For Quick Alerts
  ALLOW NOTIFICATIONS  
  For Daily Alerts

  ನಟಿ ಸುಮಲತಾ ಅಂಬರೀಶ್ ಇ-ಮೇಲ್ ಹ್ಯಾಕ್

  By Rajendra
  |

  ಬಹುಭಾಷಾ ತಾರೆ ಹಾಗೂ ವಸತಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅವರ ಇ-ಮೇಲ್ ಅಕೌಂಟ್ ಹ್ಯಾಕ್ ಆಗಿದೆ. ಸಾಮಾನ್ಯವಾಗಿ ಹ್ಯಾಕರ್ ಗಳು ಸೆಲೆಬ್ರಿಟಿಗಳ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಗಳನ್ನು ಹ್ಯಾಕ್ ಮಾಡುತ್ತಾರೆ.

  ಆದರೆ ಈ ಬಾರಿ ನೇರವಾಗಿ ಸುಮಲತಾ ಅವರ ಇ-ಮೇಲ್ ಗೆ ಕೈಹಾಕಿದ್ದಾರೆ. ಸುಮಲತಾ ಅವರ ಯಾಹೂ ಇ-ಮೇಲ್ ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಅವರ ಸ್ನೇಹಿತರ ಐಡಿಗಳಿಗೆ ಸುಳ್ಳು ಸಂದೇಶ ರವಾನಿಸಿದ್ದಾರೆ.

  ಆ ಸುಳ್ಳು ಸಂದೇಶದ ಸಾರಾಂಶ ಇಂತಿದೆ, "ಸುಮಲತಾ ಅವರು ಉಕ್ರೇನ್ ನ ಕೀವ್ ಪ್ರದೇಶದಲ್ಲಿ ಸಿಲುಕಿದ್ದಾರೆ. ಹಾಗಾಗಿ ಅವರು ಅಲ್ಲಿಂದ ಪಾರಾಗಿ ಬರಲು ಸಹಾಯ ಮಾಡಿ" ಎಂದು ಸಂದೇಶ ರವಾನಿಸಿದ್ದಾರೆ. ಆದರೆ ಯಾವ ಉದ್ದೇಶಕ್ಕಾಗಿ ಈ ರೀತಿ ಮಾಡಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

  ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡಿರುವ ಸುಮಲತಾ ಅವರು, ತನ್ನ ಅಕೌಂಟ್ ಹ್ಯಾಕ್ ಹಾಗಿದೆ. ಆದ ಕಾರಣ ತನ್ನ ಅಕೌಂಟ್ ನಿಂದ ಬರುವ ಸಂದೇಶಗಳಿಗೆ ಉತ್ತರಿಸದಂತೆ ಮನವಿ ಮಾಡಿದ್ದಾರೆ. ಹ್ಯಾಕರ್ ಗಳು ಹಣಕ್ಕಾಗಿ ಈ ರೀತಿ ಮಾಡಿರುವ ಸಾಧ್ಯತೆಗಳಿವೆ. ಆದರೆ ಈ ಸಂಬಂಧ ಯಾವುದೇ ದೂರನ್ನು ಸುಮಲತಾ ಅವರು ದಾಖಲಿಸಿದಂತಿಲ್ಲ.

  ತೀರಾ ಇತ್ತೀಚೆಗೆ ತೆಲುಗಿನ ತಾರೆ ಅಂಜಲಿ ದ್ವಿವೇದಿ ಅವರ ಟ್ವಿಟ್ಟರ್ ಅಕೌಂಟನ್ನು ಹ್ಯಾಕ್ ಮಾಡಲಾಗಿತ್ತು. ಅವರ ಅಕೌಂಟ್ ಮೂಲಕ ಕಿಡಿಗೇಡಿಗಳು ಅಶ್ಲೀಲ ಚಿತ್ರಗಳನ್ನು ರವಾನಿಸಿದ್ದರು. ಇದರಿಂದ ಅಂಜಲಿ ಗಲಿಬಿಲಿಯಾಗಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದರು. (ಏಜೆನ್ಸೀಸ್)

  English summary
  Rebel Star and Housing Minister M.H. Ambareesh's wife Sumalatha files complaint over hacking of her email account. The actress requests that, "My Yahoo account hacked please ignore suspect mails".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X