For Quick Alerts
  ALLOW NOTIFICATIONS  
  For Daily Alerts

  'ನಿನ್ನಿಂದಲೇ' ಚಿತ್ರಕ್ಕೆ ಡೈಲಾಗ್ ಬರೆದದ್ದು ನಾನಲ್ಲ: ಸುನಿ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಎರಿಕಾ ಫರ್ನಾಂಡಿಸ್ ಮುಖ್ಯಭೂಮಿಯಲ್ಲಿರುವ ಚಿತ್ರಕ್ಕೆ ಡೈಲಾಗ್ ಬರೆದದ್ದು ಯಾರು ಎಂಬ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಒನ್ಇಂಡಿಯಾ ಕನ್ನಡವೂ ಒಂದು ಸುದ್ದಿಯನ್ನು ಪ್ರಕಟಿಸಿತ್ತು.

  ಅದರ ಪ್ರಕಾರ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ನಿರ್ದೇಶಕ ಸುನಿ ಅವರೇ ಚಿತ್ರಕ್ಕೆ ಪಂಚಿಂಗ್ ಡೈಲಾಗ್ ಗಳನ್ನು ಬರೆದವರು ಎಂಬುದು. ಆದರೆ ಈ ಸುದ್ದಿಯನ್ನು ಸುನಿ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ನಿನ್ನಿಂದಲೇ ಚಿತ್ರಕ್ಕೆ ತಾವು ಡೈಲಾಗ್ ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ['ನಿನ್ನಿಂದಲೇ' ಡೈಲಾಗ್ ಗಳ ಇಂಟರೆಸ್ಟಿಂಗ್ ಕಥೆ]

  ಈ ಬಗ್ಗೆ ಒನ್ಇಂಡಿಯಾಗೆ ಪ್ರತಿಕ್ರಿಯಿಸಿರುವ ಸುನಿ, "ನಿನ್ನಿಂದಲೇ ಚಿತ್ರಕ್ಕೆ ನಾನು ಒಂದೇ ಒಂದು ಡೈಲಾಗ್ ಕೂಡ ಬರೆದಿಲ್ಲ. ಸುದ್ದಿ ಕೇಳಿದಾಗ ನನಗೆ ಶಾಕ್ ಆಯಿತು. ಈ ರೀತಿಯ ಸುದ್ದಿಗಳನ್ನು ಯಾರು ಹಬ್ಬಿಸುತ್ತಿದ್ದಾರೋ ನನಗೆ ಗೊತ್ತಿಲ್ಲ" ಎಂದಿದ್ದಾರೆ.

  ನಿನ್ನಿಂದಲೇ ಚಿತ್ರಕ್ಕೆ ಸಂಭಾಷಣೆ ಬರೆದಿರುವವರು ಎಂಎಸ್ ರಮೇಶ್. ಆದರೆ ನನ್ನ ಹೆಸರು ಯಾಕೆ ಬಂತೋ ಗೊತ್ತಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ ಸುನಿ. ಒಂದು ವೇಳೆ ಚಿತ್ರಕ್ಕೆ ನಾನು ಡೈಲಾಗ್ ಬರೆದಿದ್ದರೆ ಅದರಲ್ಲಿ ಮುಚ್ಚಿಡುವಂತಹದ್ದೇನು ಇರಲಿಲ್ಲ ಎಂದಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Sandalwood director Suni aka Simple Suni of Simple Aag Ond Love Story fame has denied the rumours of his contribution of dialogues for Ninnindale. Rumour were doing rounds that Suni had written the dialogues for the movie. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X