»   » ಮಂಡ್ಯ ಸುತ್ತಮುತ್ತ ರಜನಿಕಾಂತ್ 'ಲಿಂಗ' ಶೂಟಿಂಗ್

ಮಂಡ್ಯ ಸುತ್ತಮುತ್ತ ರಜನಿಕಾಂತ್ 'ಲಿಂಗ' ಶೂಟಿಂಗ್

By: ಉದಯರವಿ
Subscribe to Filmibeat Kannada

ಧೀರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ ಭಾರಿ ಬಜೆಟ್ ತಮಿಳು ಚಿತ್ರ 'ಲಿಂಗ' ಮುಹೂರ್ತ ಶುಕ್ರವಾರ (ಮೇ.2) ಮುಂಜಾನೆ ಮೈಸೂರು ಚಾಮುಂಡಿ ಬೆಟ್ಟದಲ್ಲಿ ನೆರವೇರಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಾಯಕ ನಟರಾಗಿರುವ ಈ ಚಿತ್ರಕ್ಕೆ ನಾಯಕಿ ಸೋನಾಕ್ಷಿ ಸಿನ್ಹಾ.

ಅಕ್ಷಯ ತೃತೀಯಾ ದಿನ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ ಮೇ.3ರಿಂದ 11ರವರೆಗೆ ಮಂಡ್ಯ ಜಿಲ್ಲೆಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಿದೆ. 'ಲಿಂಗ' ಚಿತ್ರದಲ್ಲಿ ರಜನಿಕಾಂತ್ ಅವರದು ದ್ವಿಪಾತ್ರಾಭಿನಯ. ಅನುಷ್ಕಾ ಶೆಟ್ಟಿ ಹಾಗೂ ಜಗಪತಿ ಬಾಬು ಸಹ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. [ಕನ್ನಡಕ್ಕೆ 'ಒನ್ ವೇ'ಯಲ್ಲಿ ಬರಲಿರುವ ರಜನಿಕಾಂತ್]

ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಸಂಗೀತ ಚಿತ್ರಕ್ಕಿದ್ದು ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್.ರವಿಕುಮಾರ್ ಅವರ ನಿರ್ದೇಶನ ಚಿತ್ರಕ್ಕಿದೆ. ರಾಕ್ ಲೈನ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

ಸತತ ಒಂಬತ್ತು ದಿನಗಳ ಕಾಲ ಲಿಂಗ ಶೂಟಿಂಗ್

ರಜನಿಕಾಂತ್ ಹಾಗೂ ಸೋನಾಕ್ಷಿ ಸಿನ್ಹಾ ಭಾಗದ ಚಿತ್ರೀಕರಣ ಮೇ 3 ರಿಂದ 11ರವರೆಗೆ ಮಂಡ್ಯ ಜಿಲ್ಲೆಯ ಸುತ್ತಮುತ್ತ ನಡೆಯಲಿದೆ. ಒಂಬತ್ತು ದಿನಗಳ ಕಾಲ ಪಾಂಡವಪುರ, ಮೇಲುಕೋಟೆ, ಕೃಷ್ಣರಾಜಸಾಗರ, ಶ್ರೀರಂಗಪಟ್ಟಣದ ಸುಂದರ ತಾಣಗಳಲ್ಲಿ ಶೂಟಿಂಗ್ ಸಾಗಲಿದೆ.

ಅಂಬಾವಿಲಾಸ ಅರಮನೆಯಲ್ಲಿ ಅವಕಾಶ ನೀಡಿಲ್ಲ

ಈ ಲೊಕೇಷನ್ ಗಳಲ್ಲಿ ಹಾಡು ಹಾಗೂ ಒಂದಷ್ಟು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತದೆ. ಆದರೆ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಶೂಟಿಂಗ್ ಗೆ ಅನುಮತಿ ಸಿಕ್ಕಿಲ್ಲ. ಚಿತ್ರತಂಡ ಮೌಕಿಕ ಅನುಮತಿ ಕೋರಿದ್ದು ಅನುಮತಿ ನೀಡಲಾಗಿಲ್ಲ ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಮಯೂರ ಚಿತ್ರದ ಬಳಿಕ ಯಾವ ಚಿತ್ರಕ್ಕೂ ಅನುಮತಿ ಇಲ್ಲ

ವರನಟ ಡಾ.ರಾಜ್ ಕುಮಾರ್ ಅವರ 'ಮಯೂರ' ಚಿತ್ರದ ಬಳಿಕ ಅಂಬಾವಿಲಾಸ ಅರಮನೆಯಲ್ಲಿ ಯಾವುದೇ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿಲ್ಲ. ಛಾಯಾಚಿತ್ರಣವನ್ನೂ ನಿಷೇಧಿಸಲಾಗಿದೆ.

ದೀಪಾವಳಿಗೆ ತೆರೆಗೆ ಬರಲಿದೆ 'ಲಿಂಗ'

ಸತತ ಎರಡು ತಿಂಗಳುಗಳ ಕಾಲ ಚಿತ್ರೀಕರಣ ನಡೆಯಲಿದ್ದು ಮುಂಬರುವ ದೀಪಾವಳಿ ಹಬ್ಬಕ್ಕೆ ಚಿತ್ರವನ್ನು ತೆರೆಗೆ ತರುವ ಪ್ಲಾನ್ ಮಾಡಲಾಗಿದೆ.

ಲಿಂಗ ಎಂದರೆ ಮೊಮ್ಮಗ ಕಮ್ ಆರಾಧ್ಯ ದೈವ

ಇಷ್ಟಕ್ಕೂ 'ಲಿಂಗ' ಎಂಬುದು ರಜನಿಕಾಂತ್ ಅವರ ಸ್ವಂತ ಮೊಮ್ಮಗನ ಹೆಸರು. ಧನುಷ್ ಹಾಗೂ ಐಶ್ವರ್ಯಾ ಪುತ್ರನೇ 'ಲಿಂಗ'. ಶಿವನನ್ನು ಆರಾಧಿಸುವ ರಜನಿಕಾಂತ್ ಚಿತ್ರಕ್ಕೆ ಒಟ್ಟಿಗೆ ಮೊಮ್ಮಗನ ಹಾಗೂ ಆರಾಧ್ಯ ದೈವದ ಹೆಸರೂ ಇಟ್ಟಂತಾಗಿದೆ.

English summary
Super star Rajinikanth’s new venture Lingaa, directed by K S Ravikumar, shooting for the film got a kickstart in Mysore. Anushka Shetty and Sonakshi Sinha are the heroines of 'Lingaa' in which the Thalaivar' will be seen in two different roles.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada