For Quick Alerts
  ALLOW NOTIFICATIONS  
  For Daily Alerts

  ಸನ್ನಿ ಲಿಯೋನ್ 'ಪ್ರೇಮ್ ಅಡ್ಡ'ಕ್ಕೆ ಬರುವುದು ಖಾತ್ರಿ

  |

  ನಿರ್ದೇಶಕ ಪ್ರೇಮ್‌ ಹಾಗೂ 'ಪ್ರೇಮ್ ಅಡ್ಡ' ಚಿತ್ರದ ನಿರ್ದೇಶಕ ಮಹೇಶ್ ಬಾಬು ಸನ್ನಿ ಲಿಯೋನ್ ಅವರನ್ನು ಕನ್ನಡಕ್ಕೆ ತರುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಸನ್ನಿ ಲಿಯೋನ್ ತಮ್ಮ ಪ್ರೇಮ್ ಅಡ್ಡ ಚಿತ್ರದ ಹಾಡೊಂದರಲ್ಲಿ ನಟಿಸಲು ಒಪ್ಪಿರುವುದಾಗಿ ಈ ಇಬ್ಬರೂ ಘೋಷಿಸಿದ್ದಾರೆ.

  ಈ ಮೊದಲು ಸನ್ನಿ ಲಿಯೋನ್, ಅಮೀಷಾ ಪಟೇಲ್, ಜಿಯಾ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಅಥವಾ ನಯನತಾರಾ ಇವರಲ್ಲಿ ಯಾರಾದರೊಬ್ಬರನ್ನು ತಮ್ಮ ಪ್ರೇಮ್ ಅಡ್ಡದ ಐಟಂ ಹಾಡೊಂದಕ್ಕೆ ಕರೆತರುವುದಾಗಿ ಪ್ರೇಮ್ ಹೇಳಿದ್ದರು. ಆದರೆ ಅವರ ಮಾತನ್ನು ಯಾರೂ ಪೂರ್ತಿ ನಂಬಿರಲಿಲ್ಲ.

  ಆದರೆ ಈಗ ಚಿತ್ರತಂಡದಿಂದ ಪಕ್ಕಾ ಮಾಹಿತಿ ಲಭ್ಯವಾದ ಮೇಲೆ ನಂಬುವುದು ಹಾಗಿರಲಿ, ಯಾವಾಗ ಬರುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇನ್ನೇನಿ ಸದ್ಯದಲ್ಲೇ ಶೂಟಿಂಗ್ ಇದೆ ಎಂದಮೇಲೆ ಬಂದೇ ಬರುತ್ತಾರೆ ಅಲ್ಲವೇ?

  ಪ್ರೇಮ್ ಹಾಗೂ ಮಹೇಶ್ ಬಾಬು ಸಂಗಮದ 'ಪ್ರೇಮ್ ಅಡ್ಡ' ಚಿತ್ರ ತಮಿಳಿನ 'ಸುಬ್ರಮಣ್ಯಪುರಂ'ನ ರೀಮೇಕ್. ಇಲ್ಲಿಯ ನೆಟಿವಿಟಿಗೆ ಸರಿಯಾಗಿ ಕೆಲವೊಂದು ದೃಶ್ಯಗಳನ್ನು ಬದಲಾಯಿಸಿ ಕನ್ನಡಕ್ಕೆ ಪ್ರೇಮ್ ಅಡ್ಡ ಹೆಸರಿನಿಂದ ಬರುತ್ತಿದೆ.

  ಒಟ್ಟಿನಲ್ಲಿ ಪ್ರೇಮ್ ಅಡ್ಡಕ್ಕೆ ಸನ್ನಿ ಬರುವುದು ಖಾತ್ರ ಆದ ಮೇಲೆ ಚಿತ್ರತಂಡದಲ್ಲಿ ಹೊಸ ಮಿಂಚಿನ ಸಂಚಾರವಾಗಿದೆ. ನಟನಾಗಿ ಬಂದು ನಿರ್ದೇಶಕನಾಗಿ ಮತ್ತೆ ನಟನೆಗೆ ಇಳಿದಿರುವ ಪ್ರೇಮ್, ತಮ್ಮ ಪ್ರೇಮ್ ಅಡ್ಡದ ಮೂಲಕ ಯಶಸ್ವೀ ನಾಯಕನಟ ಎನಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ.

  ಅದಕ್ಕೆ ಸನ್ನಿ ಲಿಯೋನ್ ಸಹಕಾರ ಇದ್ದರೆ ಒಳ್ಳೆಯದು ಎಂದು ಎಣಿಸಿರುವ ಪ್ರೇಮ್, ಅದಕ್ಕಾಗಿ ಮಾಡಿರುವ ಪ್ರಯತ್ನ ಸಫಲವಾಗಿದೆ. ಸನ್ನಿ ಲಿಯೋನ್ ನೋಡಲು ಕನ್ನಡ ಪ್ರೇಕ್ಷಕರು ತಮ್ಮ ಅಡ್ಡಬಿಟ್ಟು ಬರುವುದು ಖಾತ್ರಿ ಎಂಬುದು ಪ್ರೇಮ್ ಲೆಕ್ಕಾಚಾರ.

  ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಮಲ್ಲಿಕಾ ಶರಾವತ್ ಕರೆತಂದು ಪ್ರೇಮ್ ಲೆಕ್ಕಾಚಾರದಲ್ಲಿ ತಪ್ಪಿದ್ದರು. ಈಗ ಹಾಗಾಗದಿರಲಿ ಎಂಬುದಷ್ಟೇ ಪ್ರೇಮ್ ಅಭಿಮಾನಿಗಳ ಹಾರೈಕೆ. ನಿರ್ದೇಶಕನಾಗಿ ನಿರಾಸೆ ಮೂಡಿಸಿರುವ ಪ್ರೇಮ್, ನಟನಾಗಿ ಮಿಂಚುತ್ತಾರಾ ಎಂಬುದು ಸದ್ಯಕ್ಕೆ ಸಸ್ಪೆನ್ಸ್! (ಒನ್ ಇಂಡಿಯಾ ಕನ್ನಡ)

  English summary
  Sunny Leone acts in a Item song at the movie 'Prem Adda. Director cum actor Prem and Prem Adda director Mahesh Babu confirmed that Sunny Leone arrival. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X