»   » ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾದ ಸುಧಾರಾಣಿ ಮಗಳು

ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾದ ಸುಧಾರಾಣಿ ಮಗಳು

Posted By:
Subscribe to Filmibeat Kannada
ಸುಧಾರಾಣಿ ಮಗಳು ನಿಧಿ ಸ್ಯಾಂಡಲ್ ವುಡ್ ಗೆ ಎಂಟ್ರಿ | Filmibeat Kannada

ದೊಡ್ಡ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರುವುದು ಸಾಮಾನ್ಯ. ಅದೇ ರೀತಿ ಈಗ ಸುಧಾರಾಣಿ ಮಗಳು ಕೂಡ ಅಮ್ಮನ ರೀತಿ ಸಿನಿಮಾದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. 'ಇದು ಚಕ್ರವ್ಯೂಹ' ಎನ್ನುವ ಹೊಸ ಚಿತ್ರದಲ್ಲಿ ಇದೀಗ ಸುಧಾರಾಣಿ ಮಗಳು ನಿಧಿ ನಟಿಸುತ್ತಿದ್ದಾರೆ.

ಈ ಹಿಂದೆ ಸುಧಾರಾಣಿ ಜೊತೆ ಸಣ್ಣ ಜಾಹೀರಾತಿನಲ್ಲಿ ನಿಧಿ ಕಾಣಿಸಿಕೊಂಡಿದ್ದರು. ಆ ಬಳಿಕ ಇದೀಗ ದೊಡ್ಡ ಸ್ಕ್ರೀನ್ ಮೇಲೆ ಮಿಂಚಲು ಅವರು ಸಿದ್ಧವಾಗಿದ್ದಾರೆ. 'ಇದು ಚಕ್ರವ್ಯೂಹ' ಎಂಬ ಹೊಸ ಸಿನಿಮಾದಲ್ಲಿ ನಿಧಿ ನಟಿಸುತ್ತಿದ್ದು, ಇದು ನಟ ಧರ್ಮ ಕೀರ್ತಿರಾಜ್ ನಟನೆಯ ಹೊಸ ಚಿತ್ರವಾಗಿದೆ.

 Sudharani daughter Nidhi to make her debut

ಸುಧಾರಾಣಿ ಚಿತ್ರರಂಗಕ್ಕೆ ತಮ್ಮ 12 ನೇ ವಯಸ್ಸಿನಲ್ಲಿ ಎಂಟ್ರಿ ಕೊಟ್ಟಿದ್ದರು. ಆದರೆ ಅವರ ಮಗಳು ನಿಧಿ 17 ವರ್ಷಕ್ಕೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಸುಧಾರಾಣಿ ಕೂಡ ಅಭಿನಯಿಸುತ್ತಿದ್ದು, ರಿಯಲ್ ಅಮ್ಮ ಮಗಳು ರೀಲ್ ನಲ್ಲಿಯೂ ಒಂದಾಗಿದ್ದಾರೆ. 'ಇದು ಚಕ್ರವ್ಯೂಹ' ಚಿತ್ರದಲ್ಲಿ ತಾಯಿ ಮಗಳ ಪಾತ್ರದಲ್ಲಿ ಸುಧಾರಾಣಿ ಮತ್ತು ನಿಧಿ ಕಾಣಿಸಿಕೊಳ್ಳುತ್ತಿದ್ದಾರೆ.

English summary
Actress Sudharani daughter Nidhi to make her debut in Kannada Movie 'Idu Chakravyuha'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada