For Quick Alerts
  ALLOW NOTIFICATIONS  
  For Daily Alerts

  ಅಂಬಿಯ ಹೊಸ ಅವತಾರ ಕಂಡು ಬೆರಗಾದ ಸುಮಲತಾ

  By Pavithra
  |
  ಅಂಬಿ ಹೊಸ ಲುಕ್‌ಗೆ ಮತ್ತೆ ಫಿದಾ ಆದ ಸುಮಲತಾ..! | Filmibeat Kannada

  ರೆಬಲ್ ಸ್ಟಾರ್ ಅಂಬರೀಶ್ ಸದ್ಯ ರಾಜಕೀಯವನ್ನು ಕಂಪ್ಲೀಟ್ ಆಗಿ ಪಕ್ಕಕ್ಕಿಟ್ಟು ಆಯ್ದ ಸಿನಿಮಾಗಳಲ್ಲಿ ಮಾತ್ರ ಅಭಿನಯ ಮಾಡುತ್ತಿರುವ ಕಲಾವಿದ. ಯಾವುದೇ ತಂಟೆ ತಕರಾರು ಬೇಡ ಎಂದು ನಿರ್ಧಾರ ಮಾಡಿಕೊಂಡಿರುವ ಅಂಬಿಯನ್ನು ನೋಡಿ ಪತ್ನಿ ಸುಮಲತಾ ಬೆರಗಾಗಿದ್ದಾರೆ.

  ಹೌದು 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ ಪೋಸ್ಟರ್ ಇತ್ತೀಚಿಗಷ್ಟೆ ಬಿಡುಗಡೆ ಆಗಿದೆ. ಪೋಸ್ಟರ್ ನೋಡಿರುವ ಸುಮಲತಾ ತಮ್ಮ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಇದರಲ್ಲಿ ಏನೋ ವಿಶೇಷತೆ ಇದೆ. ಈ ರೀತಿ ಇವರನ್ನು ನಾನು ಎಂದಿಗೂ ನೋಡಿಲ್ಲ. ನಾನಂತು ಸಿನಿಮಾ ನೋಡಲು ಕಾತುರವಾಗಿದ್ದೇನೆ" ಎಂದಿದ್ದಾರೆ.

  'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ಅಂಬರೀಶ್ ಲುಕ್ ಬದಲಾಗಿದೆ. ಹೊಸ ರೀತಿಯ ಹೇರ್ ಸ್ಟೈಲ್ ಮತ್ತು ಮೀಸೆಯ ಲುಕ್ ನೋಡುಗರನ್ನು ಇಂಪ್ರೆಸ್ ಮಾಡುತ್ತಿದೆ. ಬುಲೆಟ್ ಗಾಡಿ, ಲೆದರ್ ಜಾಕೆಟ್ ಎಲ್ಲವೂ ಹೊಸ ಲುಕ್ ಕೊಡುತ್ತಿದೆ. ಸಿನಿಮಾದಲ್ಲಿ ಇನ್ಯಾವ ಸ್ಟೈಲ್ ನಲ್ಲಿ ಕಾಣಿಸಿಕೊಳ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೂ ಮೂಡಿದೆ.

  ಅಂದ್ಹಾಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾವನ್ನು ಗುರುದತ್ತ್ ಗಾಣಿಗ ನಿರ್ದೇಶನ ಮಾಡಿದ್ದು ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರೀಕರಣ ಕಂಪ್ಲೀಟ್ ಮಾಡಿರುವ ತಂಡ ಸಿನಿಮಾ ತೆರೆಗೆ ತರಲು ಸಿದ್ದತೆ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ಕಿಚ್ಚನ ಜೊತೆಯಲ್ಲಿ ಶೃತಿ ಹರಿಹರನ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.

  English summary
  Kannada actress Sumalatha shared her opinion on Ambirish poster of Ambi Ning Vasayatto cinema. Ambarish and Sudeep both are acting in Ambi Ning Vasayatto movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X