»   » ಅಚ್ಚರಿ.! ಮನಸ್ತಾಪ ಮರೆತು ಒಂದಾದ್ರಾ ಸುದೀಪ್ ಮತ್ತು ಪತ್ನಿ ಪ್ರಿಯಾ?

ಅಚ್ಚರಿ.! ಮನಸ್ತಾಪ ಮರೆತು ಒಂದಾದ್ರಾ ಸುದೀಪ್ ಮತ್ತು ಪತ್ನಿ ಪ್ರಿಯಾ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಒಂದಾಗಿದ್ದಾರಾ? ಮನಸ್ತಾಪ ಮರೆತು, ಭಿನ್ನಾಭಿಪ್ರಾಯ ಬದಿಗಿಟ್ಟು, ಮಗಳ ಭವಿಷ್ಯಕ್ಕಾಗಿ ಜೊತೆಯಾಗಿದ್ದಾರಾ? ಈ ಪ್ರಶ್ನೆ ನಿನ್ನೆ ಎಲ್ಲರ ತಲೆಯಲ್ಲೂ ಕೊರೆಯಲು ಕಾರಣ 'ಜಗರ್ ಥಂಡ' ಆಡಿಯೋ ರಿಲೀಸ್ ಸಮಾರಂಭದಲ್ಲಿ ನಡೆದ ಅಚ್ಚರಿ.

ತಮಿಳಿನ ಸೂಪರ್ ಹಿಟ್ 'ಜಿಗರ್ ಥಂಡ' ಚಿತ್ರದ ಅದೇ ಶೀರ್ಷಿಕೆಯ ಕನ್ನಡ ರೀಮೇಕ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಿನ್ನೆ ಸಂಜೆ ರೆಸಿಡೆನ್ಸಿ ರಸ್ತೆಯಲ್ಲಿ ಇರುವ ರಿಟ್ಜ್ ಕಾರ್ಲ್ಟನ್ ಹೋಟೆಲ್ ನಲ್ಲಿ ನಡೆಯಿತು.


ನಾಯಕ ನಟನಾಗಿ ರಾಹುಲ್ ಅಭಿನಯಿಸಿರುವ 'ಜಿಗರ್ ಥಂಡ' ಚಿತ್ರಕ್ಕೆ ಬಂಡವಾಳ ಹಾಕಿರುವುದು ಸುದೀಪ್ ಹಾಗೂ ಎಸ್.ಆರ್.ವಿ. ಹೀಗಾಗಿ, ಆಡಿಯೋ ಬಿಡುಗಡೆ ಸಮಾರಂಭಕ್ಕೆ ನಟ ರವಿಶಂಕರ್ ಜೊತೆ ಕಿಚ್ಚ ಸುದೀಪ್ ಆಗಮಿಸಿದರು. ಇತ್ತ ಅದೇ ಸಮಾರಂಭಕ್ಕೆ ವಿಶೇಷ ಅತಿಥಿ ಆಗಿ ಎಂಟ್ರಿ ಕೊಟ್ಟವರು ಸುದೀಪ್ ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ.!


-
-
-
-
-
-
-

ಸುದೀಪ್ ಪತ್ನಿ, ಪುತ್ರಿಯ ಆಗಮನವಾಗುತ್ತಿದ್ದಂತೆ, ಇಡೀ ಸಭಾಂಗಣವೇ ನಿಬ್ಬೆರಗಾಯ್ತು. ಯಾಕಂದ್ರೆ, ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ಮೇಲೆ ಸುದೀಪ್ ದಂಪತಿ ಒಟ್ಟಾಗಿ ಎಲ್ಲೂ ಕಾಣಿಸಿಕೊಂಡಿದ್ದೇ ಇಲ್ಲ. [14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!]


ಅಸಲಿಗೆ, 'ಜಿಗರ್ ಥಂಡಾ' ಆಡಿಯೋ ಬಿಡುಗಡೆ ಸಮಾರಂಭಕ್ಕೆ ಪ್ರಿಯಾ ಹಾಗೂ ಸಾನ್ವಿಗೆ ಆಹ್ವಾನ ನೀಡಿದವರು ನಾಯಕ ರಾಹುಲ್. ನಿಜ ಹೇಳ್ಬೇಕಂದ್ರೆ, ವರ್ಷದ ಹಿಂದೆ 'ಜಿಗರ್ ಥಂಡ' ಮುಹೂರ್ತ ನಡೆದದ್ದು ಪ್ರಿಯಾ ಹುಟ್ಟುಹಬ್ಬದಂದು. ಪ್ರಿಯಾ ರವರ ಮಾತಿನ ಮೇರೆಗೆ 'ಜಗರ್ ಥಂಡ' ಚಿತ್ರಕ್ಕೆ ರಾಹುಲ್ ನಾಯಕ ನಟನಾಗಲು ಸುದೀಪ್ ಅವಕಾಶ ನೀಡಿದ್ರಂತೆ. ಆ ಸೆಂಟಿಮೆಂಟ್ ಮೇರೆಗೆ ರಾಹುಲ್, ನಿನ್ನೆ ಪ್ರಿಯಾ ರವರಿಗೆ ಆಹ್ವಾನಿಸಿದ್ದರು.


ಇಂಟ್ರೆಸ್ಟಿಂಗ್ ಅಂದ್ರೆ, 'ಜಿಗರ್ ಥಂಡ' ಆಡಿಯೋ ಬಿಡುಗಡೆ ಆದ ದಿನ, ಅಂದ್ರೆ ನಿನ್ನೆ (ಮೇ 11) ಸುದೀಪ್ ಪುತ್ರಿ ಸಾನ್ವಿ ಹುಟ್ಟುಹಬ್ಬ. ಮಗಳನ್ನ ಕಂಡ ಖುಷಿಯಲ್ಲಿ ವೇದಿಕೆ ಮೇಲೆ ಸಾನ್ವಿ ಹುಟ್ಟುಹಬ್ಬವನ್ನೂ ಸುದೀಪ್ ಆಚರಿಸಿದರು. [ವೈಯುಕ್ತಿಕ ಜೀವನದ ಬಗ್ಗೆ ಕಿಚ್ಚ ಸುದೀಪ್ ಬಾಯ್ಬಿಟ್ಟ ಸತ್ಯ]


Surprise; Sudeep and Priya makes Public Appearance together

ಹಾಗಂದ ಮಾತ್ರ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಒಂದಾಗಿದ್ದಾರೆ ಅಂತಲ್ಲ. ಸಮಾರಂಭದಲ್ಲಿ ರವಿಚಂದ್ರನ್ ಜೊತೆ ಕಿಚ್ಚ ಸುದೀಪ್ ಆಸೀನರಾಗಿದ್ದರೆ, ಪ್ರಿಯಾ ಹಾಗೂ ಸಾನ್ವಿ ಬೇರೆ ಸೋಫಾದಲ್ಲಿ ಕೂತಿದ್ದರು. ನಂತರ ಸಾನ್ವಿ ಒತ್ತಾಯದ ಮೇರೆಗೆ ಪತ್ನಿ-ಪುತ್ರಿ ಜೊತೆ ಸುದೀಪ್ ಕುಳಿತರು. ಅಷ್ಟುಬಿಟ್ಟರೆ, ಅವರೊಂದಿಗೆ ಮಾತನಾಡಿದ್ದು ಕಡಿಮೆ.


ಇನ್ನು ವೇದಿಕೆ ಮೇಲೆ, ''ರಾಹುಲ್ ಒಳ್ಳೆ ಹುಡುಗ. ಅವನಿಗೆ ಒಳ್ಳೆಯದಾಗಲಿ. 'ಜಿಗರ್ ಥಂಡ' ಸಕ್ಸಸ್ ಆಗಲಿ'' ಅಂತ ಪ್ರಿಯಾ ಹಾರೈಸಿದ್ರೆ, ಸಮಾರಂಭಕ್ಕೆ ಪ್ರಿಯಾ-ಸಾನ್ವಿ ಬಂದಿದ್ದಕ್ಕೆ ಸುದೀಪ್ ''ಥ್ಯಾಂಕ್ಸ್'' ಹೇಳಿದರು. [ಕಿಚ್ಚನ ದಾಂಪತ್ಯದಲ್ಲಿ ಕಿಚ್ಚು : ಸುದೀಪ್ ಹೇಳಿದ್ದೇನು?]


'ಜಿಗರ್ ಥಂಡ' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸುದೀಪ್-ಪ್ರಿಯಾ ಒಂದಾದ ಅಪರೂಪದ ಫೋಟೋ ಗ್ಯಾಲರಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ..ನೋಡಿ...


-
-
-
-
-
-
-
-
-
-
-
-
-
-
-
-
-
English summary
After applying for Divorce, estranged couple Kannada Actor Kiccha Sudeep and his wife Priya have made public appearance together during the Audio Release of Kannada Movie 'Jigar Thanda'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada