»   » ಉಪೇಂದ್ರ ಜತೆ ಕೆಲಸ ಮಾಡುವ ಸೂಪರ್ ಅವಕಾಶ

ಉಪೇಂದ್ರ ಜತೆ ಕೆಲಸ ಮಾಡುವ ಸೂಪರ್ ಅವಕಾಶ

Posted By:
Subscribe to Filmibeat Kannada

ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಜೊತೆ ಕೆಲಸ ಮಾಡುವ ಅವಕಾಶಕ್ಕೆ ಕಾದಿರುವವರಿಗೆ ಸಂತೋಷದ ಸುದ್ದಿಯಿದೆ. ಯಾವುದೇ ಮಧ್ಯವರ್ತಿಗಳ ನೆರವನ್ನು ಅವಲಂಬಿಸಿದೇ ನೀವೇ ನೇರವಾಗಿ ಉಪೇಂದ್ರ ಜೊತೆ ಕೆಲಸ ಮಾಡುವ ಅವಕಾಶ ಪಡೆದುಕೊಳ್ಳುವ ಭಾಗ್ಯ ನಿಮ್ಮದಾಗಿಸಿಕೊಳ್ಳಬಹುದು. ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ ಉಪೇಂದ್ರ ಅವರ ಆಹ್ವಾನವೆಂದರೆ ಸಾಮಾನ್ಯವೇ?

ಕಥೆ-ಚಿತ್ರಕಥೆ ಬರೆಯುವುದು, ನಟನೆ, ಚಿತ್ರ ಸಾಹಿತ್ಯ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಬಯಕೆಯುಳ್ಳವರು ಉಪೇಂದ್ರ ಮ್ಯಾನೇಜರ್ (9448201624) ಅವರನ್ನು ಸಂಪರ್ಕಿಸಬಹುದು. ಸೆಪ್ಟೆಂಬರ್ 18, ಉಪೇಂದ್ರ ಅವರ ಹುಟ್ಟುಹಬ್ಬದ ದಿನವಾದ್ದರಿಂದ ಆ ದಿನ ಬಿಟ್ಟು ಮೊದಲು ಅಥವಾ ನಂತರ ಕರೆ ಮಾಡಲು ವಿನಂತಿಸಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಈ ಆಹ್ವಾನ ಉಪ್ಪಿ ಕಡೆಯಿಂದಲೇ ಬಂದಿದೆ.

ಹೀಗೆ ತಮ್ಮ ಟ್ವಿಟ್ಟರಿನಲ್ಲಿ ಆಹ್ವಾನ ನೀಡಿರುವ ಉಪೇಂದ್ರ, ಪ್ರತಿಭೆಯುಳ್ಳವರಿಗೆ ವೇದಿಕೆ ಕಲ್ಪಿಸಿ ನೆರವಾಗಲಿದ್ದಾರೆ ಎಂಬುದು ಸ್ಪಷ್ಟವಾದಂತಾಗಿದೆ. ಪ್ರತಿಭೆ ಹಾಗೂ ಆಸಕ್ತಿಯುಳ್ಳವರು ಕರೆ ಮಾಡಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು. ಅಂದಹಾಗೆ ಉಪ್ಪಿ ಇತ್ತೀಚಿಗಷ್ಟೇ ತಮ್ಮ ಕಲ್ಪನಾ ಚಿತ್ರದ ಚಿತ್ರೀಕರಣ ಮುಗಿಸಿ ಟೋಪಿವಾಲಾ ಚಿತ್ರದ ಶೂಟಿಂಗ್ ನಲ್ಲಿ ಸದ್ಯ ಬಿಜಿಯಾಗಿದ್ದಾರೆ.

ಮೊದಲೇ ಹೇಳಿದ ಹಾಗೆ, ಸೆಪ್ಟೆಂಬರ್ 18 ರಂದು ತಮ್ಮ ಹುಟ್ಟುಹಬ್ಬದ ದಿನ ಉಪೇಂದ್ರ ತಮ್ಮ ನಟನೆ ಹಾಗೂ ನಿರ್ದೆಶನದಲ್ಲಿ ಮೂಡಿಬರಲಿರುವ ಹೊಸ ಚಿತ್ರವನ್ನು ಘೋಷಿಸಲಿದ್ದಾರೆ. ಆ ಚಿತ್ರವನ್ನು ಅವರ ಸ್ಯಂತ ಬ್ಯಾನರಿನಲ್ಲಿ ಪತ್ನಿ ಪ್ರಿಯಾಂಕಾ ಉಪೇಂದ್ರ ನಿರ್ಮಿಸಲಿರುವುದು ವಿಶೇಷ. ಅಂದರೆ, ಹೊಸ ಪ್ರತಿಭೆಗಳಿಗೆ ಉಪೇಂದ್ರ ನೀಡಿರುವ ಆಹ್ವಾನ, ಹೊಸ ಚಿತ್ರಕ್ಕೆ ಸಂಬಂಧಿಸಿದ್ದು.

ಉಪೇಂದ್ರ ಅವರ ನಟನೆ ಹಾಗೂ ನಿರ್ದೇಶನದ ಹೊಸ ಚಿತ್ರವು ಬಹುಶಃ 'ಉಪೇಂದ್ರ- 2' ಅಥವಾ 'ಸೂಪರ್- 2' ಎನ್ನಲಾಗುತ್ತಿದೆ. ಆದರೆ ಮಾಹಿತಿಯಿನ್ನೂ ಉಪೇಂದ್ರ ಕಡೆಯಿಂದ ಪಕ್ಕಾ ಆಗಿಲ್ಲ. ತಮ್ಮ ಹುಟ್ಟುಹಬ್ಬದ ದಿನ ಹೊಸ ಚಿತ್ರದ ಡೀಟೆಲ್ಸ್ ಬಹಿರಂಗಪಡಿಸುತ್ತೇನೆ ಎಂದಿರುವ ಅವರು ಅದಕ್ಕೂ ಮೊದಲೇ ಹೇಳಲಾರರು. ಹೀಗಾಗಿ 'ಬುದ್ಧಿವಂತ' ಉಪ್ಪಿಯ ಹೊಸ ಚಿತ್ರದ ವಿವರಗಳಿಗೆ ಅಂದಿನವರೆಗೂ ಕಾಯಲೇಬೇಕು. (ಒನ್ ಇಂಡಿಯಾ ಕನ್ನಡ)

English summary
Super Star Upendra Invited in Twitter to Work with him in his upcoming project. Special is that this new movie to launch on his Birthday, September 18, 2012. His wife Priyanka Upendra is the Producer for this Home Banner movie. Anybody can call who have interested to work with Upendra. 
 
Please Wait while comments are loading...