ನನಗೆ ಸಿಗರೇಟ್ ಬಿಡಕ್ಕಾಗಲ್ಲ; ನಟ ರಜನಿಕಾಂತ್

ಸಿನಿಮಾ ರಂಗಕ್ಕೆ ಬರುವುದಕ್ಕೂ ಹಿಂದಿನಿಂದಲೂ ರಜನಿಕಾಂತ್ ಈ ಸ್ಟೈಲ್ ಮಾಡುತ್ತಿದ್ದರು. ಬೆಳ್ಳಿತೆರೆಗೆ ಅಡಿಯಿಟ್ಟ ಮೇಲೆ ಈ ಸ್ಟೈಲ್ ಜಗದ್ವಿಖ್ಯಾತವಾಯಿತು. ಈಗ ಸಿಗರೇಟ್ ಬಗ್ಗೆ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ. ಈ ಸಿಗರೇಟ್ ನಿಂದ ನನ್ನ ಹೆಲ್ತ್ ಸಿಕ್ಕಾಪಟ್ಟೆ ಹಾಳಾಯಿತು ಎಂದಿದ್ದಾರೆ.
ಆದರೂ ನಾನು ಅದನ್ನು ಬಿಡಲು ಸಾಧ್ಯವಾಗುತ್ತಿಲ್ಲ. ನನಗೇನೋ ಸಿಗರೇಟ್ ಚಟ ಬಿಡಲು ಸಾಧ್ಯವಾಗುತ್ತಿಲ್ಲ. ಆದರೆ ನೀವಂತೂ ಹಾಗೆ ದಯವಿಟ್ಟ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಕಿವಿಮಾತನ್ನು ಹೇಳಿದ್ದಾರೆ. ತಾನು ಕಿಡ್ನಿ ತೊಂದರೆಯಿಂದ ಬಳಲಿ ಆಸ್ಪತ್ರೆ ಪಾಲಾಗಿದ್ದೆ. ಇಂದು ಬದುಕು ಬಂದಿದ್ದೇನೆ ಎಂದರೆ ಅದು ದೇವರ ಆಶೀರ್ವಾದ ಮತ್ತು ಅಭಿಮಾನಿಗಳ ಪ್ರಾರ್ಥನೆಯ ಫಲ ಎಂದಿದ್ದಾರೆ.
ತಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಉದ್ದೇಶವಿಲ್ಲ. ಹಾಗೆಯೇ ನಾನೊಬ್ಬ ಪರಿಣಾಮಕಾರಿ ನಾಯಕ ಎನ್ನಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ತಾನು ಯಾವುದೇ ರಾಜಕೀಯ ಪಕ್ಷವನ್ನು ಕಟ್ಟುವ ಗೋಜಿಗೂ ಹೋಗುತ್ತಿಲ್ಲ. ನನಗೆ ಒಳ್ಳೆಯ ಜೀವನಾಧಾರಕ್ಕೆ ಅವಕಾಶಕೊಟ್ಟ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications











