For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಜೇಮ್ಸ್' ಚಿತ್ರಕ್ಕೆ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ಖ್ಯಾತ ನಟ

  |

  ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಜೇಮ್ಸ್ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ 2ನೇ ಲಾಕ್ ಡೌನ್ ಮುಗಿಸಿ ಚಿತ್ರತಂಡ ಜುಲೈ 5 ರಿಂದ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿದೆ.

  ಸದ್ಯ 'ಜೇಮ್ಸ್' ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ 'ಜೇಮ್ಸ್' ಸಿನಿಮಾ ಮೂಡಿಬರುತ್ತಿದೆ. ಸದ್ಯ ಚಿತ್ರದ ಟಾಕಿ ಭಾಗ ಮತ್ತು ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. 'ಜೇಮ್ಸ್' ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಈ ನಡುವೆ ಚಿತ್ರಕ್ಕೆ ಮತ್ತೋರ್ವ ಖ್ಯಾತ ನಟನ ಎಂಟ್ರಿಯಾಗಿದೆ. ಇತ್ತೀಚಿಗಷ್ಟೆ ಬಿಗ್‌ಬಾಸ್ ವಿನ್ನರ್ ಶೈನ್ ಶೆಟ್ಟಿ ಮತ್ತು ಹಿಂದಿ ಕಿರುತೆರೆಯ ಖ್ಯಾತ ನಟ ಕೇತನ್ ಕರಾಂಡೆ ಜೇಮ್ಸ್ ತಂಡ ಸೇರಿದ್ದರು. ಇದರ ಬೆನ್ನಲ್ಲೇ ಈಗ ಮತ್ತೊಬ್ಬ ನಟನ ಎಂಟ್ರಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

  'ಜೇಮ್ಸ್' ಚಿತ್ರಕ್ಕೆ ರಾಮ್-ಲಕ್ಷ್ಮಣ್ ಎಂಟ್ರಿ, ಶ್ರೀಮುರಳಿ ಸೆಲ್ಫಿ ವೈರಲ್'ಜೇಮ್ಸ್' ಚಿತ್ರಕ್ಕೆ ರಾಮ್-ಲಕ್ಷ್ಮಣ್ ಎಂಟ್ರಿ, ಶ್ರೀಮುರಳಿ ಸೆಲ್ಫಿ ವೈರಲ್

  ಅಂದಹಾಗೆ ಆ ನಟ ಮತ್ಯಾರು ಅಲ್ಲ ತಮಿಳಿನ ಸ್ಟಾರ್ ನಟ ಶರತ್ ಕುಮಾರ್.

  ಪವರ್ ಸ್ಟಾರ್ 'ಜೇಮ್ಸ್' ಸಿನಿಮಾದಲ್ಲಿ ಶರತ್ ಕುಮಾರ್ ನಟಿಸುತ್ತಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಶರತ್ ನೆಗಟಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಶರತ್ ಮೊದಲ ಬಾರಿಗೆ ಕನ್ನಡದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಪುನೀತ್ ಎದುರು ತೊಡೆತಟ್ಟಿದ್ದಾರೆ. ಈಗಾಗಲೇ ಶರತ್ ಚಿತ್ರಕ್ಕಾಗಿ ಎಲ್ಲಾ ತಯಾರಿ ನಡೆಸಿದ್ದು, ಇಂದೇ 'ಜೇಮ್ಸ್' ತಂಡ ಸೇರಿಕೊಳ್ಳಲಿದ್ದಾರೆ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಶರತ್ ಕುಮಾರ್ ಒಟ್ಟಿಗೆ ನಟಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸೂಪರ್ ಹಿಟ್ 'ರಾಜಕುಮಾರ' ಸಿನಿಮಾದಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು. ಇದೀಗ ಮತ್ತೆ 'ಜೇಮ್ಸ್' ಮೂಲಕ ಮತ್ತೆ ಒಟ್ಟಿಗೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅಂದಹಾಗೆ 'ರಾಜಕುಮಾರ' ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದ ಪ್ರಿಯಾ ಆನಂದ್ ಕೂಡ ಮತ್ತೆ 'ಜೇಮ್ಸ್' ಮೂಲಕ ಪುನೀತ್ ಜೊತೆ ನಟಿಸುತ್ತಿದ್ದಾರೆ. ಈ ಮೂಲಕ ರಾಜಕುಮಾರ ಚಿತ್ರದ ಕಾಂಬಿನೇಷನ್ ಪುನೀತ್, ಪ್ರೀಯಾ ಮತ್ತು ಶರತ್ ಕುಮಾರ್ ಜೇಮ್ಸ್ ಮೂಲಕವೂ ಮೋಡಿ ಮಾಡಲಿದೆ.

  ಇನ್ನು ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ರಂಗಾಯಣ ರಘು, ಅನು ಪ್ರಭಾಕರ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಇತ್ತೀಚಿಗೆಷ್ಟೆ ಎಲ್ಲರೂ ಒಟ್ಟಿಗೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಫೋಟೋದಲ್ಲಿ ಪವರ್ ಸ್ಟಾರ್ ಜೊತೆ ಕಾಮಿಡಿ ಸ್ಟಾರ್ ಚಿಕ್ಕಣ್ಣ, ನಟ ಹರ್ಷ, ರಂಗಾಯಣ ರಘು, ಶೈನ್ ಶೆಟ್ಟಿ, ಕಾವ್ಯ ಶಾಸ್ತ್ರಿ, ನಯನಾ ಎಲ್ಲರೂ ನಗುತ್ತಾ ಪುನೀತ್ ಜೊತೆ ಫೋಟೋಗೆ ಪೋಸ್ ನೀಡಿದ್ದರು.

  ಜೇಮ್ಸ್ ಸಿನಿಮಾದಲ್ಲಿ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಿದ್ದು, ದಕ್ಷಿಣ ಭಾರತದ ಖ್ಯಾತ ಸ್ಟಂಟ್ ಮಾಸ್ಟರ್‌ಗಳಾದ ರಾಮ್ ಮತ್ತು ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಜೇಮ್ಸ್ ಸದ್ಯದಲ್ಲೇ ಚಿತ್ರೀಕರಣ ಮುಗಿಸಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿದೆ. ಅಂದಹಾಗೆ ಪವರ್ ಸ್ಟಾರ್ ಈ ಸಿನಿಮಾ ಮುಗಿಸುತ್ತಿದ್ದಂತೆ 'ದ್ವಿತ್ವ' ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.

  ಲೂಸಿಯ ಖ್ಯಾತಿಯ ಪವನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ದ್ವಿತ್ವ ಸಿನಿಮಾ ಈಗಾಗಲೇ ಟೈಟಲ್ ಮತ್ತು ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿದೆ. ಇತ್ತೀಚಿಗಷ್ಟೆ ದ್ವಿತ್ವ ಸಿನಿಮಾಗೆ ನಾಯಕಿ ಕೂಡ ಫಿಕ್ಸ್ ಮಾಡಿದೆ ಸಿನಿಮಾ. ತಮಿಳಿನ ಖ್ಯಾತ ನಟಿ ತ್ರಿಷಾ ಕೃಷ್ಣ ಪವರ್ ಸ್ಟಾರ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಪವರ್ ಸ್ಟಾರ್ ಸಿನಿಮಾದಲ್ಲಿ ನಟಿಸಿದ್ದ ತ್ರಿಷಾ ಇದೀಗ 2ನೇ ಬಾರಿ ಕನ್ನಡಕ್ಕೆ ಬರ್ತಿದ್ದಾರೆ.

  English summary
  Tamil Actor Sarath Kumar to act as villain in Puneeth Rajkumar strrer James Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X