For Quick Alerts
  ALLOW NOTIFICATIONS  
  For Daily Alerts

  ನೂರರ ಸಮೀಪಕ್ಕೆ ಹೋಗುತ್ತಿದ್ದರೂ ಮುಗಿಯಲಿಲ್ಲ ಟಗರು ಹವಾ

  By Pavithra
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ದುನಿಯಾ ಸೂರಿ ನಿರ್ದೇಶನದ ಟಗರು ಸಿನಿಮಾ ಈ ವರ್ಷದ ಹಿಟ್ ಲೀಸ್ಟ್ ಗೆ ಸೇರಿದಾಯ್ತು. ಕೇವಲ ಬಾಕ್ಸ್ ಆಪೀಸ್ ನಲ್ಲಿ ಮಾತ್ರವಲ್ಲದೆ ಜನರ ಮನಸ್ಸು ಗೆಲ್ಲುವಲ್ಲಿಯೂ ಟಗರು ಚಿತ್ರ ಯಶಸ್ಸು ಪಡೆದುಕೊಂಡಾಗಿದೆ.

  75 ದಿನಗಳನ್ನ ಪೂರೈಸಿ 100 ದಿನದತ್ತ ಮುನ್ನುಗ್ಗುತ್ತಿರುವ ಟಗರು ಸಿನಿಮಾ .ಇತ್ತೀಚಿನ ದಿನಗಳಲ್ಲಿ ಯಾವುದೇ ಚಿತ್ರಗಳು ನೂರು ದಿನ ಪೂರೈಸುವವರೆಗೂ ಥಿಯೇಟರ್ ನಲ್ಲಿ ಇರುವುದೇ ಇಲ್ಲ. ಆದರೆ ಟಗರು ಸಿನಿಮಾ ಇನ್ನು 15 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಆಗುತ್ತಿದೆ.

  'ಟಗರು' ಗೆದ್ದರೂ ಸೂರಿಯ 'ಕಾಗೆ ಬಂಗಾರ' ನಿಂತು ಹೋಯ್ತು! 'ಟಗರು' ಗೆದ್ದರೂ ಸೂರಿಯ 'ಕಾಗೆ ಬಂಗಾರ' ನಿಂತು ಹೋಯ್ತು!


  ಅದಷ್ಟೇ ಅಲ್ಲದೆ ಐಪಿಎಲ್, ಚುನಾವಣೆ ಇದ್ದರೂ ಕೂಡ ಟಗರು ಸಿನಿಮಾ ನೋಡಲು ಬರುವ ಅಭಿಮಾನಿಗಳು ಮಾತ್ರ ಕಡಿಮೆ ಆಗಿಲ್ಲ. ಇನ್ನು ರಾಜ್ಯದ ಪ್ರಮುಖ ಜಿಲ್ಲೆಗಳಾದ ಮೈಸೂರು , ಹಾಸನ, ಶಿವಮೊಗ್ಗ, ದಾವಣೆಗೆರೆ, ಮಂಡ್ಯ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಟಗರು ಸಿನಿಮಾ ನೂರು ದಿನ ಪೂರೈಸುತ್ತಿದೆ.

  ಇನ್ನು ವಿಶೇಷ ಅಂದರೆ ಬೆಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ ಟಗರು ನೂರು ದಿನ ಕಂಪ್ಲೀಟ್ ಮಾಡುತ್ತಿದೆ. ಬೆಂಗಲೂರಿನ ಸಾಕಷ್ಟು ಮಲ್ಟಿಫ್ಲೆಕ್ಸ್ ನಲ್ಲಿಯೂ ಟಗರು ಹವಾ ಇನ್ನು ಮುಂದುವರೆಯುತ್ತಿದೆ.

  English summary
  Kannada Tagaru Cinema is completing 100 days. A Tagaru film is being screened at the 15 theaters in the state. Shivarajkumar, Bhavana, Dhananjaya is acting in movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X