದರ್ಶನ್ ಅವರ ಈ ಹುಟ್ಟುಹಬ್ಬ ಮತ್ತೊಂದು ನಿದರ್ಶನವಾಗಿದೆ.[ಕಿಚ್ಚ ಸುದೀಪ್ - ದರ್ಶನ್ ನಡುವೆ ಬಿರುಕು? ಟ್ವಿಟ್ಟರ್ ನಲ್ಲಿ ನಡೆದದ್ದೇನು? ]

English summary
Kannada Actor Sudeep Wish to His Best Freind Challenging Star Darshan For 40th Birthday On February 16th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada