»   » ತಮಿಳು ನಿರ್ದೇಶಕನ ಮುಂದಿನ ಚಿತ್ರಕ್ಕೆ ಪುನೀತ್ ನಾಯಕ.!

ತಮಿಳು ನಿರ್ದೇಶಕನ ಮುಂದಿನ ಚಿತ್ರಕ್ಕೆ ಪುನೀತ್ ನಾಯಕ.!

Posted By:
Subscribe to Filmibeat Kannada

'ಅಂಜನಿಪುತ್ರ' ಚಿತ್ರದ ನಂತರ ಪುನೀತ್ ರಾಜ್ ಕುಮಾರ್ ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂಬುದರ ಬಗ್ಗೆ ಗಾಂಧಿನಗರದಲ್ಲಿ ಚರ್ಚೆಯಾಗುತ್ತಲೇ ಇದೆ. ಆದ್ರೆ, ಸೈಲಾಂಟ್ ಆಗಿ ಅಪ್ಪು ತಮ್ಮ ಮುಂದಿನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

ಹೌದು, ಕಳೆದ ಕೆಲವು ತಿಂಗಳುಗಳಿಂದ ಪವರ್ ಸ್ಟಾರ್ ಚಿತ್ರವನ್ನ ತಮಿಳು ನಿರ್ದೇಶಕ ವೆಟ್ರಿಮಾರನ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಲೇ ಇತ್ತು. ಈಗ ಈ ಸುದ್ದಿ ಬಹುತೇಕ ಖಚಿತವಾಗಿದೆಯಂತೆ.

ಇನ್ನು 11 ವರ್ಷಗಳ ನಂತರ ರಾಕ್ ಲೈನ್ ವೆಂಕಟೇಶ್ ಮತ್ತು ಪುನೀತ್ ರಾಜ್ ಕುಮಾರ್ ಒಂದಾಗುತ್ತಿರುವುದು ಈ ಚಿತ್ರದ ಮತ್ತೊಂದು ಸ್ಪೆಷಾಲಿಟಿ ಅಂತೆ. ಈ ಚಿತ್ರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಮುಂದೆ ಓದಿ......

ವೆಟ್ರಿಮಾರನ್ ನಿರ್ದೇಶನದಲ್ಲಿ ಅಪ್ಪು

ತಮಿಳಿನ ಸಕ್ಸಸ್ ಪುಲ್ ನಿರ್ದೇಶಕ ವೆಟ್ರಿಮಾರನ್ ಕನ್ನಡದಲ್ಲಿ ಸಿನಿಮಾ ಮಾಡಲಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಲು ಸಿದ್ದತೆ ನಡೆಸಿಕೊಳ್ಳುತ್ತಿದ್ದಾರೆ. ಈ ಮೂಲಕ 'ಅಂಜನಿಪುತ್ರ' ಚಿತ್ರದ ನಂತರ ಪುನೀತ್ ಮುಂದಿನ ಸಿನಿಮಾ ವೆಟ್ರಿ ಮಾರನ್ ಜೊತೆಯಲ್ಲಿ ಎನ್ನುವುದು ಬಹುತೇಕ ಖಚಿತ.

ಮತ್ತೊಂದು ತಮಿಳು ರಿಮೇಕ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್?

ರಿಮೇಕ್ ಸಿನಿಮಾ ಸಾಧ್ಯತೆ

ತಮಿಳು ನಿರ್ದೇಶಕ ವೆಟ್ರಿಮಾರನ್ ಹಾಗೂ ಪುನೀತ್ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಚಿತ್ರ ರೀಮೇಕ್ ಎನ್ನಲಾಗುತ್ತಿದೆ. ತಮಿಳಿನ 'ವಿಸಾರಣೈ' ಚಿತ್ರವನ್ನು ನಿರ್ದೇಶಕ ವೆಟ್ರಿಮಾರನ್ ಅವರು ಕನ್ನಡಕ್ಕೆ ತರಲಿದ್ದು, ಈ ಚಿತ್ರದಲ್ಲಿ ಪುನೀತ್ ನಟಿಸಲಿದ್ದಾರಂತೆ.

ಪರಭಾಷೆ ನಿರ್ದೇಶಕರ ಪ್ರೀತಿಗೆ ಪಾತ್ರರಾದ 'ಪವರ್ ಸ್ಟಾರ್' ಪುನೀತ್

ನಿರ್ದೇಶಕ ವೆಟ್ರಿಮಾರನ್ ಬಗ್ಗೆ

ವೆಟ್ರಿಮಾರನ್ ತಮಿಳಿನ ಯಶಸ್ವಿ ನಿರ್ದೇಶಕರಲ್ಲಿ ಒಬ್ಬ. ಧನುಶ್ ಅಭಿನಯದ 'ಪೊಲ್ಲಾದವನ್', 'ಆಡುಕುಲಂ', 'ವಿಸಾರಣೈ', ಹಾಗೂ 'ವಡಾ ಚೆನ್ನೈ' ಅಂತಹ ಚಿತ್ರಗಳನ್ನ ನಿರ್ದೇಶನ ಮಾಡಿರುವ ವೆಟ್ರಿಮಾರನ್ ಕೆಲವು ಚಿತ್ರಗಳನ್ನ ನಿರ್ಮಾಣ ಕೂಡ ಮಾಡಿದ್ದಾರೆ. ವೆಟ್ರಿಮಾರನ್ ನಿರ್ದೇಶನದ 'ಆಡುಕುಲಂ' ಹಾಗೂ 'ವಿಸಾರಣೈ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ವಿಶೇಷ.

ರಾಕ್ ಲೈನ್ ಪ್ರೊಡಕ್ಷನ್

ಅಂದ್ಹಾಗೆ, ವೆಟ್ರಿಮಾರನ್ ಮತ್ತು ಪುನೀತ್ ಚಿತ್ರವನ್ನ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರಂತೆ. ಈಗಾಗಲೇ 'ವಿಸಾರಣೈ' ರೀಮೇಕ್ ಚಿತ್ರದ ಹಕ್ಕು ಖರೀದಿಸಿದ್ದಾರೆ. ಈ ಮೂಲಕ 11 ವರ್ಷದ ನಂತರ ಪುನೀತ್ ಸಿನಿಮಾ ನಿರ್ಮಾಣ ಮಾಡಲಿದ್ದಾರಂತೆ. ಈ ಹಿಂದೆ 'ಮೌರ್ಯ' ಹಾಗೂ 'ಅಜಯ್' ಚಿತ್ರಗಳನ್ನ ರಾಕ್ ಲೈನ್ ನಿರ್ಮಾಣ ಮಾಡಿದ್ದರು.

ಯಾವಾಗ ಶುರು

ಸದ್ಯ, ಹರ್ಷ ನಿರ್ದೇಶನದ 'ಅಂಜನಿಪುತ್ರ' ಚಿತ್ರದಲ್ಲಿ ಬ್ಯುಸಿಯಾಗಿರುವ ಪುನೀತ್ ಅದಾದ ನಂತರ ವೆಟ್ರಿಮಾರನ್ ಸಿನಿಮಾವನ್ನ ಶುರು ಮಾಡಲಿದ್ದಾರೆ. ಈಗಾಗಲೇ ಎರಡು ಬಾರಿ ಚರ್ಚೆ ನಡೆಸಿರುವ ಚಿತ್ರತಂಡ ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭಿಸಲಿದೆಯಂತೆ.

English summary
If all goes as planned, the film with Vetrimaaran will start as and when Puneeth completes shooting for Harsha’s Anjaniptura. The project that marks Vetrimaran’s debut in Kannada will also have Rockline Venkatesh and Puneeth Rajkumar working together after 11 years

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada