For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ 'ದರ್ಬಾರ್' ಗೆ ವಿಲನ್ ಆದ ಸುನೀಲ್ ಶೆಟ್ಟಿ?

  |

  ಸೂಪರ್ ಸ್ಟಾರ್, ತಲೈವ ರಜನಿಕಾಂತ್ 'ದರ್ಬಾರ್' ಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ವಿಲನ್ ಆಗಿದ್ದಾರೆ. 'ಪೈಲ್ವಾನ್' ನಲ್ಲಿ ಕಿಚ್ಚ ಸುದೀಪ್ ಜೊತೆ ಕಾಣಿಸಿಕೊಂಡು ಅಬ್ಬರಿಸಿದ್ದ ಸುನೀಲ್ ಈಗ ವಿಲನ್ ಆದ್ರಾ ಅಂತ ಅಚ್ಚರಿ ಪಡಬೇಡಿ. 'ದರ್ಬಾರ್' ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಖಳ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  ಸುನೀಲ್ ಶೆಟ್ಟಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ 'ಪೈಲ್ವಾನ್' ಚಿತ್ರದಲ್ಲಿ ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಮೊದಲ ಲುಕ್ ಕೂಡ ರಿವೀಲ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದು ಕೊಂಡಿದೆ.

  ಸರ್ಕಾರ್ ಲುಕ್ ನಲ್ಲಿ ಸೆಡ್ಡು ಹೊಡೆದ ಸುನೀಲ್ ಶೆಟ್ಟಿ

  ಇದರ ಬೆನ್ನಲೆ ಈಗ ಸೂಪರ್ ಸ್ಟಾರ್ ರಜಿನಿಕಾಂತ್ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಚ್ಚರಿಕರ ಸಂಗತೆ ಅಂದ್ರೆ ಸುನೀಲ್ ಅನೇಕ ವರ್ಷಗಳ ಬಳಿಕ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಈ ಮೊದಲು ಚಿತ್ರದಲ್ಲಿ ಖಳ ನಟನಾಗಿ ಪ್ರತೀಕ್ ಬಬ್ಬರ್ ಆಯ್ಕೆ ಆಗಿದ್ದರು. ಪ್ರತೀಕ್ ತಂದೆಯ ಪಾತ್ರದಲ್ಲಿ ಸುನೀಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  2004ರಲ್ಲಿ ರಿಲೀಸ್ ಆಗಿದ್ದ 'ಮೇ ಹೂಂ ನಾ' ಚಿತ್ರದಲ್ಲಿ ಖಳ ನಟನಾಗಿ ಕಾಣಿಸಿಕೊಂಡಿದ್ದರು. ಆ ನಂತರ ಮತ್ತೆ ಖಳ ನಟನ ಪಾತ್ರಕ್ಕೆ ಬಣ್ಣ ಹಚ್ಚಿರಲಿಲ್ಲ. ಆದ್ರೀಗ 'ದರ್ಬಾರ್' ಮೂಲಕ ಮತ್ತೆ ವಿಲನ್ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಬಾರ್ ಎ ಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ.

  'ಭರಾಟೆ' ಮೆಚ್ಚಿದ ಬಾಲಿವುಡ್ ನಟ ಸುನೀಲ್ ಶೆಟ್ಟಿ

  ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 'ದರ್ಬಾರ್' ಚಿತ್ರದ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಿ ಅನೇಕ ದಿನಗಳೆ ಆಗಿವೆ. ಚಿತ್ರದಲ್ಲಿ ಸೂಪರ್ ಸ್ಟಾರ್ ಖಾಕಿ ತೊಟ್ಟು ಖದರ್ ತೋರಿಸಲಿದ್ದಾರೆ. ಅನೇಕ ಬಳಿಕ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ತಲೈವ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಜಿನಿಕಾಂತ್ ಗೆ ಜೋಡಿಯಾಗಿ ನಯನತಾರ ಅಭಿನಯಿಸುತ್ತಿದ್ದಾರೆ.

  ಈಗ ಸುನೀಲ್ ಶೆಟ್ಟಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಅನೇಕ ವರ್ಷಗಳ ಬಳಿಕಾ ಸುನೀಲ್ ಶೆಟ್ಟಿ ತಮಿಳು ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. 2001ರಲ್ಲಿ '12ಬಿ' ಬಣ್ಣಹಚ್ಚಿದ್ದ ಸುನೀಲ್ ಈಗ 18ವರ್ಷಗಳ ಬಳಿಕ ಖಳನಟನಾಗಿ ಎಂಟ್ರಿ ಕೊಡುವ ಮೂಲಕ ರಜಿನಿಕಾಂತ್ ವಿರುದ್ಧ ಅಖಾಡಕ್ಕೆ ಇಳಿಯುತ್ತಿದ್ದಾರೆ.

  English summary
  Bollywood actor sunil shetty played a villain role in Rajinikanth's Darbar movie. Sunil Shetty will be seen as Prateik Babbar father in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X