twitter
    For Quick Alerts
    ALLOW NOTIFICATIONS  
    For Daily Alerts

    ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ: ಸುಮಲತಾ ಅಂಬರೀಶ್

    |

    ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೆ ಸಂತದದ ಸುದ್ದಿ ಸಿಕ್ಕಿದೆ. ನೆಚ್ಚಿನ ನಟನ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಮೊದಲ ಹಂತದ ಪ್ರತಿಕ್ರಿಯೆ ನಡೆದಿದ್ದು, ಸರ್ಕಾರ 5 ಕೋಟಿ ರೂಪಾಯಿ ನೀಡಿದೆ. ಸ್ಮಾರಕ ನಿರ್ಮಾಣಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

    Recommended Video

    Ambi-Vishnu|ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ ಎಂದ ಸುಮಲತಾ ಅಂಬರೀಶ್ | Filmibeat Kannada

    ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಅಂಬರೀಶ್ ಪ್ರತಿಷ್ಠಾನ ಸಮಿತಿಯನ್ನು ಜನವರಿಯಲ್ಲಿ ರಚಿಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಎಂಟು ಸದಸ್ಯರ ಈ ಸಮಿತಿಯು ಇದೇ ಮೊದಲ ಬಾರಿಗೆ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿತು.

    ಅಂಬರೀಶ್ ಅಭಿಮಾನಿಗಳಿಗೆ ಖುಷಿ ಸುದ್ದಿ: ಸ್ಮಾರಕ ನಿರ್ಮಾಣದ ಜಮೀನಿಗೆ ಅನುಮೋದನೆಅಂಬರೀಶ್ ಅಭಿಮಾನಿಗಳಿಗೆ ಖುಷಿ ಸುದ್ದಿ: ಸ್ಮಾರಕ ನಿರ್ಮಾಣದ ಜಮೀನಿಗೆ ಅನುಮೋದನೆ

    ಇದರೆ ಬೆನ್ನಲ್ಲೆ ಇನ್ನೊಂದು ಕಡೆ ಡಾ.ವಿಷ್ಣುವರ್ಧನ್ ಸ್ಮಾರಕ ವಿಚಾರವನ್ನು ಕಡೆಗಣಿಸಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ವಿಷ್ಣುವರ್ಧನ್ ನಿಧನ ಹೊಂದಿ ಅನೇಕ ವರ್ಷಗಳಾದರು ಇನ್ನೂ ಸ್ಮಾರಕ ನಿರ್ಮಾಣವಾಗಿಲ್ಲ ಎನ್ನುವ ಬೇಸರ ಅಭಿಮಾನಿಗಳನ್ನು ಕಾಡುತ್ತಿದೆ. ಈ ವಿಚಾರಕ್ಕೆ ಸಂಬಂಧಿದ್ದಂತೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.

    Sumalatha Ambareesh Clarified About Vishnuvardhan Memoria

    ವಿಷ್ಣುಸ್ಮಾರಕ ಅವರ ಮನೆಯವರ ಅಪೇಕ್ಷೆಯಂತೆ ಮೈಸೂರಿನಲ್ಲೇ 1 ವರ್ಷದ ಹಿಂದೆಯೆ ಪ್ರಾರಂಭವಾಗಿದೆ. ಆದರೆ ಕಲೆವು ಅಭಿಮಾನಿಗಳಿಗೆ ತಿಳಿದುಬಂದಿಲ್ಲ. ಸರ್ಕಾರಾ 10 ಕೋಟಿಯಲ್ಲಿ 5 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ ಅಂಬರೀಶ್,

    "ನಮ್ಮ ಪ್ರೀತಿಯ ವಿಷ್ಣುವರ್ಧನ್ ರವರ ಸ್ಮಾರಕದ ಕೆಲಸ ಅವರ ಮನೆಯವರ ಅಪೇಕ್ಷೆಯಂತೆ ಮೈಸೂರಿನಲ್ಲೇ 1 ವರ್ಷದ ಹಿಂದೆಯೇ ಶುರು ಆಗಿರುವುದು ಕೆಲವು ಅಭಿಮಾನಿಗಳಿಗೆ ತಿಳಿದುಬಂದಿಲ್ಲ. ನನಗೆ ತಿಳಿದಿರುವಂತೆ ಸರಕಾರ ಘೋಷಿಸಿದ್ದ 10 ಕೋಟಿಯಲ್ಲಿ 5 ಕೋಟಿ ಬಿಡುಗಡೆ ಮಾಡಿದೆ. ಅನಗತ್ಯ ಮಾತುಗಳಿಂದ ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳೆಯೋದು ಬೇಡ" ಎಂದಿದ್ದಾರೆ.

    ವಿಷ್ಣು ಮತ್ತು ಅಂಬಿ ಜೊತೆಗಿರುವ ಒಂದಿಷ್ಟು ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವಿಷ್ಣು ಮತ್ತು ಅಂಬಿ ಅವರ ಸ್ನೇಹ ಎಂತಹದ್ದು ಎಂದು ಎಲ್ಲರಿಗೂ ಗೊತ್ತಿರೋದೆ. 'ನಿಜವಾದ ಸ್ಮೇಹಕ್ಕೆ ಹುಟ್ಟು ಸಾವು ಎನ್ನುವುದಿಲ್ಲ' ಎಂದು ಸುಮಲತಾ ಅವರೇ ಟ್ವೀಟ್ ನಲ್ಲಿ ಹೇಳಿದ್ದಾರೆ.

    English summary
    Sumalatha Ambareesh clarified about Vishnuvardhan memorial.
    Tuesday, June 30, 2020, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X