For Quick Alerts
  ALLOW NOTIFICATIONS  
  For Daily Alerts

  ಜೋಗಿ, ಭೈರತಿ ರಣಗಲ್ಲು ರೆಕಾರ್ಡ್ ಬ್ರೇಕ್ ಮಾಡಿದ 'ಟಗರು ಶಿವ'

  By Pavithra
  |
  ಜೋಗಿ, ಮಫ್ತಿ ರೆಕಾರ್ಡ್ ಬ್ರೇಕ್ ಮಾಡಿದ 'ಟಗರು' | FIlmibeat Kannada

  ಕನ್ನಡ ಸಿನಿಮಾ ನೋಡುವವರೇ ಕಡಿಮೆ. ಜನ ಮನೆ ಬಿಟ್ಟು ಥಿಯೇಟರ್ ಗೆ ಬರುವುದಿಲ್ಲ ಅನ್ನುವ ಮಾತುಗಳು ಆಗಾಗ ಕೇಳಿ ಬರುತ್ತಿದ್ದವು. ಒಳ್ಳೆ ಸಿನಿಮಾ ಮಾಡಿ ನಾವು ಆ ಚಿತ್ರವನ್ನ ಗೆಲ್ಲಿಸಿ ಕೊಡುತ್ತೇವೆ ಎನ್ನುವ ಮಾತನ್ನು ಟಗರು ಚಿತ್ರದ ಮೂಲಕ ಸಾಬೀತು ಮಾಡಿದ್ದಾರೆ ಕನ್ನಡ ಸಿನಿಮಾ ಪ್ರೇಕ್ಷಕರು.

  ಟಗರು ಸಿನಿಮಾ ಬಿಡುಗಡೆ ಈದು ದಿನ ಕಳೆದಿದೆ. ಇಂದಿಗೂ ಎಲ್ಲೆಡೆ ಚಿತ್ರ ಭರ್ತಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಆದ ಸಿನಿಮಾ ಬಗ್ಗೆ ಚಿತ್ರತಂಡ ಯಾವಾಗಲೂ ಒಳ್ಳೆಯದ್ದೇ ಮಾತನಾಡುತ್ತೆ ಎಂದು ಕೊಂಕು ಮಾತನಾಡುವ ಜನರ ಮುಂದೆ ಟಗರು ವಿತರಕರು ಸತ್ಯವನ್ನ ಬಿಚ್ಚಿಟ್ಟಿದ್ದಾರೆ.

  ಯಶ್, ದರ್ಶನ್ ಸಿನಿಮಾದಲ್ಲಿ ಟಗರು 'ಕಾನ್ಸ್ ಟೇಬಲ್ ಸರೋಜಯಶ್, ದರ್ಶನ್ ಸಿನಿಮಾದಲ್ಲಿ ಟಗರು 'ಕಾನ್ಸ್ ಟೇಬಲ್ ಸರೋಜ

  ಸ್ಟಾರ್ ಗಳು ಸಾಮಾನ್ಯವಾಗಿ ಬೇರೆ ಸ್ಟಾರ್ ಗಳ ಹೆಸರಿನಲ್ಲಿರುವ ರೆಕಾರ್ಡ್ ಗಳನ್ನ ಮುರಿಯುತ್ತಾರೆ. ಆದರೆ ಟಗರು ಚಿತ್ರದ ಮೂಲಕ ಶಿವಣ್ಣ ಅವರೇ ಕ್ರಿಯೇಟ್ ಮಾಡಿದ ದಾಖಲೆಯನ್ನು ಅವರೇ ಧೂಳಿಪಟ ಮಾಡಿದ್ದಾರೆ. ಟಗರು ಸಿನಿಮಾ ಬಗ್ಗೆ ವಿತರಕರ ಅಭಿಪ್ರಾಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಜೋಗಿ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡಿದ ಶಿವಣ್ಣ

  ಜೋಗಿ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡಿದ ಶಿವಣ್ಣ

  ಶಿವರಾಜ್ ಕುಮಾರ್ ಅಭಿನಯದ ಪ್ರೇಮ್ ನಿರ್ದೇಶನದ ಜೋಗಿ ಸಿನಿಮಾ ದಾಖಲೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅದಷ್ಟೇ ಅಲ್ಲದೆ ಆರಂಭದ ವಾರಗಳಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡಿತ್ತು. ಆದರೆ ಟಗರು ಈಗ ಆ ದಾಖಲೆಯನ್ನ ಮುರಿದಿದೆ.

  ಮಫ್ತಿ ಚಿತ್ರಕ್ಕೂ ಮೀರಿದ ಪ್ರತಿಕ್ರಿಯೆ

  ಮಫ್ತಿ ಚಿತ್ರಕ್ಕೂ ಮೀರಿದ ಪ್ರತಿಕ್ರಿಯೆ

  ಕಳೆದ ವರ್ಷ ಅಂತ್ಯದಲ್ಲಿ ಬಿಡುಗಡೆ ಆದ ಮಫ್ತಿ ಸಿನಿಮಾವನ್ನೂ ನಿರ್ಮಾಪಕ ಜಯಣ್ಣ ಅವರೇ ವಿತರಣೆ ಮಾಡಿದ್ದಾರೆ. ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಡಗೆ ಮಾಡಲಾಗಿತ್ತು. ಆದರೆ ಟಗರು ಅದಕ್ಕೂ ಹೆಚ್ಚಿನ ಥಿಯೇಟರ್ ನಲ್ಲಿ ರಿಲೀಸ್ ಆಗಿದೆ.

  ಅದ್ಬುತ ಪ್ರತಿಕ್ರಿಯೆ

  ಅದ್ಬುತ ಪ್ರತಿಕ್ರಿಯೆ

  ಟಗರು ಸಿನಿಮಾವನ್ನ ಜಯಣ್ಣ ಕಂಬೈನ್ಸ್ ಮೂಲಕ ವಿತರಣೆ ಮಾಡಲಾಗುತ್ತಿದೆ. 250 ಸಿಂಗಲ್ ಸ್ಕ್ರೀನ್ 50 ಮಲ್ಟಿಫ್ಲೆಕ್ಸ್ ನಲ್ಲಿ ಟಗರು ಬಿಡುಗಡೆ ಆಗಿದ್ದು ರಾಜ್ಯದ ಮೂಲೆ ಮೂಲೆಯಲ್ಲೂ ಅದ್ಬುತ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಎಂದು ಜಯಣ್ಣ ತಿಳಿಸಿದ್ದಾರೆ.

  ಬಾಕ್ಸ್ ಆಫೀಸ್ ಸದ್ದು ಮಾಡುತ್ತಿರುವ ಟಗರು

  ಬಾಕ್ಸ್ ಆಫೀಸ್ ಸದ್ದು ಮಾಡುತ್ತಿರುವ ಟಗರು

  ಟಗರು ಸಿನಿಮಾ ಬಿಡುಗಡೆ ಆಗಿ ನಾಲ್ಕು ದಿನಗಳು ಕಳೆದಿವೆ. ಇಷ್ಟೇ ಗಳಿಕೆ ಆಗಿದೆ ಎಂದು ಹೇಳದೇ ಇದ್ದರೂ ಗ್ರಾಸ್ ಲೆಕ್ಕದಲ್ಲಿ 12 ಕೋಟಿ ಹಣ ಗಳಿಸಿದ್ದೇವೆ ಎಂದು ವಿತರಕರು ತಿಳಿಸಿದ್ದಾರೆ.

  ಟಗರು ವೀಕ್ಷಣೆ ಮಾಡಲಿರುವ ರಾಮಲಿಂಗ ರೆಡ್ಡಿ

  ಟಗರು ವೀಕ್ಷಣೆ ಮಾಡಲಿರುವ ರಾಮಲಿಂಗ ರೆಡ್ಡಿ

  ಶಿವಣ್ಣನ ಟಗರು ಚಿತ್ರವನ್ನ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ರಾಮಲಿಂಗಾರೆಡ್ಡಿ ಅವರು ವೀಕ್ಷಿಸಲಿದ್ದಾರೆ. ರಾಮಲಿಂಗಾ ರೆಡ್ಡಿ ಜೊತೆ ಅವರ ಮಗಳು ಸೌಮ್ಯರೆಡ್ಡಿ ಅವರು ಕೂಡ ಸಿನಿಮಾ ವೀಕ್ಷಿಸಲಿದ್ದಾರೆ. ಚಿತ್ರ ಆರಂಭಕ್ಕೂ ಮುನ್ನ ಅತಿಥಿಗಳ ಜೊತೆ ಒಂದು ಸಂವಾದ ಕೂಡ ಏರ್ಪಡಿಲಾಗಿದೆ.

  English summary
  Kannada Tagaru Cinema has earned good money for four days, The film earns more money than the previous films of Shivarajkumar, Suri directed Tagaru film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X